February 2024

ಭಾರತೀಯ ನೌಕಾದಳದಲ್ಲಿ ಶಾರ್ಟ್ ಸರ್ವೀಸ್​​ ಕಮಿಷನ್​​ ಆಫೀಸರ್ ಹುದ್ದೆಗಳಿಗೆ ಉದ್ಯೋಗವಕಾಶ! ಈಗಲೇ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ಭಾರತೀಯ ನೌಕಾದಳ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 254 ಶಾರ್ಟ್​ ಸರ್ವೀಸ್ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್​​​​​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್ 10, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್​ಸೈಟ್ www.indiannavy.nic.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, […]

ಭಾರತೀಯ ನೌಕಾದಳದಲ್ಲಿ ಶಾರ್ಟ್ ಸರ್ವೀಸ್​​ ಕಮಿಷನ್​​ ಆಫೀಸರ್ ಹುದ್ದೆಗಳಿಗೆ ಉದ್ಯೋಗವಕಾಶ! ಈಗಲೇ ಅಪ್ಲೈ ಮಾಡಿ Read More »

ಪಡಿತರ ಚೀಟಿ ಅವ್ಯವಸ್ಥೆ ಸರಿಪಡಿಸಿ| ವಿಧಾನಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಆಗ್ರಹ

ಸಮಗ್ರ ನ್ಯೂಸ್: ಪಡಿತರ ಚೀಟಿ ಸಮಸ್ಯೆಗಳ ಬಗ್ಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭೆ ಯಲ್ಲಿ ಪ್ರಸ್ತಾವಿಸಿದ್ದು, ಅದಕ್ಕೆ ಆಹಾರ, ನಾಗರಿಕ ಸರಬರಾಜು ಇಲಾಖೆ ಸಚಿವರು ಶಾಸಕರು ಉತ್ತರಿಸಿದ್ದಾರೆ ಎಪಿಎಲ್‌ ಪಡಿತರ ಚೀಟಿದಾರ ರಿಗೆ ನಿರಂತರವಾಗಿ ಅಕ್ಕಿ ಪೂರೈಸಲು ಸರಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಆಹಾರ ಸಚಿವರು, ವಿವಿಧ ಕಾರಣಗಳಿಂದಾಗಿ ಸರ್ವರ್‌ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಆದರೂ ಪ್ರತಿ ತಿಂಗಳ 1ರಿಂದ 10ನೇ ತಾರೀಕಿನವರೆಗೆ ಪಡಿತರ ಚೀಟಿ ತಿದ್ದುಪಡಿಗೆ

ಪಡಿತರ ಚೀಟಿ ಅವ್ಯವಸ್ಥೆ ಸರಿಪಡಿಸಿ| ವಿಧಾನಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಆಗ್ರಹ Read More »

ಕುಕ್ಕೆ ಸುಬ್ರಹ್ಮಣ್ಯ: ಹಾವು ತುಳಿಯಲಿದ್ದ ಮಗುವನ್ನು ರಕ್ಷಿಸಿದ ಬೀದಿನಾಯಿ!!

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ರಸ್ತೆಯಲ್ಲಿ ತೆರಳುತ್ತಿದ್ದ ಭಕ್ತರ ಗುಂಪಿನಲ್ಲಿದ್ದ ಮಗುವೊಂದು ಹಾವನ್ನು ತುಳಿಯುವುದನ್ನು ಬೀದಿ ನಾಯಿಯೊಂದು ತಪ್ಪಿಸಿ ರಕ್ಷಿಸಿದ ಘಟನೆ ನಡೆದಿದೆ. ಆದಿ ಸುಬ್ರಹ್ಮಣ್ಯ ಬಳಿ ಸಾಗುತ್ತಿದ್ದ ತಂಡದಲ್ಲಿ ಮಹಿಳೆಯೊಬ್ಬರು ಚಿಕ್ಕ ಮಗುವನ್ನು ರಸ್ತೆಯಲ್ಲಿ ಬಿಟ್ಟು ಪಕ್ಕದ ಅಂಗಡಿಗೆ ಹಣ್ಣುಕಾಯಿ ಖರೀದಿಸಲು ತೆರಳಿದ್ದರು. ಆಗ ಮಗು ರಸ್ತೆಯ ಬದಿಗೆ ಬಂದಿದ್ದು, ಅದೇ ಸಮಯಕ್ಕೆ ನಾಗರಹಾವೊಂದು ರಸ್ತೆ ದಾಟುತ್ತಿತ್ತು. ಮಗು ಇನ್ನೇನು ಹಾವನ್ನು ತುಳಿಯಬೇಕು ಅನ್ನುವಷ್ಟರಲ್ಲಿ ಅಲ್ಲಿಯೇ ಮಲಗಿದ್ದ ಬೀದಿ ನಾಯಿ ಓಡಿ ಹೋಗಿ

