ಪಲ್ಸ್ ಪೋಲಿಯೋ ವಿತರಣಾ ಅಭಿಯಾನ/ 60.41 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯೋ ಡ್ರಾಪ್ಸ್

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ವಿತರಣಾ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ಐದು ವರ್ಷದೊಳಗಿನ 60.41 ಲಕ್ಷ ಮಕ್ಕಳಿಗೆ ಎರಡು ಹನಿ ಪೋಲಿಯೋ ಡ್ರಾಪ್ಸ್ ಹಾಕಲಾಗಿದೆ.

Ad Widget ... ..

62.84 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಇಲಾಖೆ ಹೊಂದಿತ್ತು. ಇದರಲ್ಲಿ ಶೇ.96ರಷ್ಟು ಗುರಿ ತಲುಪಿದ್ದು, ಉಳಿದ ಮಕ್ಕಳಿಗಾಗಿ ಮನೆ ಮನೆಗೆ ತೆರಳಿ ಲಸಿಕೆ ಹನಿ ಹಾಕಲಾಗುತ್ತದೆ.

Ad Widget

ಬರೀ ಅಂಗನವಾಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಷ್ಟೇ ಅಲ್ಲದೆ ಬಸ್ ನಿಲ್ದಾಣ, ಮೆಟ್ರೋ, ರೈಲ್ವೆ ನಿಲ್ದಾಣ ಇನ್ನಿತರ ಸಾರ್ವಜನಿಕ ಪ್ರದೇಶಗಳಲ್ಲಿಯೂ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.

Leave a Comment

Your email address will not be published. Required fields are marked *