Ad Widget .

ವೃದ್ಧ ದಂಪತಿಯ ಮೇಲೆ ಚರ್ಚ್ ಧರ್ಮಗುರುವೊಬ್ಬರಿಂದ ಹಲ್ಲೆ

ಸಮಗ್ರ ನ್ಯೂಸ್: ವೃದ್ಧ ದಂಪತಿಯ ಮೇಲೆ ಕ್ರೈಸ್ತರ ಚರ್ಚ್ ಧರ್ಮಗುರುವೊಬ್ಬರು ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ವಿಡಿಯೋವು ಎಲ್ಲೆಡೆ ವೈರಲ್ ಆಗುತ್ತಿದೆ.

Ad Widget . Ad Widget .

ಈ ಘಟನೆ ನಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದ ಎರ್ಮೆತ್ತಡ್ಕ ಎಂಬಲ್ಲಿ. ಮನೆಲ ಚರ್ಚ್ ನ ಧರ್ಮಗುರು ಫಾದರ್​ ನೆಲ್ಸನ್ ಓಲಿವೆರಾ ಹಲ್ಲೆ ನಡೆಸಿದ ಪಾದ್ರಿ ಎಂದು ತಿಳಿದುಬಂದಿದೆ. ಗ್ರೆಗರಿ ಮೊಂತೆರೋ (79) ಮತ್ತು ಅವರ ಪತ್ನಿ ಫಿಲೋಮಿನಾ(72) ಹಲ್ಲೆಗೊಳಗಾದ ವೃದ್ಧ ದಂಪತಿ. ಸದರಿ ಪಾದ್ರಿ ಆ ವೃದ್ಧರನ್ನು ಕಾಲಿನಿಂದ ಒದೆಯುತ್ತಿರುವ, ಕತ್ತಿನ ಪಟ್ಟಿ ಹಿಡಿದು ಎಳೆದಾಡುತ್ತಿರುವ ದೃಶ್ಯಗಳು ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Ad Widget . Ad Widget .

ಮನೆ ಶುದ್ದಗೊಳಿಸುವ ನಿಮಿತ್ತ ಫಾದರ್ ನೆಲ್ಸನ್ ಓಲಿವೆರಾ ಅವರು ಗ್ರೆಗರಿ ಮೊಂತೆರೋ ಮನೆಗೆ ಭೇಟಿ ನೀಡಿದ್ದರಂತೆ. ಆ ವೇಳೆ ದಂಪತಿ ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದಿರುವ ಬಗ್ಗೆ ಚರ್ಚೆಯಾಗಿದೆ. ಮಾತಿಗೆ ಮಾತು ಬೆಳೆದು ವೃದ್ಧ ದಂಪತಿಯನ್ನು ಎಳೆತಂದು ಫಾದರ್ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment

Your email address will not be published. Required fields are marked *