ಕುಕ್ಕೆ ಸುಬ್ರಹ್ಮಣ್ಯ: ಹಾವು ತುಳಿಯಲಿದ್ದ ಮಗುವನ್ನು ರಕ್ಷಿಸಿದ ಬೀದಿನಾಯಿ!! Read More »

ನಾಳೆ ರಾಜ್ಯಸಭೆ ಚುನಾವಣೆ| ಜೆಡಿಎಸ್ ಶಾಸಕನ ಮನವೊಲಿಸುವಲ್ಲಿ ಎಚ್​.ಡಿ.ಕೆ ಯಶಸ್ವಿ

ಸಮಗ್ರ ನ್ಯೂಸ್: ಇಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಇಲ್ಲಿ ಜೆಡಿಎಸ್ ಗೆ ಒಂದು ಮತವು ಅಮೂಲ್ಯವಾಗಿದೆ. ಇಲ್ಲಿ ಮುಖ್ಯವಾಗಿ ಬಿಜೆಪಿ ಜೊತೆಗಿನ ಮೈತ್ರಿಯಿಂದ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರನ್ನು ಮನವೋಲಿಸುವಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್​.ಡಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಕಾರಣದಿಂದ ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ಶರಣಗೌಡ ಸಹೋದರ ಮಲ್ಲಿಕಾರ್ಜುನ್ ರೆಡ್ಡಿ ಅವರ ನಿವಾಸದಲ್ಲಿ ಕುಮಾರಸ್ವಾಮಿ

ನಾಳೆ ರಾಜ್ಯಸಭೆ ಚುನಾವಣೆ| ಜೆಡಿಎಸ್ ಶಾಸಕನ ಮನವೊಲಿಸುವಲ್ಲಿ ಎಚ್​.ಡಿ.ಕೆ ಯಶಸ್ವಿ Read More »

ಪತಿ-ಪತ್ನಿ ಕಾನ್ಸ್‌ಟೇಬಲ್ ವರ್ಗಾವಣೆ| ಗೃಹ ಸಚಿವರಿಂದ ಸೂಚನೆ

ಸಮಗ್ರ ನ್ಯೂಸ್: ಪೊಲೀಸ್​ ಸಿಬ್ಬಂದಿಗಳ ಅಂತರ್ ಜಿಲ್ಲಾ ವರ್ಗಾವಣೆಗೆ ರಾಜ್ಯ ಸರ್ಕಾರ ಈಗ ಅಸ್ತು ಎಂದಿದೆ. ಪತಿ-ಪತ್ನಿ ಪ್ರಕರಣಗಳಲ್ಲಿ ಅಂತರ್ ಜಿಲ್ಲಾ ವರ್ಗಾವಣೆಗೆ ಗೃಹ ಸಚಿವ ಪರಮೇಶ್ವರ್​, ಡಿಜಿ&ಐಜಿಪಿ ಅಲೋಕ್‌ ಮೋಹನ್‌ಗೆ ಸೂಚಿಸಿದ್ದರು. ಅರ್ಹ ಪತಿ-ಪತ್ನಿ ಒಂದೇ ಘಟಕ, ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ದೊರಕಿದೆ. ಹಲವು ತಿಂಗಳಿಂದ ಪತಿ-ಪತ್ನಿ ಪೊಲೀಸರ ವರ್ಗಾವಣೆಗೆ ಆಗ್ರಹ ಕೇಳಿ ಬಂದಿತ್ತು. ಕಾನ್ಸ್‌ಟೇಬಲ್ ಈ ವಿಚಾರವಾಗಿ ಮನವಿ ಸಲ್ಲಿಸಿದರು. ಆದರೆ ಭರವಸೆ ಈಡೇರಲಿಲ್ಲ, ನೊಂದ ಕಾನ್ಸ್‌ಟೇಬಲ್ ಗಳು ದಯಾಮರಣ ಕೋರಿ ರಾಷ್ಟ್ರಪತಿ

