February 2024

ಬಿಜೆಪಿಗೆ ಮೂರು ದಿನಗಳ ಗಡುವು ನೀಡಿದ ಪುತ್ತಿಲ ಪರಿವಾರ

ಸಮಗ್ರ ನ್ಯೂಸ್: ಬಿಜೆಪಿಯಿಂದ ಪುತ್ತಿಲ ಪರಿವಾರಕ್ಕೆ ಷರತ್ತು ಬದ್ಧ ಆಹ್ವಾನ ಸಿಕ್ಕಿರುವ ಹಿನ್ನಲೆಯಲ್ಲಿ ಪುತ್ತಿಲ ಪರಿವಾರ ಬಿಜೆಪಿಗೆ ಮೂರು ದಿನಗಳ ಗಡುವು ನೀಡಿದೆ. ಪುತ್ತಿಲ ಪರಿವಾರದ ಬೆಂಬಲಿಗರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶ್ರೀಕೃಷ್ಣ ಉಪಾದ್ಯಾಯ, ಬಿಜೆಪಿ ನಾಯಕರಿಗೆ ಗಡುವು ವಿಧಿಸಿದ್ದು, ಮೂರು ದಿನಗಳೊಳಗೆ ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಿ. ಎಲ್ಲವೂ ಸರಿಯಾಗುವ ಶಕ್ತಿಯನ್ನು ಈ ತುಳುವ ಮಣ್ಣು ನೀಡಲಿ. ನೀವು ಸತಾಯಿಸುವುದು ಬೇಡ ನಾಲ್ಕು ಜನರನ್ನು ಸರಿ ಮಾಡಿ ಇಲ್ಲವಾದಲ್ಲಿ ಪುತ್ತಿಲ ಪರಿವಾರ ಸಾಮಾಜಿಕ ಸಂಘಟನೆಯಾಗಿ ಹುಟ್ಟಿದ್ದು […]

ಬಿಜೆಪಿಗೆ ಮೂರು ದಿನಗಳ ಗಡುವು ನೀಡಿದ ಪುತ್ತಿಲ ಪರಿವಾರ Read More »

ಸುಳ್ಯ: ಸೆಲ್ ಹೌಸ್ ಮೊಬೈಲ್‌ಶಾಪ್ ನಲ್ಲಿ ಉಚಿತ ಕೂಪನ್‌ಗಳ ಬಂಪರ್ ಬಹುಮಾನ ಡ್ರಾ

ಸಮಗ್ರ ನ್ಯೂಸ್: ಸೆಲ್ ಹೌಸ್ ಮೊಬೈಲ್ ಶಾಪ್ ನಲ್ಲಿ ದಸರಾ, ದೀಪಾವಳಿ, ಹೊಸ ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಕೂಪನ್ ನ ಬಂಪರ್ ಬಹುಮಾನಗಳ ಡ್ರಾ ಜ.25 ರಂದು ಸಂಜೆ ಸುಳ್ಯದ ಮುಖ್ಯರಸ್ತೆಯ ದ್ವಾರಕ ಹೋಟೆಲ್ ಮುಂಭಾಗದಲ್ಲಿರುವ ಸೆಲ್ ಹೌಸ್ ಮೊಬೈಲ್ ಶಾಪ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕೆ.ಟಿ.ವಿಶ್ವನಾಥ, ಅರೆಭಾಷೆ ಅಕಾಡೆಮಿಯ ಮಾಜಿ ಸದಸ್ಯ ಸದಾನಂದ ಮಾವಜಿ, ಉದ್ಯಮಿಗಳಾದ ಹಾಜಿ ಜಿ.

