February 2024

ಟ್ರಕ್ ಹಾಗೂ ಟಾಟಾ ಎಸ್ ನಡುವೆ ಡಿಕ್ಕಿ|ನಾಲ್ವರು ಸಾವು

ಸಮಗ್ರ ನ್ಯೂಸ್:ಇಂದು ಮುಂಜಾನೆ ಹೊತ್ತಲ್ಲಿ ಬೀದರ್​ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಳಗ್ಗೆ ಸುಮಾರು 4.30 ಹೊತ್ತಿಗೆ ಟ್ರಕ್ ಹಾಗೂ ಟಾಟಾ ಎಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ಈ ಘಟನೆ ನಡೆದಿದ್ದು ಐದು ಜನರಿಗೆ ಗಾಯಗಳಾಗಿದ್ದು ಬೀದರ್ ನ ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತಪಟ್ಟಿರುವ ಎಲ್ಲರೂ ಮಹಾರಾಷ್ಟ್ರದ ಉಗ್ಗಿರ್ ಮೂಲದವರು ಎಂದು ತಿಳಿದು ಬಂದಿದೆ. ಟಾಟಾ […]

ಟ್ರಕ್ ಹಾಗೂ ಟಾಟಾ ಎಸ್ ನಡುವೆ ಡಿಕ್ಕಿ|ನಾಲ್ವರು ಸಾವು Read More »

ಸುಳ್ಯದ ಇಬ್ಬರು ಮಹಿಳೆಯರಿಗೆ ರಾಷ್ಟ್ರಪತಿ ಭೇಟಿ ಭಾಗ್ಯ| ಮಾ.1ರಂದು ಹಳ್ಳಿಯಿಂದ ದಿಲ್ಲಿಗೆ ಪಯಣ

ಸಮಗ್ರ ನ್ಯೂಸ್: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಯೋಜನೆಯ ‘ಸಂಜೀವಿನೀ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಯಡಿ ಸುಳ್ಯ ತಾಲೂಕಿನ ಇಬ್ಬರಿಗೆ ರಾಷ್ಟ್ರಪತಿ ಭೇಟಿಯ ಭಾಗ್ಯ ಲಭಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಲ್ವರು ಕೊರಗ ಸಮುದಾಯದ ಮಹಿಳೆಯರು ಸೇರಿದಂತೆ ಕರ್ನಾಟಕದಿಂದ ಒಟ್ಟು 35 ಮಂದಿ ದೆಹಲಿಗೆ ತೆರಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರುವಿನ ಕೊರಗ ಸಮುದಾಯಕ್ಕೆ ಸೇರಿದ ಬೆಂಡೋಡಿಯ ಮೀನಾಕ್ಷಿ ಹಾಗೂ ವನಿತಾ ರಾಷ್ಟ್ರಪತಿ ಭೇಟಿ

ಸುಳ್ಯದ ಇಬ್ಬರು ಮಹಿಳೆಯರಿಗೆ ರಾಷ್ಟ್ರಪತಿ ಭೇಟಿ ಭಾಗ್ಯ| ಮಾ.1ರಂದು ಹಳ್ಳಿಯಿಂದ ದಿಲ್ಲಿಗೆ ಪಯಣ Read More »

ಮಂಗಳೂರು: ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆ

ಸಮಗ್ರ ನ್ಯೂಸ್: ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ಎಸ್.ಎಸ್.ಎಲ್.ಸಿ. ಇಂಗ್ಲಿಷ್ ಪೂರ್ವ ಸಿದ್ಧತಾ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಬಳಿಕ ನಾಪತ್ತೆಯಾಗಿದ್ದರು. ಯಶ್ವಿತ್ ಚಂದ್ರಕಾಂತ್, ನಿರುಪ್, ಅನ್ವಿತ್, ರಾಘವೇಂದ್ರ ಅವರ ಶವ ಪತ್ತೆಯಾಗಿದೆ. ಇವರು ಸುರತ್ಕಲ್ ನ ವಿದ್ಯಾದಾಯಿನಿ ಶಾಲೆಯ ವಿದ್ಯಾರ್ಥಿಗಳು. ಇವರ ಮೃತದೇಹಗಳು ಹಳೆಯಂಗಡಿ ಸಮೀಪ ನದಿಯಲ್ಲಿ ಪತ್ತೆಯಾಗಿವೆ. ಎಸ್.ಎಸ್.ಎಲ್.ಸಿ. ಪೂರ್ವ ಸಿದ್ಧತಾ ಪರೀಕ್ಷೆ ಬರೆದು ಶಾಲೆಯಿಂದ ಹೊರಬಂದ ಬಳಿಕ ನಾಪತ್ತೆಯಾಗಿದ್ದರು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪರೀಕ್ಷೆ ಮುಗಿದ ನಂತರ ಈಜಲು

ಮಂಗಳೂರು: ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆ Read More »