ಪತಿ-ಪತ್ನಿ ಕಾನ್ಸ್‌ಟೇಬಲ್ ವರ್ಗಾವಣೆ| ಗೃಹ ಸಚಿವರಿಂದ ಸೂಚನೆ Read More »

ನಿರುದ್ಯೋಗ ಸಮಸ್ಯೆಗೂ ಕೋಮುವಾದಕ್ಕೂ ಲಿಂಕ್; ಜಸ್ಟೀಸ್ ಎಚ್.ಎನ್. ನಾಗಮೋಹನ ದಾಸ್

ಸಮಗ್ರ ನ್ಯೂಸ್: ಯುವಜನರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ನಿರುದ್ಯೋಗವಾಗಿದೆ. ಈ ಸಮಸ್ಯೆಗೂ ಕೋಮುವಾದಕ್ಕೂ ಲಿಂಕ್ ಇದೆ. ಉದ್ಯೋಗ ಸೃಷ್ಟಿ ಕಡಿಮೆಯಾದಂತೆ ಅಪರಾಧೀಕರಣ, ಕೋಮುವಾದ, ಭಯೋತ್ಪಾದನೆ, ವೇಶ್ಯಾವಾಟಿಕೆ ಮೊದಲಾದವು ಹೆಚ್ಚಾಗುತ್ತದೆ ಎಂದು ಜಸ್ಟೀಸ್ ಎಚ್. ಎನ್. ನಾಗಮೋಹನ ದಾಸ ಹೇಳಿದ್ದಾರೆ. ನಗರದ ಕಲ್ಲಾಪಿನಲ್ಲಿರುವ ಯುನಿಟಿ ಹಾಲ್‌ನಲ್ಲಿ ಫೆ. 25ರಂದು ನಡೆದ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ನ 12ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತಾನಾಡಿದರು. ನಮ್ಮಲ್ಲಿ ವಿದ್ಯೆ ಇದೆ, ಪದವಿ ಇದೆ ಆದರೆ ಉದ್ಯೋಗವಿಲ್ಲ. ನಮ್ಮ

ನಿರುದ್ಯೋಗ ಸಮಸ್ಯೆಗೂ ಕೋಮುವಾದಕ್ಕೂ ಲಿಂಕ್; ಜಸ್ಟೀಸ್ ಎಚ್.ಎನ್. ನಾಗಮೋಹನ ದಾಸ್ Read More »

ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ ಗೆ ಕನ್ಫರ್ಮ್ ಆಗಿದೆ; ಶಾಸಕ ಜಿಟಿ ದೇವೇಗೌಡ

ಸಮಗ್ರ ನ್ಯೂಸ್: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ಗೆ ಕನ್ಫರ್ಮ್ ಆಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ ಸ್ಥಳೀಯ ನಾಯಕರ ಸಭೆ ನಡೆಸಿ ಚುನಾವಣೆ ಸಿದ್ಧತೆ ಮಾಡುತ್ತಿದ್ದೇವೆ. ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಅಭ್ಯರ್ಥಿ ಯಾರೆಂದು ಇನ್ನೂ ತೀರ್ಮಾನವಾಗಿಲ್ಲ ಎಂದು ಹೇಳಿದ್ದಾರೆ. ಟಿಕೆಟ್ ಗಾಗಿ ಸಂಸದೆ ಸುಮಲತಾ ಸಭೆ ವಿಚಾರವಾಗಿ ಮಾತನಾಡಿದ ಅವರು, ಸುಮಲತಾರವರು ಅಧಿಕೃತ ಬಿಜೆಪಿ ಮೆಂಬರ್ ಅಲ್ಲ. ಆದರೂ ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ.

ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ ಗೆ ಕನ್ಫರ್ಮ್ ಆಗಿದೆ; ಶಾಸಕ ಜಿಟಿ ದೇವೇಗೌಡ Read More »

ಮಿಸ್ ವರ್ಲ್ಡ್ 2024|ಭಾರತವನ್ನು ಪ್ರತಿನಿಧಿಸಲಿರುವ ಕರಾವಳಿ ಮೂಲದ ಸಿನಿ ಶೆಟ್ಟಿ

ಸಮಗ್ರ ನ್ಯೂಸ್: 71ನೇ ಆವೃತ್ತಿಯ ಮಿಸ್ ವರ್ಲ್ಡ್ 2024 ರಲ್ಲಿ ಭಾರತವನ್ನು ಪ್ರತಿನಿಧಿಸಲು ಉಡುಪಿ ಮೂಲದ 21 ವರ್ಷದ ಸಿನಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಮುಂಬೈನಲ್ಲಿ ನಡೆದ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2022’ ಕಾರ್ಯಕ್ರಮದಲ್ಲಿ ಸಿನಿ ಶೆಟ್ಟಿ ‘ಮಿಸ್ ಇಂಡಿಯಾ’ ಕಿರೀಟವನ್ನು ಅಲಂಕರಿಸಿದ ನಂತರ ಈ ಘೋಷಣೆ ಹೊರ ಬಿದ್ದಿದೆ.ಸಿನಿ ಶೆಟ್ಟಿ ಅಕೌಂಟಿಂಗ್ ಮತ್ತು ಫೈನಾನ್ಸ್‌ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿಶ್ವ ಸುಂದರಿ ಚಾಂಪಿಯನ್‌ ಶಿಪ್ ಮಾರ್ಚ್ 9 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌

ಮಿಸ್ ವರ್ಲ್ಡ್ 2024|ಭಾರತವನ್ನು ಪ್ರತಿನಿಧಿಸಲಿರುವ ಕರಾವಳಿ ಮೂಲದ ಸಿನಿ ಶೆಟ್ಟಿ Read More »

ಉತ್ತರ ಕನ್ನಡ: ಮಂಗನ ಕಾಯಿಲೆಗೆ 2ನೇ ಬಲಿ

ಸಮಗ್ರ ನ್ಯೂಸ್: ಮಂಗನ ಕಾಯಿಲೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊರ್ಲಕೈ ಗ್ರಾಮದ 60 ವರ್ಷದ ವೃದ್ಧೆ ಬಲಿಯಾಗಿದ್ದಾರೆ. 20 ದಿನದಿಂದ ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಸಿದ್ದಾಪುರ ತಾಲೂಕಿನಲ್ಲಿ KFD ಪ್ರಕರಣಗಳ ಸಂಖ್ಯೆ 43ಕ್ಕೇರಿದೆ. ಮತ್ತೊಂದೆಡೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿ ನುಗ್ಗಿ ಗ್ರಾಮ ಪಂಚಾಯಿತಿಯ ಎರಡು ಹಳ್ಳಿಗಳು ಮಂಗನ ಕಾಯಿಲೆಯ ಕೇಂದ್ರ ಬಿಂದುವಾಗಿವೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಒಟ್ಟು 26 ಪ್ರಕರಣಗಳಿದ್ದು, ಈ

ಉತ್ತರ ಕನ್ನಡ: ಮಂಗನ ಕಾಯಿಲೆಗೆ 2ನೇ ಬಲಿ Read More »

ಬಿಜೆಪಿ ಟಿಕೆಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ;ಸುಮಲತಾ ಅಂಬರೀಶ್

ಸಮಗ್ರ ನ್ಯೂಸ್: ಬಿಜೆಪಿ ಟಿಕೆಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಮಂಡ್ಯದಿಂದ ಸ್ಪರ್ಧೆ ಮಾಡುವುದು ನನ್ನ ಆಸೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಮಂಡ್ಯ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಿ ಹೊಸದಾಗಿ ನಿರ್ಮಾಣ ಮಾಡುವ ಕಾಮಗಾರಿಗೆ ಇಂದು (ಫೆ.26) ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದೆ, ನಾನು ಟಿಕೆಟ್ ಕೇಳಿಯೇ ಕೇಳುತ್ತೇನೆ. ನನಗೆ ನನ್ನದೇ ಆದ ಆತ್ಮವಿಶ್ವಾಸ ಇದೆ ಎಂದರು. ಜೆಡಿಎಸ್ ಪಕ್ಷ ಎನ್ ಡಿಎ ಭಾಗ, ನಾನು

ಬಿಜೆಪಿ ಟಿಕೆಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ;ಸುಮಲತಾ ಅಂಬರೀಶ್ Read More »