Ad Widget .

ರೈಲ್ವೆ ಇಲಾಖೆಯಲ್ಲಿ ​ಈ ಹುದ್ದೆಗಳು ಖಾಲಿ ಇವೆ, ಬೇಗ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ರೈಲ್ ವ್ಹೀಲ್ ಫ್ಯಾಕ್ಟರಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 192 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಮಾರ್ಚ್​ 22, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Ad Widget . Ad Widget .

ಹುದ್ದೆಯ ಮಾಹಿತಿ:
ಫಿಟ್ಟರ್- 85
ಮೆಷಿನಿಸ್ಟ್- 31
ಮೆಕ್ಯಾನಿಕ್ (ಮೋಟಾರ್ ವೆಹಿಕಲ್)- 8
ಟರ್ನರ್-5
CNC ಪ್ರೋಗ್ರಾಮಿಂಗ್ & ಆಪರೇಟರ್- 23
ಎಲೆಕ್ಟ್ರಿಷಿಯನ್- 18
ಎಲೆಕ್ಟ್ರಾನಿಕ್ ಮೆಕ್ಯಾನಿಕ್- 22

Ad Widget . Ad Widget .

ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 23, 2024ಕ್ಕೆ ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ

ಆಯ್ಕೆ ಪ್ರಕ್ರಿಯೆ:
ಮೆರಿಟ್​ ಲಿಸ್ಟ್

ವೇತನ:
ಫಿಟ್ಟರ್- ಮಾಸಿಕ ₹ 12,261
ಮೆಕ್ಯಾನಿಸ್ಟ್​- ಮಾಸಿಕ ₹ 12,261
ಮೆಕ್ಯಾನಿಕ್ (ಮೋಟಾರ್ ವೆಹಿಕಲ್)- ಮಾಸಿಕ ₹ 12,261
ಟರ್ನರ್- ಮಾಸಿಕ ₹ 12,261
ಸಿಎನ್​ಸಿ ಪ್ರೋಗ್ರಾಮಿಂಗ್ & ಆಪರೇಟರ್- ಮಾಸಿಕ ₹ 10,899
ಎಲೆಕ್ಟ್ರಿಷಿಯನ್- ಮಾಸಿಕ ₹ 12,261
ಎಲೆಕ್ಟ್ರಾನಿಕ್ ಮೆಕ್ಯಾನಿಕ್- ಮಾಸಿಕ ₹ 12,261

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಅಸಿಸ್ಟೆಂಟ್ ಪರ್ಸನಲ್ ಆಫೀಸರ್
ಪರ್ಸನಲ್ ಡಿಪಾರ್ಟ್​ಮೆಂಟ್
ರೈಲ್​ ವ್ಹೀಲ್​ ಫ್ಯಾಕ್ಟರಿ
ಯಲಹಂಕ
ಬೆಂಗಳೂರು- 560064

ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿದ್ರೆ ಇದೊಂದು ಗೋಲ್ಡನ್ ಚಾನ್ಸ್​ ಆಗಿದೆ.

Leave a Comment

Your email address will not be published. Required fields are marked *