February 2024

ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ನಿವೃತ್ತಿ| ಪ್ರಭಾರ ನಿರ್ದೇಶಕರಾಗಿ‌ ಡಾ. ರವೀಂದ್ರನಾಥ ನೇಮಕ

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಅಳಿಯ ಹಾಗೂ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರ ಸೇವಾವಧಿ ಮುಗಿದಿದ್ದು, ಜ.31 ರಂದು ನಿವೃತ್ತಿ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಅವರನ್ನು ನೇಮಕ ಮಾಡಲಾಗಿದೆ. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಸಿ.ಎನ್‌.ಮಂಜುನಾಥ್‌ ಅವರ ಅವಧಿ ಇಂದಿಗೆ (ಜ.31) ಮುಕ್ತಾಯವಾಗಿದೆ. ಈಗಾಗಲೇ ಡಾ.ಮಂಜುನಾಥ್‌ ಅವರ ಸೇವಾವಧಿಯನ್ನು ನಾಲ್ಕು ಬಾರಿ ವಿಸ್ತರಿಸಲಾಗಿದ್ದು, ಈ ಬಾರಿ ಹೊಸ ನಿರ್ದೇಶಕರನ್ನು ನೇಮಕ ಮಾಡಲು […]

ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ನಿವೃತ್ತಿ| ಪ್ರಭಾರ ನಿರ್ದೇಶಕರಾಗಿ‌ ಡಾ. ರವೀಂದ್ರನಾಥ ನೇಮಕ Read More »

ಸುಳ್ಯ: ಆಸ್ಪತ್ರೆಯಿಂದ ಬರುತ್ತಿದ್ದವರಿಗೆ ಆಟೋರಿಕ್ಷಾ ಡಿಕ್ಕಿ; ಮೂವರಿಗೆ ಗಾಯ

ಸಮಗ್ರ ನ್ಯೂಸ್: ಆಸ್ಪತ್ರೆಯಿಂದ ಬರುತ್ತಿದ್ದ ಮೂರು ಮಂದಿಗೆ ಆಟೋರಿಕ್ಷಾ ಡಿಕ್ಕಿಯಾದ ಘಟನೆ ಸುಳ್ಯದ ಸರಕಾರಿ ಆಸ್ಪತ್ರೆ ಮುಂಭಾಗ ಸಂಭವಿಸಿದೆ. ಬೈಕ್ ಚಾಲಕ ಆಸ್ಪತ್ರೆಯಿಂದ ಮುಖ್ಯ ರಸ್ತೆಗೆ ಬಂದು ಮಗು ಸೇರಿದಂತೆ ಇನ್ನಿಬ್ಬರನ್ನು ಹತ್ತಿಸಿಕೊಳ್ಳುವ ವೇಳೆ ಸುಳ್ಯ ನಗರದಿಂದ ಪುತ್ತೂರಿನ ಕಡೆ ಹೋಗುತ್ತಿದ್ದ ಆಟೋ ರಿಕ್ಷಾ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ನಲ್ಲಿದ್ದ ಮೂವರೂ ರಸ್ತೆಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆ ದಾಖಲಗಿದ್ದಾರೆ. ಸುಳ್ಯ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಆಸ್ಪತ್ರೆಯಿಂದ ಬರುತ್ತಿದ್ದವರಿಗೆ ಆಟೋರಿಕ್ಷಾ ಡಿಕ್ಕಿ; ಮೂವರಿಗೆ ಗಾಯ Read More »

ಇಂದು ಕೇಂದ್ರ ಮಧ್ಯಂತರ ಬಜೆಟ್ ಮಂಡನೆ| ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹಲವು ಘೋಷಣೆ ಸಾಧ್ಯತೆ

ಸಮಗ್ರ ನ್ಯೂಸ್: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಗೆ ಮುನ್ನ ಕೊನೆಯ ಆಯವ್ಯಯವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಮಧ್ಯಂತರ ಬಜೆಟ್ ಅನ್ನು ಮಧ್ಯಮ ವರ್ಗ, ರೈತರು, ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್‌ ಘೋಷಣೆಯಾಗುವ ಸಾಧ್ಯತೆ ಇದೆ. 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಮೋದಿ ಸರ್ಕಾರ ಭರವಸೆ ನೀಡಿತ್ತು, ಅದು ಇನ್ನೂ ಈಡೇರಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪಿಎಂ

