Ad Widget .

ಬೆಂಗಳೂರು ಬ್ಲಾಸ್ಟ್ ಹಿನ್ನಲೆ| ದೇಶಾದ್ಯಂತ ಎನ್ಐಎ ದಾಳಿ; ಐವರು ಅರೆಸ್ಟ್

ಸಮಗ್ರ ನ್ಯೂಸ್: ಬೆಂಗಳೂರಿನ ಸುಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಈಗ ಎನ್‌ಐಎ ದೇಶದಾದ್ಯಂತ ಏಕಕಾಲದಲ್ಲಿ ದಾಳಿ ನಡೆಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕರ್ನಾಟಕ ಸೇರಿ ಒಟ್ಟು 7 ರಾಜ್ಯಗಳಲ್ಲಿ 17 ಕಡೆ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು ಚೆನ್ನೈನಲ್ಲಿ ಐವರನ್ನು ವಶಕ್ಕೆ ಪಡೆದಿದ್ದು, ಹಲವೆಡೆ ಮಹತ್ವದ ದಾಖಲೆ ಕಲೆಹಾಕಿದ್ದಾರೆ ಎಂದು ತಿಳಿದುಬಂದಿದೆ.

Ad Widget . Ad Widget . Ad Widget .

ಜೈಲಿನಲ್ಲಿ ಸಹ ಖೈದಿಗಳನ್ನು ಮನಪರಿವರ್ತನೆ ಪ್ರಕರಣ ಸಂಬಂಧ ದೇಶದಾದ್ಯಂತ ಪ್ರಮುಖ ಜೈಲುಗಳ ಮೇಲೆ ಎನ್ ಐ ಎ ದಾಳಿ ಮಾಡಿದ್ದು, ಬೆಂಗಳೂರಿನ ಸುಲ್ತಾನ್ ಪಾಳ್ಯ ಸೇರಿ ಹಲವೆಡೆ ದಾಳಿ ಮಾಡಿದ್ದಾರೆ.

ಉಗ್ರ ಟಿ.ನಸೀರ್ ಹಾಗೂ ಜುನೈದ್ ಇಬ್ಬರೂ ಸೇರಿ ಯುವಕರನ್ನ ಉಗ್ರಕೃತ್ಯಗಳಲ್ಲಿ ಭಾಗಿಯಾಗುವಂತೆ ತರಭೇತಿ ನೀಡುತ್ತಿದ್ದರು. ಈ ಬಗ್ಗೆ ದಾಳಿ ನಡೆಸಿದ್ದ ಸಿಸಿಬಿ ಐವರನ್ನ ಅರೆಸ್ಟ್ ಮಾಡಿ, ಗ್ರನೈಡ್ ವಶಕ್ಕೆ ಪಡೆದಿದ್ದರು. ಮಾತ್ರವಲ್ಲ ಪಿಸ್ತೂಲ್ ಸೇರಿ ಹಲವಾರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಮುಂದಿನ ತನಿಖೆಗಾಗಿ ಕೇಸ್ ಅನ್ನು ಎನ್ ಐಎಗೆ ಕೇಂದ್ರ ಸರ್ಕಾರ ವರ್ಗಾವಣೆ ಮಾಡಿತ್ತು. ಈ ಪ್ರಕರಣದಲ್ಲಿ ಘೋಷಿತ ಉಗ್ರ ಟಿ ನಾಜಿರ್ ಸೇರಿ ಐವರನ್ನು ಅರೆಸ್ಟ್ ಮಾಡಲಾಗಿತ್ತು. ಮಾತ್ರವಲ್ಲ ಉಗ್ರ ಟಿ.ನಾಸೀರ್ ನಿಂದ ಜೈಲಿನಲ್ಲಿ ಕೂಡ ಖೈದಿಗಳಿಗೆ ಕೂಡ ತರಭೇತಿ ನೀಡುತ್ತಿದ್ದಾನೆಂಬ ವಿಚಾರವಾಗಿ ಟಿ.ನಸೀರ್ ನಿಂದ ತರಬೇತಿ ಪಡೆದವರಿಗೂ ರಾಮೇಶ್ವರಂ ಕೆಫೆ ಬ್ಲಾಸ್ಟ್ ಗೂ ಸಂಬಂಧ ಇರುವ ಶಂಕೆ ಮೇಲೆ ದೇಶದಾದ್ಯಂತ ಪ್ರಮುಖ ಜೈಲುಗಳ ಮೇಲೆ ಎನ್‌ಐಎ ದಾಳಿ ನಡೆದಿದೆ.

Leave a Comment

Your email address will not be published. Required fields are marked *