ನಾಡಗೀತೆ ವಿವಾದ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ವರ್ಗಾವಣೆ

ಸಮಗ್ರ ನ್ಯೂಸ್: ಇತ್ತೀಚೆಗೆ ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ವಿವಾದಾತ್ಮಕ ವಿಚಾವವೊಂದು ಹರಡಿತ್ತು. ಈ ಸುತ್ತೋಲೆ ಹೊರಡಿಸಿದ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇವರ ಜೊತೆಗೆ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಐಎಎಸ್ ಅಧಿಕಾರಿಗಳನ್ನೂ ವರ್ಗಾವಣೆ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಮೂಲ ಸೌಕರ್ಯ ಇಲಾಖೆ ಕಾರ್ಯದರ್ಶಿ

ನಾಡಗೀತೆ ವಿವಾದ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ವರ್ಗಾವಣೆ Read More »

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗು: ರಾಜ್ಯದಾದ್ಯಂತ ಇಂದು ಪ್ರತಿಭಟನೆ

ಸಮಗ್ರ ನ್ಯೂಸ್: ನಿನ್ನೆ ರಾಜ್ಯಸಭಾ ಚುನಾವಣೆ ಫಲಿತಾಂಶ ಬಂದಿದ್ದು, ರಾಜ್ಯಸಭೆಯ ನೂತನ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡಿದ್ದರು ಇದೇ ಸಂಧರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಈ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ಹಲವು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ರಾಷ್ಟ್ರದ್ರೋಹಿ ಇದು ಪಾಕಿಸ್ತಾನದ ಪರ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಇಂದು(ಫೆ.28) ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗು: ರಾಜ್ಯದಾದ್ಯಂತ ಇಂದು ಪ್ರತಿಭಟನೆ Read More »

ಮೈಸೂರು ಕೊಡಗು ರೈಲು ಮಾರ್ಗ ನಿರ್ಮಿಸಲು ಭೂ ಸ್ವಾಧೀನಕ್ಕೆ|ಸಂಸದ ಪ್ರತಾಪ್ ಸಿಂಹ ಮನವಿ

ಸಮಗ್ರ ನ್ಯೂಸ್: ಮೈಸೂರು ಕೊಡಗು ರೈಲು ಮಾರ್ಗವನ್ನು ಶೀಘ್ರದಲ್ಲಿ ನಿರ್ಮಾಣ ಮಾಡಲಿದ್ದೇವೆ. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆದಷ್ಟು ಬೇಗ ಭೂಸ್ವಾಧೀನ ಮಾಡಿ ಉಚಿತವಾಗಿ ಒದಗಿಸಿಕೊಡಬೇಕು. ಉಸ್ವಾಧೀನ ಬೇಗ ಆದರೆ ಮೈಸೂರು ಕೊಡಗು ರೈಲು ಯೋಜನೆ ತ್ವರಿತವಾಗಿ ಸಾಕಾರಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ. ಮೈಸೂರು ಕೊಡಗು ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ. ಮೈಸೂರು ವಿಭಾಗದ ರೈಲ್ವೆ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ

ಮೈಸೂರು ಕೊಡಗು ರೈಲು ಮಾರ್ಗ ನಿರ್ಮಿಸಲು ಭೂ ಸ್ವಾಧೀನಕ್ಕೆ|ಸಂಸದ ಪ್ರತಾಪ್ ಸಿಂಹ ಮನವಿ Read More »

ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರ ದ.ಕ. ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ

ಸಮಗ್ರ ನ್ಯೂಸ್: ಶಿವಮೊಗ್ಗ ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಸಹಯೋಗದೊಂದಿಗೆ ಕರ್ನಾಟಕ ರತ್ನ ಡಾ|ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ 6ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ವಾಸವಿ ಪಬ್ಲಿಕ್ ಶಾಲೆ ಕೋಟೆ ರಸ್ತೆ ಶಿವಮೊಗ್ಗ ದಲ್ಲಿ ಫೆ. 25ರಂದು ನಡೆಯಿತು. 7 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಸುಭಿಕ್ಷಾ ಬಾಲಾಡಿ ಪ್ರಥಮ ಸ್ಥಾನ, ತ್ರಿಷಾಲಿ ನೇರ್ಪು ತೃತೀಯ ಸ್ಥಾನ08 ರಿಂದ 10 ವರ್ಷದ

ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರ ದ.ಕ. ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ Read More »

ಬೈಕ್ ಚಲಾಯಿಸಿದ ಅಪ್ರಾಪ್ತ ತಮ್ಮ|25 ಸಾವಿರ ರೂ. ದಂಡ ಪಾವತಿಸಿದ ಅಣ್ಣ!