ಇಂದು ಕೇಂದ್ರ ಮಧ್ಯಂತರ ಬಜೆಟ್ ಮಂಡನೆ| ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹಲವು ಘೋಷಣೆ ಸಾಧ್ಯತೆ Read More »

ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ಪಿ.ಎಸ್ ದಿನೇಶ್ ಕುಮಾರ್ ನೇಮಕ

ಸಮಗ್ರ ನ್ಯೂಸ್: ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ಪ್ರಸನ್ನ ಬಿ. ವರಾಳೆ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಕನ್ನಡಿಗ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರನ್ನು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ನ್ಯಾಯಮೂರ್ತಿ ಕುಮಾರ್ ಅವರು ಈಗ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ನ್ಯಾಯಮೂರ್ತಿ ಕುಮಾರ್ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಜನವರಿ 19ರಂದು ಶಿಫಾರಸು ಮಾಡಿತ್ತು. ನ್ಯಾ.ಪಿ.ಎಸ್. ದಿನೇಶ್ ಕುಮಾರ್ ಫೆಬ್ರವರಿ

ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ಪಿ.ಎಸ್ ದಿನೇಶ್ ಕುಮಾರ್ ನೇಮಕ Read More »

ಕೈತೊಳೆಯುವ ವೇಳೆ ನೀರಿನ ಟ್ಯಾಂಕ್ ಒಡೆದು ಮಹಿಳೆ ಸಾವು| ಕಾರ್ಕಳದ ನಂದಳಿಕೆಯಲ್ಲಿ ದುರ್ಘಟನೆ

ಸಮಗ್ರ ನ್ಯೂಸ್: ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಮುಗಿಸಿ ಕೈ ತೊಳೆಯುವ ಸಂದರ್ಭ ಪಕ್ಕದಲ್ಲಿದ್ದ ಹಳೆಯ ನೀರಿನ ಟ್ಯಾಂಕ್ ಒಡೆದು ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ನಂದಳಿಕೆ ಎಂಬಲ್ಲಿ ಬುಧವಾರ ನಡೆದಿದೆ. ಮೃತ ಮಹಿಳೆಯನ್ನು ಶ್ರೀಲತಾ (50) ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ಮಹಿಳೆಯ ಮಗಳು ಪೂಜಾ ಗಂಭೀರವಾಗಿ ಗಾಯಗೊಂಡು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಮಹಮ್ಮಾಯಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಮಾಡಿದ ಬಳಿಕ ಕೈ ತೊಳೆಯುವ

ಕೈತೊಳೆಯುವ ವೇಳೆ ನೀರಿನ ಟ್ಯಾಂಕ್ ಒಡೆದು ಮಹಿಳೆ ಸಾವು| ಕಾರ್ಕಳದ ನಂದಳಿಕೆಯಲ್ಲಿ ದುರ್ಘಟನೆ Read More »

ಶ್ರೀರಾಮನ ಕಟೌಟ್​ ಬಿದ್ದು ಪಾದಚಾರಿಗೆ ಗಾಯ

ಸಮಗ್ರ ನ್ಯೂಸ್: ಶ್ರೀರಾಮನ ಕಟೌಟ್​ ಬಿದ್ದು ಪಾದಚಾರಿಗೆ ಗಾಯವಾದ ಘಟನೆ ಬೆಂಗಳೂರಿನ HAL ರಸ್ತೆಯಲ್ಲಿ ನಡೆದಿದೆ. ಶ್ರೀರಾಮ ಮಂದಿರ ಉದ್ಘಾಟನೆ ದಿನದಂದು ಹೆಚ್​ಎಎಲ್​ ವಿಮಾನ ನಿಲ್ದಾಣದ ಪಕ್ಕದಲ್ಲೆ ಶ್ರೀರಾಮನ ಬೃಹತ್ ಕಟೌಟ್ ಹಾಕಲಾಗಿತ್ತು. ಆದರೆ, ಕಾರ್ಯಕ್ರಮ ಮುಗಿದು 10 ದಿನಗಳಾದರೂ ಕಟೌಟ್ ತೆರವು ಗೊಳಿಸದ ಹಿನ್ನೆಲೆ ಪಾದಚಾರಿ ಮಾರ್ಗದಲ್ಲಿ ಸಾಗುತ್ತಿದ್ದವರ ಮೇಲೆ ಕಟೌಟ್ ಬಿದ್ದಿದೆ. ಇದರಿಂದ ಮೂರು ಜನ ಪಾದಚಾರಿಗಳಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಟೌಟ್ ಬಿದ್ದ ಸ್ಥಳದಲ್ಲೇ ಖಾಸಗಿ

