February 2024

ರಾಜ್ಯಸಭಾ ಚುನಾವಣೆಯಲ್ಲಿ ಸೋಲು/ ರಾಜೀನಾಮೆ ನೀಡುತ್ತಾರಾ ಹಿಮಾಚಲ ಪ್ರದೇಶ ಮುಖ್ಯಮಂತ್ರಿ?

ಸಮಗ್ರ ನ್ಯೂಸ್: ರಾಜ್ಯಸಭಾ ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಹೆಚ್ಚಾಗಿದ್ದು, ಸಿಎಂ ಸುಖೀಂದರ್ ಸಿಂಗ್ ಸುಖು ರಾಜೀನಾಮೆ ನೀಡಿದ್ದಾರೆ ಎಂಬ ರಾಜಕೀಯ ಪಡಸಾಲೆಯಲ್ಲಿ ಮಾತುಗಳು ಕೇಳಿಬರುತ್ತಿದೆ. ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದು, ವಿಶ್ವಾಸಮತ ಸಾಬೀತುಪಡಿಸಲೂ ವಿಫಲವಾಗಬಹುದು ಎಂಬ ಸಾಧ್ಯತೆ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಮೊದಲೇ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿಯ ಉಸ್ತುವಾರಿ ವಹಿಸಲು ಬುಧವಾರ ಶಿಮ್ಲಾಕ್ಕೆ ಧಾವಿಸಿದ ಕಾಂಗ್ರೆಸ್ ವೀಕ್ಷಕರಾದ ಭೂಪಿಂದರ್ ಸಿಂಗ್ ಹೂಡಾ ಮತ್ತು […]

ರಾಜ್ಯಸಭಾ ಚುನಾವಣೆಯಲ್ಲಿ ಸೋಲು/ ರಾಜೀನಾಮೆ ನೀಡುತ್ತಾರಾ ಹಿಮಾಚಲ ಪ್ರದೇಶ ಮುಖ್ಯಮಂತ್ರಿ? Read More »

ಪಿಎಂ ಕಿಸಾನ್ ಸಮ್ಮಾನ್ ನಿಧಿ/ 16 ನೇ ಕಂತನ್ನು ಬಿಡುಗಡೆ ಮಾಡಿದ ಮೋದಿ

ಸಮಗ್ರ ನ್ಯೂಸ್: ಪಿಎಂ ಕಿಸಾನ್ ಸಮ್ಮಾನ್ ನಿಧಿಯ 16 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಯವತ್ಮಾಲ್ ನಲ್ಲಿ ಬಿಡುಗಡೆ ಮಾಡಿದರು. ಒಟ್ಟು 21,000 ಕೋಟಿ ರೂಗೂ ಹೆಚ್ಚಿನ ಮೊತ್ತವನ್ನು, 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಪ್ರಧಾನಿ ಮೋದಿ ರಿಮೋಟ್ ಬಟನ್ ಒತ್ತುವ ಮೂಲಕ ರವಾನೆ ಮಾಡಿದ್ದಾರೆ. ಈ ಮೂಲಕ ಫಲಾನುಭವಿಗಳ ಖಾತೆಗಳಿಗೆ ತಲಾ 2,000 ರೂ ಸಿಗಲಿದೆ. ಪಿಎಂ ಕಿಸಾನ್ ಯೋಜನೆಯು 2019ರಲ್ಲಿ ಆರಂಭವಾಗಿದ್ದು, ಇಲ್ಲಿಯವರೆಗೆ 16 ಕಂತುಗಳನ್ನು ರೈತರ

ಪಿಎಂ ಕಿಸಾನ್ ಸಮ್ಮಾನ್ ನಿಧಿ/ 16 ನೇ ಕಂತನ್ನು ಬಿಡುಗಡೆ ಮಾಡಿದ ಮೋದಿ Read More »

“ಪಾಕಿಸ್ತಾನ್ ಜಿಂದಾಬಾದ್ ಅಲ್ಲ ನಾಸಿರ್ ಸಾಬ್ ಜಿಂದಾಬಾದ್ ಎಂದು ಘೋಷಣೆ ಮಾಡಿದ್ದು”| ಎಎನ್ಐ ಪತ್ರಕರ್ತ ಎಂ‌. ಮಧು ಎಕ್ಸ್ ನಲ್ಲಿ ಸ್ಪಷ್ಟನೆ

ಸಮಗ್ರ ನ್ಯೂಸ್: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ನಾಸೀರ್ ಹುಸೇನ್ ಅವರು ಗೆದ್ದ ಸಂದರ್ಭದಲ್ಲಿ ಬೆಂಬಲಿಗರ ಗುