ಮೂರು ಕಂಪನಿಗಳಿಂದ ರಕ್ಷಣಾ ಉಪಕರಣಗಳ ಖರೀದಿಗೆ ಒಪ್ಪಂದ

ಸಮಗ್ರ ನ್ಯೂಸ್: ರಕ್ಷಣಾ ಸಚಿವಾಲಯವು, ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‍ಎಎಲ್) ಸೇರಿದಂತೆ ದೇಶದ ಪ್ರಮುಖ ಮೂರು ಕಂಪನಿಗಳಿಂದ ರಕ್ಷಣಾ ಉಪಕರಣಗಳ ಖರೀದಿಗೆ 39,125 ಕೋಟಿ ರು. ಮೌಲ್ಯದ ಐದು ಒಪ್ಪಂದಗಳನ್ನು ಮಾಡಿಕೊಂಡಿದೆ.

Ad Widget ... ..

ಪ್ರಮುಖವಾಗಿ ಹೆಚ್‍ಎಎಲ್‍ನಿಂದ ಮಿಗ್-29 ವಿಮಾನಗಳಿಗೆ ಎಂಜಿನ್‍ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದೆ. ಹಾಗೆಯೇ ಲಾರ್ಸೆನ್ ಅಂಡ್ ಟರ್ಬೋ ಕಂಪನಿಯ ಜೊತೆಗೆ ಸಿಐಡಬ್ಲ್ಯೂಎಸ್ ಶಸ್ತ್ರಾಸ್ತ್ರ ಮತ್ತು ಸುಸಜ್ಜಿತ ರಾಡಾರ್ ಪೂರೈಸುವ ಎರಡು ಒಪ್ಪಂದಕ್ಕೆ ಅಂಕಿತ ಹಾಕಿದೆ.

Ad Widget

ಇದರ ಜೊತೆಗೆ ಬ್ರಹ್ಮೋಸ್ ಏರೋಸ್ಪೇಸ್ ಕಂಪನಿಯ ಜೊತೆಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಪೂರೈಸುವ ಸಂಬಂಧ ಎರಡು ಪ್ರತ್ಯೇಕ ಒಪ್ಪಂದಗಳನ್ನು ಮಾಡಿಕೊಂಡಿದೆ.

Leave a Comment

Your email address will not be published. Required fields are marked *