Ad Widget .

ಶಿವಮೊಗ್ಗದಲ್ಲಿ ಉದ್ಯೋಗವಕಾಶ! ಬೇಗ ಅರ್ಜಿ ಹಾಕಿ

ಸಮಗ್ರ ಉದ್ಯೋಗ: ಜಿಲ್ಲಾ ಸೈನಿಕ ಪುನರ್ವಸತಿ ಇಲಾಖೆ ಕಛೇರಿಯಲ್ಲಿ ಲಿಪಿಕ ಕಂ ಚಾಲಕ ಹುದ್ದೆಗೆ ಅನುಭವುಳ್ಳ ಮಾಜಿ ಸೈನಿಕರನ್ನು ಹೊರಗುತ್ತಿಗೆಯ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಿದೆ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಅರ್ಜಿದಾರರು ಸೇನೆಯಲ್ಲಿ ವಾಹನ ಪರವಾನಿಗೆ ಪಡೆದಿರುವ ಮತ್ತು ಸೇನಾ ವಾಹನ ಚಲಾಯಿಸಿದ ಚಾಲಕ ಪ್ರವೃತ್ತಯುಳ್ಳವರಾಗಿರಬೇಕಿದೆ. ಜೊತೆಗೆ ಸರ್ಕಾರದ ಮೋಟಾರು ಕಾಯಿದೆಯಡಿಯಲ್ಲಿ ದಿನಾಂಕ 01-03-2022 ರ ಮೊದಲು ಪಡೆದ ಲಘು ಮೋಟಾರು ವಾಹನದ ಪರವಾನಿಗೆ ಹೊಂದಿರಬೇಕಿದೆ.

Ad Widget . Ad Widget .

ಸೈನ್ಯದಲ್ಲಿ ದುರ್ನಡತೆ ಸಲುವಾಗಿ ಯಾವುದೇ ವೈದ್ಯಕೀಯ ಕಾರಣಗಳಿಂದ ಸೈನ್ಯದಿಂದ ಬಿಡುಗಡೆಗೊಂಡಿರಬಾರದು ಎಂದು ನಿಯಮ ರೂಪಿಸಲಾಗಿದೆ.

Ad Widget . Ad Widget .

ಕೊನೆಯ ದಿನಾಂಕ ಇಲ್ಲಿದೆ
ಆಸಕ್ತರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಕಛೇರಿಗೆ ಸ್ವಯಂ ಲಿಖಿತ ಅರ್ಜಿ ಮತ್ತು ಸ್ವವಿವರದೊಂದಿಗೆ ಮಾರ್ಚ್ 11 ರೊಳಗಾಗಿ ಕಛೇರಿಯ ವೇಳೆಯಲ್ಲಿ ಅರ್ಜಿ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕ ಡಾ. ಸಿ.ಎ.ಹಿರೇಮಠ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಛೇರಿಯ ದೂರವಾಣಿ ಸಂಖ್ಯೆ 08182-2200925 ಯನ್ನು ಕಛೇರಿಯ ವೇಳೆಯಲ್ಲಿ ಅಥವಾ ಇಮೇಲ್ [email protected] ಮುಖಾಂತರ ಸಂಪರ್ಕಿಸಬಹುದಾಗಿದೆ.

Leave a Comment

Your email address will not be published. Required fields are marked *