ಸಮಗ್ರ ನ್ಯೂಸ್: ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ಕೊಟ್ಟ ತಪ್ಪಿಗೆ ಮಾತೆಯೊಬ್ಬರಿಗೆ ರೂ. 16000 ದಂಡ ವಿಧಿಸಿ ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಹಾಸನ ಜಿಲ್ಲೆ ಬೇಲೂರು ನ್ಯಾಯಾಲಯಕಳೆದ ವಾರ ತೀರ್ಪು ನೀಡಿತ್ತು. ಇದೀಗ ಅದೇ ರೀತಿಯ ಮತ್ತೊಂದು ಪ್ರಕರಣ ವರದಿಯಾಗಿದೆ. ಇಲ್ಲಿ ಅಪ್ರಾಪ್ತ ತಮ್ಮನಿಗೆ ಬೈಕ್ ಚಲಾಯಿಸಲು ಕೊಟ್ಟ ಅಣ್ಣ ಬರೋಬರಿ ರೂ. 25000 ದಂಡ ತೆತ್ತಿದ್ದಾನೆ. ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ್ದ ಅಣ್ಣನಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಜೆಎಂಎಫ್​ಸಿ ಕೋರ್ಟ್ 25 ಸಾವಿರ ರೂ. ದಂಡ

ಬೈಕ್ ಚಲಾಯಿಸಿದ ಅಪ್ರಾಪ್ತ ತಮ್ಮ|25 ಸಾವಿರ ರೂ. ದಂಡ ಪಾವತಿಸಿದ ಅಣ್ಣ! Read More »

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ

ಸಮಗ್ರ ನ್ಯೂಸ್: ಇಂದು ಸಂಜೆ ರಾಜ್ಯಸಭಾ ಚುನಾವಣೆ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ವಿಧಾನಸೌಧದ ಆವರಣದಲ್ಲಿಯೇ ದೇಶದ್ರೋಹದ ಘೋಷಣೆ ಮೊಳಗಿದೆ. ರಾಜ್ಯಸಭೆಯ ನೂತನ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಅವರ ಬೆಂಬಲಿಗರ ಪೈಕಿ ಒಬ್ಬರು ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆ ಕೂಗಿದ್ದಾರೆ. ನಾಸೀರ್‌ ಹುಸೇನ್‌ ಅವರ ಪಕ್ಕದಲ್ಲೇ ಇದ್ದ ವ್ಯಕ್ತಿ ಪಾಕಿಸ್ತಾನ್‌ ಜಿಂದಾಬಾದ್‌, ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದಾನೆ. ಇದೇ ವೇಳೆ ಪಕ್ಕದಲ್ಲಿದ್ದ ಕೆಲವರು ಆತನ ಬಾಯಿಮುಚ್ಚಿಸಿದ್ದಾರೆ. ಇದೀಗ ಪಾಕಿಸ್ತಾನ್ ಜಿಂದಾಬಾದ್​ ಎಂದು ಘೋಷಣೆ ಕೂಗಿರುವ

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ Read More »

ಜಮಾತ್-ಎ-ಇಸ್ಲಾಮಿ ಮೇಲೆ ಮುಂದಿನ 5 ವರ್ಷಗಳವರೆಗೆ ನಿಷೇಧ/ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ

ಸಮಗ್ರ ನ್ಯೂಸ್: ಮುಂದಿನ 5 ವರ್ಷಗಳವರೆಗೆ ಜಮಾತ್-ಎ-ಇಸ್ಲಾಮಿ ಮೇಲಿನ ನಿಷೇಧವನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಈ ಕುರಿತು ಅಮಿತ್ ಶಾ ಟ್ವಿಟ್ ಮಾಡಿದ್ದು, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ವಿರುದ್ಧ ಶೂನ್ಯ ಸಹಿಷ್ಣುತೆಯ ಪ್ರಧಾನಿ ನರೇಂದ್ರ ಮೋದಿಯವರ ನೀತಿಯನ್ನು ಅನುಸರಿಸಿ ಸರ್ಕಾರವು ಜಮ್ಮು ಕಾಶ್ಮೀರದ ಜಮಾತ್-ಎ-ಇಸ್ಲಾಮಿ ಮೇಲಿನ ನಿಷೇಧವನ್ನ ಐದು ವರ್ಷಗಳವರೆಗೆ ವಿಸ್ತರಿಸಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರದ ಭದ್ರತೆ, ಸಮಗ್ರತೆ ಮತ್ತು ಸಾರ್ವಭೌಮತ್ವದ ವಿರುದ್ಧ ಸಂಘಟನೆಯು ತನ್ನ ಚಟುವಟಿಕೆಗಳನ್ನು ಮುಂದುವರಿಸುತ್ತಿರುವುದು ಕಂಡುಬಂದಿದೆ.

ಜಮಾತ್-ಎ-ಇಸ್ಲಾಮಿ ಮೇಲೆ ಮುಂದಿನ 5 ವರ್ಷಗಳವರೆಗೆ ನಿಷೇಧ/ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ Read More »