Ad Widget .

ಸುಳ್ಯ: ಮಾ. 03, ಎಲಿಮಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಸಮಗ್ರ ನ್ಯೂಸ್: ಸೇವಾ ಭಾರತೀ Helpline ಟ್ರಸ್ಟ್ ಸುಳ್ಯ (ರಿ) ಮತ್ತು ಅಮರ ಸಂಘಟನಾ ಸಮಿತಿ (ರಿ.) ಸುಳ್ಯ ಇದರ ಆಶ್ರಯದಲ್ಲಿ ಮಿತ್ರ ಬಳಗ ಎಲಿಮಲೆ ಹಾಗೂ ಎಜೆ ಆಸ್ಪತ್ರೆ ಮಂಗಳೂರು ಸಹಕಾರದೊಂದಿಗೆ ಮಾ. 03ರಂದು ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಬೆಳ್ಳಿಗೆ 9 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಡೆಯಲಿದೆ.

Ad Widget . Ad Widget .

ಕ್ಯಾನ್ಸರ್ ಶಾಸ್ತ್ರ – ಕರುಳು, ಮೂತ್ರಕೋಶ, ಸ್ಥನ, ಗರ್ಭಕೋಶ, ಗರ್ಭನಾಳ, ಅಂಡಾಶಯ, ಶ್ವಾಸಕೋಶ, ಬಾಯಿ, ಗಂಟಲು, ಅನ್ನನಾಳ ಮುಂತಾದ ಕ್ಯಾನ್ಸರ್ ಗಳ ತಪಾಸಣೆ.

Ad Widget . Ad Widget .

ಹೃದಯ ಶಾಸ್ತ್ರ ವಿಭಾಗ – ಎದೆ ನೋವು,ಜನ್ಮದಾತ ಹೃದಯ ಕಾಯಿಲೆಗಳು, ಹೃದಯ ಕವಾಟದ ಕಾಯಿಲೆಗಳು, ಹೃದಯ ಸ್ನಾಯುವಿನ ತೊಂದರೆ, ಹೃದಯದ ಸೋಂಕು, ಅಧಿಕ ರಕ್ತದೊತ್ತಡ ಮುಂತಾದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳ ತಪಾಸಣೆ.

ಮೂತ್ರ ಶಾಸ್ತ್ರ ವಿಭಾಗ -ಮೂತ್ರ ನಾಳದ ಸೋಂಕು, ಮೂತ್ರ ಪಿಂಡದ ಕಲ್ಲು, ಮೂತ್ರದಲ್ಲಿ ರಕ್ತ, ಪದೇ ಪದೇ ಮೂತ್ರ ವಿಸರ್ಜನೆ ಅಥವಾ ಸೋರುವಿಕೆ ಮುಂತಾದ ತೊಂದರೆಗಳ ಬಗ್ಗೆ ತಪಾಸಣೆ ನಡೆಯಲಿದೆ ಹಾಗೂ ಉಚಿತ ಇ.ಸಿ.ಜಿ ಮತ್ತು PAP SMEAR (ಕ್ಯಾನ್ಸರ್ ಸಂಬದಿ) ಪರಿಕ್ಷೆ ಮಾಡಲಾಗುವುದು.
ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆಯಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

Leave a Comment

Your email address will not be published. Required fields are marked *