ಸುಳ್ಯ: ಸೆಲ್ ಹೌಸ್ ಮೊಬೈಲ್‌ಶಾಪ್ ನಲ್ಲಿ ಉಚಿತ ಕೂಪನ್‌ಗಳ ಬಂಪರ್ ಬಹುಮಾನ ಡ್ರಾ Read More »

ಪುತ್ತೂರು: ನವವಿವಾಹಿತೆ ನೇಣು ಬಿಗಿದು ಆತ್ಯಹತ್ಯೆ

ಸಮಗ್ರ ನ್ಯೂಸ್: ನವವಿವಾಹಿತೆ ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕುರಿಯ ಗಡಾಜೆ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮ್ಮಣ್ಣ ಗೌಡ ಮತ್ತು ಪುಪ್ಪ ದಂಪತಿ ಪುತ್ರಿ ಶೋಭಾ (26) ಅವರು ಪತಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಶೋಭಾ ಅವರನ್ನು ಕಳೆದ ಒಂದೂವರೆ ತಿಂಗಳ ಹಿಂದೆ ಪುತ್ತೂರು ಕುರಿಯ ಗಡಾಜೆ ರೋಹಿತ್ ರವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ಪೊಲೀಸ್‌ ಠಾಣೆಯಲ್ಲಿ

ಪುತ್ತೂರು: ನವವಿವಾಹಿತೆ ನೇಣು ಬಿಗಿದು ಆತ್ಯಹತ್ಯೆ Read More »

ಮಿತಿಮೀರಿದ ವ್ಹೀಲಿಂಗ್ ಪುಂಡರ ಹಾವಳಿ|ಬುದ್ದಿವಾದ ಹೇಳಲು ಹೋದವನಿಗೆ ಅವಾಜ್

ಸಮಗ್ರ ನ್ಯೂಸ್: ಹಾಸನ ಮೈಸೂರು ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಪುಂಡರು ವ್ಹೀಲಿಂಗ್ ಮಾಡಿ ವಾಹನ ಸವಾರರಿಗೆ ಕಾಟ ಕೊಡುತ್ತಿರುವ ವಿಡಿಯೋ ವೈರಲ್​ ಆಗಿದೆ. ಒಂದು ಬೈಕ್​ನಲ್ಲಿ 2-3 ಜನ ಕೂತು ರಸ್ತೆ ಮಧ್ಯೆ ವ್ಹೀಲಿಂಗ್​ ಮಾಡಿದ್ದಾರೆ. ನಾಲ್ಕೈದು ಬೈಕ್​ಗಳಲ್ಲಿ ಬಂದ ಯುವಕರು ವ್ಹೀಲಿಂಗ್​ ಮಾಡುತ್ತಾ ಇತರೆ ತೊಂದರೆ ಕೊಡುತ್ತಿದ್ದಾರೆ. ರಸ್ತೆಯಲ್ಲಿ ಬರುವ ಇತರೆ ವಾಹನಗಳಿಗೆ ದಾರಿ ಬಿಡದೆ ಪುಂಡಾಟವಾಡುತ್ತಿದ್ದಾರೆ. ಬುದ್ದಿವಾದ ಹೇಳಲು ಹೋದವನ ಮೇಲೂ ಕಿಡಿಗೇಡಿಗಳ ಅವಾಜ್ ಹಾಕಿದ್ದಾರೆ. ಯುವಕರು ವ್ಹೀಲಿಂಗ್​ ಮಾಡುತ್ತಿರುವ ದೃಶ್ಯವನ್ನು ಕಾರಿನಲ್ಲಿ ಪ್ರಯಾಣಿಸುತ್ತಿರುವ

ಮಿತಿಮೀರಿದ ವ್ಹೀಲಿಂಗ್ ಪುಂಡರ ಹಾವಳಿ|ಬುದ್ದಿವಾದ ಹೇಳಲು ಹೋದವನಿಗೆ ಅವಾಜ್ Read More »

