ಸಮಗ್ರ ನ್ಯೂಸ್: ಸೇವಾ ಭಾರತೀ Helpline ಟ್ರಸ್ಟ್ ಸುಳ್ಯ (ರಿ) ಮತ್ತು ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ಮಿತ್ರ ಬಳಗ ಎಲಿಮಲೆ ಹಾಗೂ ಎಜೆ ಆಸ್ಪತ್ರೆ ಮಂಗಳೂರು ಸಹಕಾರದೊಂದಿಗೆ ಮಾ. 03ರಂದು ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಬೆಳ್ಳಿಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿತ್ರ ಬಳಗ (ರಿ) ಎಲಿಮಲೆ ಇದರ ಅಧ್ಯಕ್ಷ ಉದಯಕುಮಾರ್ ಚಳ್ಳ ವಹಿಸಿದರು. ಜ್ಞಾನದೀಪ ವಿದ್ಯಾ ಸಂಸ್ಥೆಯ ಸಂಚಾಲಕ ಎ.ವಿ.ತೀರ್ಥರಾಮ ಅಂಬೆಕಲ್ಲು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ ಕಮಾಲಕ್ಷ ಶೆಣೈ ಮಾತನಾಡಿ ಆರೋಗ್ಯದ ಕುರಿತು ಮಾಹಿತಿ ನಿಡಿದರು, ಮುಖ್ಯ ಅತಿಥಿಗಳಾಗಿ ಅಮರ ಸಂಘಟನಾ ಸಮಿತಿಯ ಸಾತ್ವೀಕ್ ಮಡಪ್ಪಾಡಿ, ವಿಶ್ವ ಹಿಂದೂ ಪರಿಷದ್ ಬಜರಂಗದಳದ ಸಂಚಾಲಕ ಹರಿಪ್ರಸಾದ್ ಎಲಿಮಲೆ, ಎಜೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಧಿಕಾರಿ ಕಾರ್ತಿಕ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯ ಶ್ರೀಧರ್ ಕೆರೆಮೂಲೆ, ಎಲಿಮಲೆ ಪ್ರೌಢ ಶಾಲೆಯ ಕಾರ್ಯಧ್ಯಕ್ಷರಾದ ಜಯಂತ್ ಹರ್ಲಡ್ಕ ಇವರುಗಳು ಉಪಸ್ಥಿತರಿದ್ದರು.
ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿ, ಉದಯ ಕುಮಾರ್ ವಂದಿಸಿ, ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಕ್ಯಾನ್ಸರ್ ಶಾಸ್ತ್ರ – ಕರುಳು, ಮೂತ್ರಕೋಶ, ಸ್ಥನ, ಗರ್ಭಕೋಶ, ಗರ್ಭನಾಳ, ಅಂಡಾಶಯ, ಶ್ವಾಸಕೋಶ, ಬಾಯಿ, ಗಂಟಲು, ಅನ್ನನಾಳ ಮುಂತಾದ ಕ್ಯಾನ್ಸರ್ ಗಳ ಬಗ್ಗೆ ಹೃದಯ ಶಾಸ್ತ್ರ ವಿಭಾಗ – ಎದೆ ನೋವು, ಜನ್ಮದಾತ ಹೃದಯ ಕಾಯಿಲೆಗಳು, ಹೃದಯ ಕವಾಟದ ಕಾಯಿಲೆಗಳು, ಹೃದಯ ಸ್ನಾಯುವಿನ ತೊಂದರೆ, ಹೃದಯದ ಸೋಂಕು, ಅಧಿಕ ರಕ್ತದೊತ್ತಡ ಮುಂತಾದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳ ಬಗ್ಗೆ ಮೂತ್ರ ಶಾಸ್ತ್ರ ವಿಭಾಗ -ಮೂತ್ರ ನಾಳದ ಸೋಂಕು, ಮೂತ್ರ ಪಿಂಡದ ಕಲ್ಲು, ಮೂತ್ರದಲ್ಲಿ ರಕ್ತ, ಪದೇ ಪದೇ ಮೂತ್ರ ವಿಸರ್ಜನೆ ಅಥವಾ ಸೋರುವಿಕೆ ಮುಂತಾದ ತೊಂದರೆಗಳ ಬಗ್ಗೆ ಹಾಗೂ ಉಚಿತ ಇ.ಸಿ.ಜಿ. ಮತ್ತು PAP SMEAR (ಕ್ಯಾನ್ಸರ್ ಸಂಬದಿ) ಪರಿಕ್ಷೆ ಮಾಡಲಾಯಿತು. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸಿದರು.