Ad Widget .

ಹೆತ್ತ ತಾಯಿಯಿಂದಲೆ ಮಗುವಿನ ಮೇಲೆ ಹಲ್ಲೆ.. ಕಟುಕಿ ತಾಯಿಯನ್ನು ವಶಕ್ಕೆ ಪಡೆದ ಪೊಲೀಸರು

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಮನಕಲಕುವ ಘಟನೆಯೊಂದು ನಡೆದು ಹೋಗಿದೆ. ಹೌದು ತಾಯಿಯಾದವಳು ಎಳೆ ವಯಸ್ಸಿನ ಮಗುವನ್ನು ಲಾಲನೆ ಪಾಲನೆ ಮಾಡುವುದನ್ನು ಬಿಟ್ಟು ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಹೊಡೆದು ಬಡಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವೀರಭದ್ರ ನಗರದಲ್ಲಿ ನಡೆದಿದೆ.

Ad Widget . Ad Widget .

ಗಂಡನಿಂದ ವಿಚ್ಛೇದನೆ ಪಡೆದುಕೊಂಡಿರುವ ಸ್ಟ್ಯಾಲಿನ್ ಎನ್ನುವ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಎರಡ್ಮೂರು ವರ್ಷದ ಮಗುವಿನ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗುವಿನ ಮೈತುಂಬ ಗಾಯಗಳಾಗಿವೆ. 2-3 ವರ್ಷದ ಮಗುವು ತೊದಲನುಡಿಯಲ್ಲೇ ತನಗೆ ಹೇಗೆಲ್ಲ ಹೊಡೆದು ಹಿಂಸೆ ಕೊಟ್ಟರು ಎಂಬುದನ್ನು ತಿಳಿಸಿದೆ. ಆ ಪುಟ್ಟ ಕಂದಮ್ಮನ ಮಾತು ಕೇಳಿದ್ರೆ ಕರುಳು ಕಿತ್ತು ಬರುತ್ತದೆ.

Ad Widget . Ad Widget .

ಮನೆಗೆ ಬಂದ ಅಂಕಲ್‌ವೊಬ್ಬರ್‌ ಕುಕ್ಕರ್‌ನಿಂದ ತಲೆಗೆ ಹೊಡೆದರಂತೆ. ಅಮ್ಮ ಕೂಡ ನೀನು ಬೇಡ ಮನೆ ಬಿಟ್ಟು ಹೋಗು ಎಂದು ಕಾಲಲ್ಲಿ ಒದ್ದರಂತೆ. ಇದೆಲ್ಲವನ್ನೂ ಮಗುವು ಸ್ಥಳೀಯರೊಬ್ಬರ ಬಳಿ ಹೇಳಿಕೊಂಡಿದೆ. ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಹೋದರೆ ರಾತ್ರಿ ಬರುವವರೆಗೂ ಬಾಗಿಲು ತೆಗೆಯದೆ ಕೂಡಿಹಾಕುತ್ತಾಳೆ.

ಈ ವಿಷಯ ತಿಳಿಯುತ್ತಿದ್ದಂತೆ ಸಂಘಟನೆಯೊಂದು ಮಗುವಿನ ರಕ್ಷಣೆಗೆ ಬಂದಿದೆ. ಪಾಪಿ ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯರೆಲ್ಲ ಸೇರಿ ಕ್ರೂರಿ ತಾಯಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮನೆಯಲ್ಲಿ ಕೂಡಿ ಹಾಕಿದ್ದ ಮಗುವನ್ನು ರಕ್ಷಿಸಿ, ಗೃಹ ಬಂಧನಕ್ಕೆ ಮುಕ್ತಿಕೊಟ್ಟಿದ್ದಾರೆ. ಇನ್ನು ಮೈತುಂಬ ಗಾಯಗೊಂಡಿದ್ದ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ಸಿಡಬ್ಲ್ಯೂಸಿಗೆ(CWC)ಗೆ ದೂರು ಕೊಟ್ಟರೂ ಕ್ರಮಕೈಗೊಂಡಿಲ್ಲ. ಮತ್ತೊಂದು ಕಡೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಕೌನ್ಸೆಲಿಂಗ್ ವೇಳೆ ತಾಯಿ ಜೊತೆ ಮಗು ಹೋಗಲು ನಿರಾಕರಿಸಿದೆ. ನಾಳೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ನಡೆಸಲು CWC ನೋಟಿಸ್ ನೀಡಿದೆ.

ಸ್ವತಃ ಈ ತಾಯಿಯೇ ಮಗುವಿಗೆ ಹೊಡದಿದ್ದೇನೆ. ಆದ್ರೆ ಮಗು ಬುದ್ಧಿಕಲಿಬೇಕು ಎಂದು ಮಾಡಿದ್ದೀನಿ. ಜೀವನದಲ್ಲಿ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಈ ರೀತಿ ಮಾಡಿದ್ದೀನಿ. ಮಗುವೇ ಸುಳ್ಳು ಹೇಳುತ್ತೆ. ನನಗೆ ಕೆಲಸ ಇರಲಿಲ್ಲ. ನನ್ನ ಗಂಡನ ಜೊತೆ ವಿಚ್ಛೇದನವಾಗಿದ್ದು, ಮನೆಯಲ್ಲಿ ನಾನು ಒಬ್ಬರೇ ಇರುವುದು. ಹೀಗಾಗಿ ಮಗುವನ್ನ ಕೂಡಿ ಹಾಕುತ್ತಿದ್ದೆ ಎಂದು ಹೇಳಿದ್ದಾಳೆ

Leave a Comment

Your email address will not be published. Required fields are marked *