ಜಾರ್ಖಂಡ್‍ಗೆ ನೂತನ ಮುಖ್ಯಮಂತ್ರಿ/ ಬಹುಮತ ಸಾಬೀತುಪಡಿಸಿದ ಚಂಪೈ ಸೊರೇನ್

ಸಮಗ್ರ ನ್ಯೂಸ್: 81 ಶಾಸಕರ ಪೈಕಿ 47 ಶಾಸಕರ ಬೆಂಬಲ ಪಡೆಯುವ ಮೂಲಕ ಜಾಖರ್ಂಡ್ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತದ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಬಹುಮತ ಘೋಷಿಸಿದ ಬೆನ್ನಲ್ಲೇ ಶಾಸಕರು ಹರ್ಷೋದ್ಗಾರಗಳೊಂದಿಗೆ ಮುಖ್ಯಮಂತ್ರಿಯನ್ನು ಅಭಿನಂದಿಸಿದರು. ಪ್ರಸ್ತುತ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಹೇಮಂತ್ ಸೊರೇನ್ ಅವರು ಸೋಮವಾರದ ಜಾರ್ಖಂಡ್ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಹಾಜರಾಗಿದ್ದರು. ಪಿಎಂಎಲ್‍ಎ ನ್ಯಾಯಾಲಯವು ಅದರಲ್ಲಿ ಭಾಗವಹಿಸಲು ಅನುಮತಿ ನೀಡಿದ ನಂತರ ಮತ ಚಲಾಯಿಸಲು ವಿಧಾನಸಭೆಗೆ ಆಗಮಿಸಿದ್ದರು.

ಜಾರ್ಖಂಡ್‍ಗೆ ನೂತನ ಮುಖ್ಯಮಂತ್ರಿ/ ಬಹುಮತ ಸಾಬೀತುಪಡಿಸಿದ ಚಂಪೈ ಸೊರೇನ್ Read More »

ಕಡಬ: ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ| ರೈತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮದ ಭರವಸೆ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯದ ಗೌರವಾನ್ವಿತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಇಂದು(ಫೆ.5) ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಹಲವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಗಳಾದರು. ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಜಿ. ರಾಮಕುಂಜ ಹಾಗೂ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರ ನೇತ್ರತ್ವದಲ್ಲಿ ಕಡಬ ತಾಲೂಕಿನಲ್ಲಿರುವ ಅರಣ್ಯ ಇಲಾಖೆಗೆ ಸಂಬಂದಪಟ್ಟ ಕಡತಗಳು, ಅಕ್ರಮ ಸಕ್ರಮದಲ್ಲಿ ಅರ್ಜಿ ವಿಲೇವಾರಿ ಹಾಗೂ ತಾಲೂಕಿನ ಅನೇಕ ಗ್ರಾಮಗಳಲ್ಲಿ

ಕಡಬ: ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ| ರೈತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮದ ಭರವಸೆ Read More »

ಫೆಬ್ರವರಿ 16ಕ್ಕೆ ರಾಜ್ಯ ಬಜೆಟ್/ ಫೆಬ್ರವರಿ 12ರಿಂದ 23ರವರೆಗೆ ವಿಧಾನಮಂಡಲದ ಅಧಿವೇಶನ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಫೆಬ್ರವರಿ 12ರಿಂದ 23ರವರೆಗೆ ವಿಧಾನಮಂಡಲದ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರು ಫೆ.12ರಂದು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆನಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ. ಅಧಿವೇಶನಕ್ಕೂ ಮುನ್ನ ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಶಾಸಕರಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಫೆ.9ರಂದು ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಶಾಸಕರಿಗೆ ಬಜೆಟ್ ಅಧಿವೇಶನದ ಸ್ವರೂಪ, ಚರ್ಚೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು

ಫೆಬ್ರವರಿ 16ಕ್ಕೆ ರಾಜ್ಯ ಬಜೆಟ್/ ಫೆಬ್ರವರಿ 12ರಿಂದ 23ರವರೆಗೆ ವಿಧಾನಮಂಡಲದ ಅಧಿವೇಶನ Read More »

ಬಂಟ್ವಾಳ: ಟಯರ್ ಸ್ಫೋಟಗೊಂಡು ರಿಕ್ಷಾಗೆ ಡಿಕ್ಕಿ ಹೊಡೆದ KSRTC ಬಸ್| ನಾಲ್ವರು ಪ್ರಯಾಣಿಕರಿಗೆ ಗಾಯ

ಸಮಗ್ರ ನ್ಯೂಸ್: ಟಯರ್ ಒಡೆದು ಹೋದ ಪರಿಣಾಮ, ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ನಿಲ್ಲಿಸಿದ್ದ ರಿಕ್ಷಾಕ್ಕೆ ಡಿಕ್ಕಿಯಾಗಿ ಬಳಿಕ ಚರಂಡಿಗೆ ಬಿದ್ದ ಘಟನೆ ಬಂಟ್ವಾಳ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯ ಎನ್.ಸಿ.ರೋಡ್ ಎಂಬಲ್ಲಿ ಇಂದು(ಫೆ.5) ಸಂಜೆ ವೇಳೆ ನಡೆದಿದೆ. ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ಧ ಕೆ‌ಎಸ್.ಆರ್.ಟಿಸಿ ಬಸ್ ನ ಟಯರ್ ಕಾವಳಮೂಡೂರು ಎನ್.ಸಿ.ರೋಡ್ ತಲುಪುತ್ತಿದ್ಧಂತೆ ಸ್ಪೋಟಗೊಂಡಿದೆ. ಟಯರ್ ಒಡೆದು ಹೋದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿ

ಬಂಟ್ವಾಳ: ಟಯರ್ ಸ್ಫೋಟಗೊಂಡು ರಿಕ್ಷಾಗೆ ಡಿಕ್ಕಿ ಹೊಡೆದ KSRTC ಬಸ್| ನಾಲ್ವರು ಪ್ರಯಾಣಿಕರಿಗೆ ಗಾಯ Read More »

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್​​ನಲ್ಲಿ ಉದ್ಯೋಗಕ್ಕೆ ಆಹ್ವಾನ, ಬೇಗ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 223 ಅಸಿಸ್ಟೆಂಟ್​ ಎಕ್ಸಿಕ್ಯೂಟಿವ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 8, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ವಿದ್ಯಾರ್ಹತೆ:ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಎಂಜಿನಿಯರಿಂಗ್​​ನಲ್ಲಿ ಪದವಿ

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್​​ನಲ್ಲಿ ಉದ್ಯೋಗಕ್ಕೆ ಆಹ್ವಾನ, ಬೇಗ ಅರ್ಜಿ ಸಲ್ಲಿಸಿ Read More »

ಕೇಂದ್ರ ಸರ್ಕಾರದಿಂದ ಹುದ್ದೆಗೆ ಆಹ್ವಾನ, 2.80 ಲಕ್ಷ ಸಂಬಳ!

ಸಮಗ್ರ ಉದ್ಯೋಗ: ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್​ ಇಂಡಿಯಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 11 ಚೀಫ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 20, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್​/ ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. ಹುದ್ದೆಯ ಮಾಹಿತಿ:ಚೀಫ್ ಜನರಲ್ ಮ್ಯಾನೇಜರ್/ ಜನರಲ್ ಮ್ಯಾನೇಜರ್/ ಜಾಯಿಂಟ್ ಜನರಲ್ ಮ್ಯಾನೇಜರ್/ ಡೆಪ್ಯುಟಿ ಜನರಲ್ ಮ್ಯಾನೇಜರ್-10ಚೀಫ್ ಜನರಲ್ ಮ್ಯಾನೇಜರ್/ ಜನರಲ್

ಕೇಂದ್ರ ಸರ್ಕಾರದಿಂದ ಹುದ್ದೆಗೆ ಆಹ್ವಾನ, 2.80 ಲಕ್ಷ ಸಂಬಳ! Read More »