ಶ್ರೀರಾಮನ ಕಟೌಟ್​ ಬಿದ್ದು ಪಾದಚಾರಿಗೆ ಗಾಯ Read More »

ರಸ್ತೆ ನಿರ್ಮಾಣ ವಿರೋಧಿಸಿ ಮೀನುಗಾರರಿಂದ ಪ್ರತಿಭಟನೆ

ಸಮಗ್ರ ನ್ಯೂಸ್: ಉತ್ತರಕನ್ನಡ ಜಿಲ್ಲೆಯ ಕಾಸರಕೋಡು ಮೀನುಗಾರರ ಬಂದರು ಬಳಿ ಹೈಡ್ರಾಮಾ ನಡೆದಿದ್ದು, ಹೊನ್ನಾವರ ತಾಲೂಕಿನ ಕಾಸರಕೋಡು ಬಳಿ ಚತುಷ್ಪಥ ರಸ್ತೆ ನಿರ್ಮಾಣ ವಿರೋಧಿಸಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಎಎಸ್‌ಪಿ ಭೇಟಿ ನೀಡಿದ್ರೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಪ್ರತಿಭಟನೆ ಹತ್ತಿಕ್ಕಲು 200ಕ್ಕೂ ಹೆಚ್ಚು ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದಾರೆ. ಈ ವೇಳೆ ಮಹಿಳೆಯರು ಹಾಗೂ ಪುರುಷರಿಗೆ ಸೇರಿದಂತೆ 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಹೊನ್ನಾವರ ಸಮೀಪ ನಿರ್ಮಾಣ ಆಗುತ್ತಿರುವ ಹೊಸ ಬಂದರಿಗೆ

ರಸ್ತೆ ನಿರ್ಮಾಣ ವಿರೋಧಿಸಿ ಮೀನುಗಾರರಿಂದ ಪ್ರತಿಭಟನೆ Read More »

ದೊಡ್ಮನೆಯಿಂದ ಹೊರ ಬಂದ ಬಳಿಕ ಕಿಚ್ಚ ಸುದೀಪ್ ಜೊತೆ ಪಾರ್ಟಿ

ಸಮಗ್ರ ನ್ಯೂಸ್: ಬಿಗ್ ಬಾಸ್​ ಶೋ ಮುಗಿದು ಮನೆಯಿಂದ ಹೊರಗೆ ಬಂದ ಬಳಿಕ ಸ್ಪರ್ಧಿಗಳೆಲ್ಲಾ ಒಂದೆಡೆ ಸೇರಿ ಪಾರ್ಟಿ ಮಾಡಿದ್ದಾರೆ. ಇವರೆಲ್ಲರ ಜೊತೆ ಸುದೀಪ್ ಕೂಡ ಸೇರಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಭಾಗ್ಯಶ್ರೀ, ಸಿರಿ, ನೀತು ವನಜಾಕ್ಷಿ, ಅವಿನಾಶ್​, ಮೈಕಲ್​ ಅಜಯ್​, ಪವಿ ಪೂವಪ್ಪ, ರಕ್ಷಕ್​ ಬುಲೆಟ್​, ತುಕಾಲಿ ಸಂತೋಷ್ ಎಲ್ಲರೂ ಕಿಚ್ಚ ಸುದೀಪ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ​ಈಶಾನಿ, ನಮ್ರತಾ, ವರ್ತೂರು ಸಂತೋಷ್​, ಕಾರ್ತಿಕ್ ಮಹೇಶ್​ ಹಾಗೂ ವಿನಯ್ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ರು.

ದೊಡ್ಮನೆಯಿಂದ ಹೊರ ಬಂದ ಬಳಿಕ ಕಿಚ್ಚ ಸುದೀಪ್ ಜೊತೆ ಪಾರ್ಟಿ Read More »