Ad Widget .

ಯಾರನ್ನಾದರೂ ‘ಹೇ…ಡಾರ್ಲಿಂಗ್’ ಎಂದು ಕರೆಯುತ್ತೀರಾ? ಹಾಗಿದ್ರೆ ಜೈಲು ಕಂಬಿ ಎಣಿಸ್ತೀರಿ ಜೋಕೆ!!

ಸಮಗ್ರ ನ್ಯೂಸ್: ಇನ್ನು ಮುಂದೆ ನೀವು ಯಾರನ್ನಾದರೂ ‘ಹೇ ಡಾರ್ಲಿಂಗ್​​​’ಎಂದು ಕರೆದರೆ ಅವರು ನಿಮ್ಮ ಮೇಲೆ ಕೇಸು ದಾಖಲಿಸಿದರೆ ನೀವು ತಿಂಗಳುಗಟ್ಟಲೆ ಜೈಲು ಕಂಬಿ ಎಣಿಸಬೇಕಾದಿತು.

Ad Widget . Ad Widget .

ಡಾರ್ಲಿಂಗ್ ಎಂಬ ಪದವನ್ನು ಇನ್ನು ಮುಂದೆ ಬಳಸುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಜೆ ಸೇನ್ ಗುಪ್ತಾ ಅವರ ಪೀಠವು ‘ಡಾರ್ಲಿಂಗ್’ ಪದವು ಲೈಂಗಿಕ ಅರ್ಥವನ್ನು ಹೊಂದಿದೆ ಮತ್ತು ಸೆಕ್ಷನ್ 354A (1) (4) ಅಡಿಯಲ್ಲಿ ಆಕ್ಷೇಪಾರ್ಹ ಹೇಳಿಕೆಯಾಗಿದೆ ಎಂದು ಹೇಳಿದ್ದಾರೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

Ad Widget . Ad Widget .

ಅಕ್ಟೋಬರ್ 21, 2015 ರಂದು, ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಅಂಡಮಾನ್‌ನ ಮಾಯಾಬಂದರ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಹೆಡ್ ಕಾನ್‌ಸ್ಟೆಬಲ್‌ಗೆ ‘ಕ್ಯಾ ಡಾರ್ಲಿಂಗ್ ಚಲನ್ ಕರ್ನೆ ಆಯ್ ಹೇ ಕ್ಯಾ’ ಎಂದು ಕಾಮೆಂಟ್ ಮಾಡಿದ್ದರು. ಇದರಿಂದ ಕೋಪಗೊಂಡ ಆಕೆ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಈ ಪ್ರಕರಣವು ಕೊಲ್ಕತ್ತಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ.

ಆದರೆ ಡಾರ್ಲಿಂಗ್ ಎಂಬ ಪದವನ್ನು ಕೆಟ್ಟದಾಗಿ ಬಳಸಲಾಗಿದ್ದು ಅದು ಶಿಕ್ಷಾರ್ಹವಾಗಿದೆ ಎಂದು ಕಲ್ಕತ್ತಾ ಹೈಕೋರ್ಟ್ ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ರವೀಂದ್ರನಾಥ್ ಸಮಂತಾ ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಮೂರ್ತಿ ಜೆ ಸೇನ್ ಗುಪ್ತಾ ಅವರ ಪೀಠವು ‘ಡಾರ್ಲಿಂಗ್’ ಪದವು ಲೈಂಗಿಕ ಅರ್ಥವನ್ನು ಹೊಂದಿದೆ ಮತ್ತು ಸೆಕ್ಷನ್ 354A (1) (4) ಅಡಿಯಲ್ಲಿ ಆಕ್ಷೇಪಾರ್ಹ ಹೇಳಿಕೆಯಾಗಿದೆ ಎಂದು ಹೇಳಿದರು. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

Leave a Comment

Your email address will not be published. Required fields are marked *