Ad Widget .

ಕುಟ್ಟ, ಮಡಿಕೇರಿ ಮರು ನಿರ್ಮಾಣಗೊಂಡ ರಸ್ತೆ ಉದ್ಘಾಟನೆ|ಕ್ಷೇತ್ರದ ಸಂಪೂರ್ಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ;ಎ.ಎಸ್. ಪೊನ್ನಣ್ಣ

ಸಮಗ್ರ ನ್ಯೂಸ್: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಕುಟ್ಟ, ಮಡಿಕೇರಿ ರಸ್ತೆಯ ಮರುನಿರ್ಮಾಣ ಗೊಂಡ ಕಾಮಗಾರಿಯನ್ನು ಪೊನ್ನಂಪೇಟೆ ಮುಗುಟಗೇರಿಯಲ್ಲಿ ಉದ್ಘಾಟಿಸಿದರು.

Ad Widget . Ad Widget .

ಈ ಸಂಧರ್ಭದಲ್ಲಿ ಮಾತನಾಡಿದ ಎ.ಎಸ್ .ಪೊನ್ನಣ್ಣ ನವರು 1 ಕೋಟಿ 75 ಲಕ್ಷ ರೂಗಳಲ್ಲಿ ಸದರಿ ಕಾಮಗಾರಿ ನಡೆದಿದ್ದು ಉತ್ತಮ ಗುಣಮಟ್ಟದ ಕಾಮಗಾರಿ ನಡೆದಿದೆ. ಈ ನಿಟ್ಟಿನಲ್ಲಿ ಕಾಮಗಾರಿಯ ಬಗ್ಗೆ ನಿಗಾವಹಿಸಿದ ಗ್ರಾಮಸ್ಥರು ಅಭಿನಂದನಾರ್ಹರು ಎಂದು ತಿಳಿಸಿದರು.

Ad Widget . Ad Widget .

ಕ್ಷೇತ್ರದ ಸಂಪೂರ್ಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ತಾವು ಪಣತೊಟ್ಟಿದ್ದು ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಪ್ರಮುಖರಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಅಂಕಿತ್ ಪೊನ್ನಪ್ಪ ಸೇರಿದಂತೆ ಪಕ್ಷದ ಪ್ರಮುಖರು, ಸ್ಥಳೀಯ ನಾಗರೀಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *