ಸಮಗ್ರ ನ್ಯೂಸ್: ನಾಗಿಣಿ’ ಖ್ಯಾತಿಯ ನಟಿ ದೀಪಿಕಾ ದಾಸ್ ಸದ್ದಿಲ್ಲದೆ ಗೋವಾದಲ್ಲಿ ಮದುವೆಯಾಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದೂ ಅಭಿಮಾನಿಗಳಿಗೆ ಸ್ವಲ್ಪ ಮಟ್ಟಿಗೆ ಶಾಕ್ ಆಗಿದೆ. ಅದರಲ್ಲೂ ಇದು ನಿಜವಾದ ಮದುವೆಯಾ.. ಅಥವಾ ಶೂಟಿಂಗ್ ಆಗಿರಬಹುದಾ ಎಂಬ ಕಮೆಂಟ್ ಗಳನ್ನು ಜನರು ಹಾಕುತ್ತಿದ್ದಾರೆ.
ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ಜೊತೆ ದೀಪಿಕಾ ದಾಸ್ ಮದುವೆ ಆಗಿದ್ದಾರೆ. ಗೋವಾದ ಕಡಲ ತಡಿಯಲ್ಲಿ ಖಾಸಗಿಯಾಗಿ ವಿವಾಹ ಕಾರ್ಯಕ್ರಮ ನಡೆದಿದ್ದು, ವಧು-ವರರ ಕುಟುಂಬ ಸದಸ್ಯರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.

ದೀಪಿಕಾ ದಾಸ್ ‘ನಾಗಿಣಿ’ ಮಾತ್ರವಲ್ಲದೆ ಬಿಗ್ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿಯೂ ಭಾಗಿಯಾಗಿದ್ದರು.