February 2024

ನಾಯಿ ಸಾಕುವ ವಿಚಾರವಾಗಿ ಫ್ಲಾಟ್ ಮಾಲೀಕರು ಮಹಿಳೆ ಮೇಲೆ ಹಲ್ಲೆ

ಸಮಗ್ರ ನ್ಯೂಸ್: ಬೆಂಗಳೂರಿನ ಜೀವನ್ ಭೀಮಾ ನಗರದಲ್ಲಿ ನಾಯಿ ಸಾಕುವ ವಿಚಾರವಾಗಿ ಫ್ಲಾಟ್ ಮಾಲೀಕರು ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ತಡರಾತ್ರಿ ಅಪಾರ್ಟ್​ಮೆಂಟ್​ನ ಫ್ಲಾಟ್​ಗೆ ನುಗ್ಗಿ ಹಲ್ಲೆ ನಡೆಸಲಾಗಿದೆ. ನಾಯಿ ಸಾಕಬಾರದು ಎಂದು ಫ್ಲಾಟ್ ಮಾಲೀಕ ಸೂಚಿಸಿದ್ದು, ಇದಕ್ಕೆ ಬಾಡಿಗೆದಾರರು ಒಪ್ಪಿಕೊಂಡಿಲ್ಲ. ಈ ವೇಳೆ ಮನೆ ಖಾಲಿ ಮಾಡುವಂತೆ ಮಾಲೀಕರು ಹೇಳಿದಾಗ ಕಿರಿಕ್ ನಡೆದಿದೆ. ಫೆಬ್ರವರಿ 3 ರಂದು ಮಧ್ಯರಾತ್ರಿ ಒಂದು ಗಂಟೆಗೆ ಫ್ಲಾಟ್​ಗೆ ನುಗ್ಗಿದ ನಾಲ್ಕೈದು ಮಂದಿ ಇದ್ದ ಗ್ಯಾಂಗ್, ಮಹಿಳೆ ಮೇಲೆ […]

ನಾಯಿ ಸಾಕುವ ವಿಚಾರವಾಗಿ ಫ್ಲಾಟ್ ಮಾಲೀಕರು ಮಹಿಳೆ ಮೇಲೆ ಹಲ್ಲೆ Read More »

ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದ ಕಾರು| ಮೂವರು ದುರ್ಮರಣ

ಸಮಗ್ರ ನ್ಯೂಸ್: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿದ್ದು, ಕಾರು ಹಳ್ಳಕ್ಕೆ ಬಿದ್ದುದರಿಂದ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸೇತುವೆ ಬಳಿ ನಡೆದಿದೆ. ಕೆ.ಆರ್.ಪೇಟೆ ನಿವಾಸಿಗಳಾದ ಅನಿಕೇತನ್ (30), ಪವನ್ ಶೆಟ್ಟಿ (32) ಹಾಗೂ ಚಿರಂಜೀವಿ (32) ಮೃತಪಟ್ಟವರಾಗಿದ್ದು, ಘಟನೆಯಲ್ಲಿ ಸಾಗರ್ ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಕೆ.ಆರ್.ಪೇಟೆಯಿಂದ ಅಕ್ಕಿಹೆಬ್ಬಾಳು ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದ ಕಾರು| ಮೂವರು ದುರ್ಮರಣ Read More »

ಸಂಪಾಜೆ: ಕಾರು-ಟ್ಯಾಂಕರ್ ನಡುವೆ ಭೀಕರ ಅಪಘಾತ| ಪವಾಡಸದೃಶ ಪಾರಾದ ಪ್ರಯಾಣಿಕರು

ಸಮಗ್ರ ನ್ಯೂಸ್: ಕಾರು ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ‌ ಅಪಘಾತದಲ್ಲಿ ಕಾರು ಸಂಪೂರ್ಣ ನುಚ್ಚು ನೂರಾಗಿದ್ದು ಕಾರಿನಲ್ಲಿದ್ದ ಪ್ರಯಾಣಿಕರು‌ ಪವಾಡ ಸದೃಶ್ಯ ಪಾರಾದ ಘಟನೆ ಮಾಣಿ – ಮೈಸೂರು ರಾ.ಹೆದ್ದಾರಿಯ ಸಂಪಾಜೆ ಸಮೀಪದ ಗೂನಡ್ಕದಲ್ಲಿ ಸಂಭವಿಸಿದೆ. ಮಡಿಕೇರಿ ಕಡೆಯಿಂದ ಬರುತ್ತಿದ್ದ ಶಿಪ್ಟ್ ಕಾರು ಮತ್ತು ಸುಳ್ಯ ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ಮಧ್ಯೆ ಫೆ.4 ರಂದು ಬೆಳಿಗ್ಗೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನ ಇಂಜಿನ್ ಕಾರಿನಿಂದ‌ ಬೇರ್ಪಟ್ಟು ದೂರಕ್ಕೆ ಎಸೆಯಲ್ಪಟ್ಟಿದೆ ಎಂದು

