Ad Widget .

ಫೆಬ್ರವರಿಯಲ್ಲಿ 168337 ಕೋಟಿ ರು.ನಷ್ಟು ಜಿಎಸ್‍ಟಿ ಸಂಗ್ರಹ

ಸಮಗ್ರ ನ್ಯೂಸ್: 2024ರ ಫೆಬ್ರವರಿ ತಿಂಗಳಲ್ಲಿ 168337 ಕೋಟಿ ರು.ನಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದೆ ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಇದು 2023ರ ಫೆಬ್ರವರಿಗೆ ಹೋಲಿಸಿದರೆ ಶೇ.12.5ರಷ್ಟು ಹೆಚ್ಚು. ದೇಶೀಯ ವಹಿವಾಟಿನಲ್ಲಿ ಕಂಡುಬಂದ ಏರಿಕೆ ಒಟ್ಟಾರೆ ಜಿಎಸ್‍ಟಿ ಸಂಗ್ರಹ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

Ad Widget . Ad Widget .

ಈ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ (2023 ಏಪ್ರಿಲ್- 2024 ಫೆಬ್ರವರಿ) ಅವಧಿಯಲ್ಲಿ ಒಟ್ಟಾರೆ 18.40 ಲಕ್ಷ ಕೋಟಿ ರು.ನಷ್ಟು ಜಿಎಸ್‍ಟಿ ಸಂಗ್ರಹವಾದಂತೆ ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.11.7ರಷ್ಟು ಅಧಿಕ. ಇನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಸಿಕ ಸರಾಸರಿ 1.67 ಲಕ್ಷ ಕೋಟಿ ರು.ನಷ್ಟು ಜಿಎಸ್‍ಟಿ ಸಂಗ್ರಹವಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ಸರಾಸರಿ ಪ್ರಮಾಣವಾದ 1.5 ಲಕ್ಷ ಕೋಟಿ ರು.ಗಿಂತ ಅಧಿಕ ಎಂದು ಸರ್ಕಾರ ಹೇಳಿದೆ.

Ad Widget . Ad Widget .

Leave a Comment

Your email address will not be published. Required fields are marked *