Ad Widget .

ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿ 13 ವರ್ಷಗಳ ನಂತರ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿ ಶರಣಪ್ಪ ಮೊಗಲಪ್ಪ ಎಂಬಾತನನ್ನು ಸೇಡಂ ತಾಲೂಕಿನ ಮುಧೋಳ(Mudhol) ಠಾಣೆಯ ಪೊಲೀಸರು 13 ವರ್ಷಗಳ ಬಳಿಕ ಬಂಧಿಸಿದ್ದಾರೆ.

Ad Widget . Ad Widget .

ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ 2011ರ ಏ. 13ರಂದು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ 27 ಜನ ಆರೋಪಿಗಳು ಸೇರಿಕೊಂಡು ಲಕ್ಷ್ಮಪ್ಪ ಚಿನ್ನಯ್ಯ ಮತ್ತು ನರಸಪ್ಪ ಚಿನ್ನಯ್ಯ ಅವರನ್ನು ಕೊಲೆ ಮಾಡಿದ್ದರು.

Ad Widget . Ad Widget .

ಪ್ರಕರಣದಲ್ಲಿ 27 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ 27 ಆರೋಪಿಗಳ ಪೈಕಿ ಆರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಮೂವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಲಾಗಿತ್ತು. ಉಳಿದವರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದರೆ, ಪ್ರಕರಣ ನಡೆದ ದಿನದಿಂದ ಶರಣಪ್ಪ ತಲೆ ಮರೆಸಿಕೊಂಡಿದ್ದ. ಕೊನೆಗೂ ಆತನ ಪತ್ತೆಗೆ ತಂಡ ರಚಿಸಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *