Ad Widget .

ಪ್ರತಿಪಕ್ಷ ಸದಸ್ಯರು ಸಭಾತ್ಯಾಗ/ ಸದನದ ಒಳಗಿನಿಂದ ಬೀಗ ಹಾಕಿ ಎಂದು ಸ್ಪೀಕರ್‍ಗೆ ಬೀಗ- ಕೀಲಿ ನೀಡಿದ ಪಂಜಾಬ್ ಮುಖ್ಯಮಂತ್ರಿ

ಸಮಗ್ರ ನ್ಯೂಸ್: ಸದನದಲ್ಲಿ ಚರ್ಚೆ ನಡೆಯುವಾಗ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿಬಿಡುತ್ತಾರೆ. ಹೀಗಾಗಿ ಯಾರೂ ಹೊರಗೆ ಹೋಗದಂತೆ ಸದನದ ಒಳಗಿನಿಂದ ಬೀಗ ಹಾಕಿ ಎಂದು ಸ್ಪೀಕರ್ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಬೀಗ- ಕೀಲಿ ನೀಡಿದ ಘಟನೆ ನಡೆದಿದೆ.

Ad Widget . Ad Widget .

ಮಾ.1ರಂದು ಪಂಜಾಬ್ ವಿಧಾನಸಭೆಯನ್ನು ಉದ್ದೇಶಿಸಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಭಾಷಣ ಮಾಡುವ ವೇಳೆ ಕಾಂಗ್ರೆಸ್ ಸದಸ್ಯರು, ರಾಜ್ಯಪಾಲರು ಪೂರ್ಣವಾಗಿ ಭಾಷಣ ಓದದೆ ಮಂಡಿಸಲಾಗಿದೆ ಎಂದು ಪ್ರತಿಭಟನೆ ನಡೆಸಿದ್ದರು. ವಿಪಕ್ಷಗಳ ಈ ವರ್ತನೆ ಬಗ್ಗೆ ಚರ್ಚೆ ಆಗಬೇಕು ಎಂದು ಮುಖ್ಯಮಂತ್ರಿ ಸೋಮವಾರ ಆಗ್ರಹಿಸಿದರು.

Ad Widget . Ad Widget .

ಇದಕ್ಕೆ ಮನ್ನಣೆ ನೀಡಿದ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರು, ಸದನದ ಆರಂಭದಲ್ಲಿ ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆಯನ್ನು ರದ್ದುಗೊಳಿಸಿ ಚರ್ಚೆಗೆ ಅವಕಾಶ ಮಾಡಿಕೊಡುವ ಮೂಲಕ ಸಂಪ್ರದಾಯ ಉಲ್ಲಂಘಿಸಿದರು. ಈ ವೇಳೆ ಸ್ಪೀಕರ್ ಅವರಿಗೆ ಲಕೋಟೆಯಲ್ಲಿ ಬೀಗ ಹಾಗೂ ಕೀಲಿಯನ್ನು ಹಸ್ತಾಂತರಿಸಿದ ಭಗವಂತ ಮಾನ್, ಚರ್ಚೆ ಆರಂಭವಾದರೆ ವಿಪಕ್ಷಗಳು ಸಭಾತ್ಯಾಗ ಮಾಡಿಬಿಡುತ್ತವೆ. ಅವರು ಹೊರಹೋಗದಂತೆ ಬೀಗ ಜಡಿಯಿರಿ ಎಂದು ಮನವಿ ಮಾಡಿದರು. ಇದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿ ಕೋಲಾಹಲ ಉಂಟಾಯಿತು.

ಬಳಿಕ ಸ್ಪೀಕರ್ ಕಲಾಪವನ್ನು ಮುಂದೂಡಿದರು. ಇದಾದ ಬಳಿಕವೂ ಆಪ್ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

Leave a Comment

Your email address will not be published. Required fields are marked *