Ad Widget .

ಅಟ್ಟಾಡಿಸಿಕೊಂಡು ಬಂದ ಆನೆ… ರೈತನೊಬ್ಬ ಗ್ರೇಟ್ ಎಸ್ಕೇಪ್

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯಲ್ಲಿ ಒಂಟಿ ಸಲಗಗಳ ಹಾವಳಿ ಹೆಚ್ಚಾಗಿದ್ದು, ಹಾಡ ಹಗಲೇ ರೈತರ ಕೃಷಿ ಜಮೀನಿನ ಬಳಿ ಒಂಟಿ ಸಲಗ ಭೀಮನ ಸಂಚಾರ ಹೆಚ್ಚಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ಈ ಭಯಾನಕ ಘಟನೆಯೊಂದು ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ್ದು ಕೂದಲೆಳೆ ಅಂತರದಲ್ಲಿ ಕೂಲಿ ಕಾರ್ಮಿಕ ಪಾರಾಗಿದ್ದಾನೆ.

Ad Widget . Ad Widget .

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಮರ್ಕಹಳ್ಳಿಯಲ್ಲಿ ಒಂಟಿ ಸಲಗ ಸಂಚಾರ ಮಾಡುತ್ತಿದೆ. ಕೃಷಿ ಚಟುವಟಿಕೆಗೆ ಹಾಗು ಜಾನುವಾರು ಮೇಯಿಸಲು ಹೋದವರಿಗೆ ಜೀವ ಭಯ ಕಾಡುತ್ತಿದೆ. ಭತ್ತದ ಗದ್ದೆ, ಕಾಫಿತೋಟ, ಗ್ರಾಮಗಳ ಒಳಗೇ ಒಂಟಿ ಸಲಗ ಓಡಾಡುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಜನರಲ್ಲಿ ಆತಂಕ ಸೃಷ್ಟಿ ಮಾಡಿರೊ ಕಾಡಾನೆಗಳ ಸ್ಥಳಾಂತರಕ್ಕೆ ಜನರು ಆಗ್ರಹಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *