Ad Widget .

17ನೇ ಆವೃತ್ತಿ ಐಪಿಎಲ್/ ಕುತೂಹಲ ಹುಟ್ಟು ಹಾಕಿದ ಧೋನಿ ಫೇಸ್‍ಬುಕ್ ಪೋಸ್ಟ್

ಸಮಗ್ರ ನ್ಯೂಸ್: 17ನೇ ಆವೃತ್ತಿ ಐಪಿಎಲ್‍ಗೆ ದಿನಗಣನೆ ಆರಂಭವಾಗಿರುವಾಗಲೇ ಚೆನ್ನೈ ತಂಡದ ನಾಯಕ ಎಂ.ಎಸ್.ಧೋನಿ ಫೇಸ್‍ಬುಕ್‍ನಲ್ಲಿ ಮಾಡಿರುವ ಪೋಸ್ಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಾಮಾಜಿಕ ತಾಣಗಳಿಂದ ದೂರ ಉಳಿದಿರುವ ಧೋನಿ, ಹೊಸ ಸೀಸನ್ ಮತ್ತು ಹೊಸ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.

Ad Widget . Ad Widget .

ಐಪಿಎಲ್ ಅಥವಾ ಬೇರೆ ಯಾವುದರ ಬಗ್ಗೆಯೂ ಉಲ್ಲೇಖಿಸದ ಕಾರಣ ಅಭಿಮಾನಿಗಳಲ್ಲಿ ಪೋಸ್ಟ್ ಬಗ್ಗೆ ಕುತೂಹಲ ಹೆಚ್ಚಿಸಿದೆ. ಕಳೆದ ಆವೃತ್ತಿಯ ಬಳಿಕವೇ ಅವರು ನಿವೃತ್ತಿಯಾಗುತ್ತಾರೆ ಎಂದು ಹೇಳಲಾಗಿತ್ತು.

Ad Widget . Ad Widget .

ಆದರೆ ಚೆನ್ನೈ 5ನೇ ಬಾರಿ ಚಾಂಪಿಯನ್ ಆಗಿತ್ತು. ಗೆಲುವಿನ ಖುಷಿಯಲ್ಲಿ ತಾನು ಅಭಿಮಾನಿಗಳಿಗೆ ಮತ್ತೊಂದು ಆವೃತ್ತಿ ಆಡುತ್ತೇನೆ ಎಂದು ಹೇಳಿದ್ದರು. ಈಗ 2024ರ ಐಪಿಎಲ್ ಆರಂಭಕ್ಕೆ ಮುನ್ನ ಫೇಸ್‍ಬುಕ್ ಪೋಸ್ಟ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದ್ದಾರೆ.

Leave a Comment

Your email address will not be published. Required fields are marked *