ಸಂಪಾಜೆ: ಕಾರು-ಟ್ಯಾಂಕರ್ ನಡುವೆ ಭೀಕರ ಅಪಘಾತ| ಪವಾಡಸದೃಶ ಪಾರಾದ ಪ್ರಯಾಣಿಕರು Read More »

‘ನಾನು ಬದುಕಿದ್ದೇನೆ’ ಎಂದು ಹೊಸ ವಿಡಿಯೋ ಹಂಚಿಕೊಂಡ ಪೂನಂ ಪಾಂಡೆ

ಸಮಗ್ರ ನ್ಯೂಸ್: ವಿವಾದಗಳ ಮೂಲಕವೇ ಸುದ್ದಿ ಆಗಿರುವ ನಟಿ ಪೂನಂ ಪಾಂಡೆ ಅವರು ಸತ್ತಿದ್ದಾರೆ ಎನ್ನುವ ಸುದ್ದಿ ನಿನ್ನೆ ವೈರಲ್ ಆಗಿತ್ತು. ಪೂನಂ ಪಾಂಡೆ ಖಾತೆ ಮೂಲಕ ಸಾವಿನ ವಿಚಾರ ತಿಳಿಸಲಾಗಿತ್ತು. ಆದರೆ, ಪೂನಂ ಪಾಂಡೆ ಬದುಕಿದ್ದಾರೆ. ತಾವು ಸುಳ್ಳು ಹೇಳಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೂನಂ ಪಾಂಡೆ ಮೃತಪಟ್ಟಿದ್ದಾರೆ’ ಎಂದು ಪೋಸ್ಟ್ ಮಾಡಲಾಯಿತು. ಅವರ ಮ್ಯಾನೇಜರ್ ಪಾರುಲ್ ಚಾವ್ಲಾ ಕೂಡ ಈ ವಿಚಾರ ಖಚಿತಪಡಿಸಿದ್ದರು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಅವರ ಸಾವಿಗೆ ಸಂತಾಪ ಸೂಚಿಸಿದರು.

‘ನಾನು ಬದುಕಿದ್ದೇನೆ’ ಎಂದು ಹೊಸ ವಿಡಿಯೋ ಹಂಚಿಕೊಂಡ ಪೂನಂ ಪಾಂಡೆ Read More »

ದ್ವಾದಶ ರಾಶಿಗಳ ವಾರಭವಿಷ್ಯ| ಫೆ.4ರಿಂದ ರಿಂದ 10ರವರೆಗೆ

ಸಮಗ್ರ ನ್ಯೂಸ್: ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಆದ್ದರಿಂದ ಈ ವಾರದಲ್ಲಿ ಯಾವ ರಾಶಿಯವರಿಗೆ ಏನು ಫಲ? ಯಾರಿಗೆ ಲಾಭ, ಯಾರಿಗೆ ನಷ್ಟ? ಎಂಬುದನ್ನು ಇಲ್ಲಿ ನೀಡಲಾಗಿದೆ. ದ್ವಾದಶ ರಾಶಿಗಳ ಗೋಚಾರಫಲ ಏನು ಎಂಬುದನ್ನು ತಿಳಿಯೋಣ ಬನ್ನಿ… ಮೇಷ:ಅನಿರೀಕ್ಷಿತವಾಗಿ ಎದುರಾಗುವ ಖರ್ಚು ವೆಚ್ಚಗಳ ಕಾರಣ ಗಲಿಬಿಲಿಗೆ ಒಳಗಾಗುವಿರಿ. ಆದರೆ ಕುಟುಂಬದ ಸದಸ್ಯರ ಸಹಾಯ ದೊರೆಯುವ

ದ್ವಾದಶ ರಾಶಿಗಳ ವಾರಭವಿಷ್ಯ| ಫೆ.4ರಿಂದ ರಿಂದ 10ರವರೆಗೆ Read More »

