Ad Widget .

ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಡಿದ್ದು ದೃಢ| ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗ

ಸಮಗ್ರ ನ್ಯೂಸ್: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘೋಷಣೆ ಕೂಗಿದ್ದು ದೃಢ ಎಂದು FSL ವರದಿಯಲ್ಲಿ ಬಹಿರಂಗವಾಗಿದೆ.

Ad Widget . Ad Widget .

ಕಳೆದ ಕೆಲವು ದಿನಗಳ ಹಿಂದೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವು ದಾಖಲಿಸಿದ ಸಂದರ್ಭದಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಹಾಕಿದ್ದರು. ನಾಸೀರ್ ಸಾಬ್ ಜಿಂದಾಬಾದ್ ಮತ್ತು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವ ಮಾಹಿತಿ ಇದೀಗ ಬಹಿರಂಗವಾಗಿದೆ ಎಂದು ಹೇಳಲಾಗುತ್ತಿದೆ.

Ad Widget . Ad Widget .

“ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ರೆಕಾರ್ಡ್‌ ಆದ ವಿಡಿಯೊ ಹಾಗೂ ಆಡಿಯೊಗಳನ್ನು ಎರಡು ಹಂತದಲ್ಲಿ ಪರಿಶೀಲನೆ ಮಾಡಲಾಗಿದೆ. ಘೋಷಣೆ ಕೂಗಿದವರ ಆಡಿಯೊ, ಬಾಯಿ, ತುಟಿಯ ಚಲನವಲನಗಳನ್ನು ಕೂಲಂಕಷವಾಗಿ ಗಮನಿಸಲಾಗಿದೆ. ಪರಿಶೀಲನೆ ಬಳಿಕ, ಒಬ್ಬನು ನಾಸೀರ್‌ ಸಾಬ್‌ ಜಿಂದಾಬಾದ್‌ ಎಂದೂ, ಮತ್ತೊಬ್ಬನು ಪಾಕಿಸ್ತಾನ್‌ ಜಿಂದಾಬಾದ್‌ ಎಂಬುದಾಗಿ ಘೋಷಣೆ ಕೂಗಿದ್ದು ನಿಜ. ಹಾಗೊಂದು ವೇಳೆ, ಘೋಷಣೆ ಕೂಗಿದ ಆರೋಪಿಗಳನ್ನು ಕರೆದುಕೊಂಡು ಬಂದರೆ, ಅವರ ಧ್ವನಿ ತಪಾಸಣೆ ಮೂಲಕ ಇವರೇ ಘೋಷಣೆ ಕೂಗಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದು” ಎಂದು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞ ಫಣೀಂದ್ರರವರು ಮಾಹಿತಿ ನೀಡಿದ್ದಾರೆ.

FSL ಪರಿಶೀಲನೆ ವೇಳೆ ಆಡಿಯೋ ಮತ್ತು ವಿಡಿಯೋ ಎಡಿಟ್ ಮಾಡಿಲ್ಲ. FSL ವರದಿ ಅನ್ವಯ ಪೊಲೀಸರು ಈಗ ತನಿಖೆಯನ್ನು ಚುರುಕುಗೊಳಿಸುತ್ತಿದ್ದು, ವಶಕ್ಕೆ ಪಡೆದಿದ್ದ ಅನುಮಾನಾಸ್ಪದ ವ್ಯಕ್ತಿಗಳ ವಾಯ್ಸ್ ಗಳನ್ನು ರವಾನೆ ಮಾಡಲಾಗಿತ್ತು.ಪೊಲೀಸರ ತನಿಖೆಯ ವೇಳೆ ಅನುಮಾನಿತ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿತ್ತು.

ಅನುಮಾನಿತರ ಪೈಕಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.ಎಫ್ ಎಸ್ ಎಲ್ ನಿಂದ ವಾಯ್ಸ್ ಮ್ಯಾಚ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ವಾಯ್ಸ್ ಮ್ಯಾಚ್ ಆದ ಕೂಡಲೇ ಅಧಿಕೃತವಾಗಿ ಬಂಧನ ಮಾಡಲು ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮ ಮೂಲಗಳಿಂದ ತಿಳಿದುಬಂದಿದೆ.

Leave a Comment

Your email address will not be published. Required fields are marked *