ರಾಜ್ಯದಲ್ಲಿ ಹೆಚ್ಚುತ್ತಿದೆ ನಕಲಿ ವೈದ್ಯರ ಹಾವಳಿ|ಅಧಿಕಾರಿಗಳ ಕಾರ್ಯಚರಣೆಯಿಂದ 109 ನಕಲಿ ವೈದ್ಯರು ಪತ್ತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. MBBS ಮಾಡಿಲ್ಲ ಅಂದ್ರೂ ಕ್ಲಿನಿಕ್ ಇಟ್ಕೊಂಡು ಚಿಕಿತ್ಸೆ ನೀಡಿ ಅಮಾಯಕರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ನಕಲಿ ವೈದ್ಯರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಸದ್ಯ ಕಲಬುರಗಿ ಜಿಲ್ಲೆಯ ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ನಕಲಿ ವೈದ್ಯರ ಕ್ಲಿನಿಕ್​ಗಳ ಮೇಲೆ ದಾಳಿ ನಡೆಸಿದ್ದು 109 ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಕಲಬುರಗಿ ಜಿಲ್ಲೆಯ

ರಾಜ್ಯದಲ್ಲಿ ಹೆಚ್ಚುತ್ತಿದೆ ನಕಲಿ ವೈದ್ಯರ ಹಾವಳಿ|ಅಧಿಕಾರಿಗಳ ಕಾರ್ಯಚರಣೆಯಿಂದ 109 ನಕಲಿ ವೈದ್ಯರು ಪತ್ತೆ Read More »

ಮತ್ತೆ ಮುನ್ನಲೆಗೆ ಬಂದ ಹನುಮಧ್ವಜ ವಿವಾದ|ಮನೆಗಳ ಮೇಲೆ ಹನುಮಧ್ವಜ ಹಾರಿಸಿದ ಬಿಜೆಪಿ ಕಾರ್ಯಕರ್ತರು

ಸಮಗ್ರ ನ್ಯೂಸ್: ಮಂಡ್ಯ ಜಿಲ್ಲೆಯ ಕೆರೆಗೋಡುನಲ್ಲಿ ಇತ್ತೀಚೆಗೆ ಹನುಮಧ್ವಜ ವಿಚಾರವಾಗಿ ಸಂಘರ್ಷ ನಡೆಯುತ್ತಿತ್ತು. ಆದರೆ ಈ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಹಿಂದೂಪರ ಸಂಘಟನೆ ಕಾರ್ಯಕರ್ತರು ಮತ್ತೆ ಹನುಮಧ್ವಜವನ್ನ ಹಾರಿಸುತ್ತೇವೆ ಎಂಬ ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ, ಇಂದು ಕೆರಗೋಡು ಗ್ರಾಮದಲ್ಲಿ ಮನೆ ಮನೆಗಳ ಮೇಲೆ ಬಿಜೆಪಿ ಕಾರ್ಯಕರ್ತರು ಹನುಮಧ್ವಜವನ್ನ ಹಾರಿಸಿದ್ದಾರೆ. ಇದು ಸರ್ಕಾರಕ್ಕೆ ಸವಾಲಾಗಿದೆ. ಜನವರಿ 28ರಂದು ಕೆರೆಗೋಡು ಗ್ರಾಮದ ಅರ್ಜುನ ಸ್ತಂಭದ ಮೇಲಿದ್ದ ಹನುಮಧ್ವಜವನ್ನ ಕೆಳಗೆ ಇಳಿಸಿ, ತಿರಂಗವನ್ನ ಜಿಲ್ಲಾಡಳಿತ ಸ್ತಂಬದ

ಮತ್ತೆ ಮುನ್ನಲೆಗೆ ಬಂದ ಹನುಮಧ್ವಜ ವಿವಾದ|ಮನೆಗಳ ಮೇಲೆ ಹನುಮಧ್ವಜ ಹಾರಿಸಿದ ಬಿಜೆಪಿ ಕಾರ್ಯಕರ್ತರು Read More »

ಕೊಡಗು:ರಸ್ತೆ ಬದಿ ಹಸಿರು ನೆಟ್ಟರೆ ಕಾನೂನು ಕ್ರಮದ ಬೆದರಿಕೆ!

ಸಮಗ್ರ ನ್ಯೂಸ್: ಎಲ್ಲೆಡೆ ಹಸಿರು ಬೆಳಸಿ ನಾಡು ಉಳಿಸಿ ಎಂದು ಹಸಿರು ಬೆಳೆಯುವುದನ್ನು ಪ್ರೋತ್ಸಾಹಿಸುತ್ತಿದ್ದರೆ, ಹಾತೂರು ಪಂಚಾಯತಿ ಕಾನೂನು ಕ್ರಮ ಜರುಗಿಸುವ ಬೆದರಿಕೆ ನೀಡುತ್ತಿದೆ. ನಮ್ಮ ಮನೆಯ ಸುತ್ತಮುತ್ತ ಹಸಿರು ಮತ್ತು ನೆರಳು ಇರಲಿ ಎಂದು ಮನೆಯ ಎದುರು ರಸ್ತೆ ಬದಿಯಲ್ಲಿ ಗಸಗಸೆ ಗಿಡವನ್ನು ನೆಟ್ಟು ಪೋಷಿಸುತ್ತಿರುವಾಗ ಪಂಚಾಯತಿಯಿಂದ ಗಿಡವನ್ನು ಕಡಿಯಲು ನೋಟೀಸ್ ಕಳುಹಿಸಲಾಗಿದೆ. ಈಗಿರುವ ಗಿಡ ದೊಡ್ಡದಾಗಿ ಬೆಳೆದು ದಾರಿಹೋಕರಿಗೆ ಹಾಗು ವಾಹನ ಸವಾರರಿಗೆ ಅಡಚಣೆ ಉಂಟಾಗುತ್ತಿದೆ ಎಂದು ಇಲ್ಲದ ಕಾರಣ ನೀಡಿ ಕಾನೂನು ಕ್ರಮ

ಕೊಡಗು:ರಸ್ತೆ ಬದಿ ಹಸಿರು ನೆಟ್ಟರೆ ಕಾನೂನು ಕ್ರಮದ ಬೆದರಿಕೆ! Read More »

ಡ್ರೋನ್ ಪ್ರತಾಪ್ ಮೇಲೆ ಮತ್ತೊಂದು ದೂರು|ಮಾಜಿ ಸಿಎಂ ಹೆಸರು ಹೇಳಿಕೊಂಡು ಹಣ ಪಡೆದು ಮೋಸ

ಸಮಗ್ರ ನ್ಯೂಸ್:ಬಿಗ್ ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್ ಬಿಗ್​ಬಾಸ್​ಗೆ ಹೋಗುವ ಮುನ್ನವೇ ವಿವಾದಕ್ಕೆ ಸಿಲುಕಿದವರು, ಈಗ ಬಿಗ್ ಬಾಸ್ ನಿಂದ ಹೊರಗೆ ಬಂದ ಮೇಲೆ ಪ್ರತಾಪ್ ವಿರುದ್ಧ ಸರಣಿ ದೂರುಗಳು ದಾಖಲಾಗುತ್ತಿವೆ. ಒಬ್ಬರಾದ ಮೇಲೆ ಒಬ್ಬರು ಪ್ರತಾಪ್ ವಿರುದ್ಧ ವಂಚನೆಯ ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಹೊಸದೊಂದು ಆರೋಪ ಪ್ರತಾಪ್ ವಿರುದ್ಧ ಕೇಳಿ ಬಂದಿದ್ದು, ಮಾಜಿ ಸಿಎಂ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬರಿಂದ ಲಕ್ಷಾಂತರ ಹಣ ಪಡೆದು ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರತಾಪ್

ಡ್ರೋನ್ ಪ್ರತಾಪ್ ಮೇಲೆ ಮತ್ತೊಂದು ದೂರು|ಮಾಜಿ ಸಿಎಂ ಹೆಸರು ಹೇಳಿಕೊಂಡು ಹಣ ಪಡೆದು ಮೋಸ Read More »

ಚಿಕ್ಕಮಗಳೂರು: ಮಂಗನ ಕಾಯಿಲೆಗೆ ವೃದ್ಧ ಬಲಿ| ಮಾಲೆನಾಡಿಗರಲ್ಲಿ ಹೆಚ್ಚಿದ ಆತಂಕ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದಲ್ಲಿ 79 ವರ್ಷದ ವೃದ್ಧ ಮಂಗನ ಕಾಯಿಲೆಗೆ ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಇದೀಗ ಕೊನೆಯುಸಿರೆಳೆದಿದ್ದಾರೆ. ರೆಡ್ ಝೋನ್​ನಲ್ಲಿ ತಪಾಸಣೆ ಮಾಡಿದಾಗ ವೃದ್ಧನಲ್ಲಿ ಕೆಎಫ್​ಡಿ ಪತ್ತೆಯಾಗಿದೆ. ಈ ಸಾವಿನಿಂದ ಮಲೆನಾಡಿನ ಜನರಲ್ಲಿ ಆತಂಕ ಹೆಚ್ಚಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿದ್ದು ಕಳೆದ 10 ದಿನಗಳಲ್ಲಿ ಬರೊಬ್ಬರಿ 21 ಜನರಿಗೆ ಸೋಂಕು ತಗುಲಿದ್ದು, ಬಿಸಿಲು ಹೆಚ್ಚಾದಂತೆ ಕಾಯಿಲೆ

ಚಿಕ್ಕಮಗಳೂರು: ಮಂಗನ ಕಾಯಿಲೆಗೆ ವೃದ್ಧ ಬಲಿ| ಮಾಲೆನಾಡಿಗರಲ್ಲಿ ಹೆಚ್ಚಿದ ಆತಂಕ Read More »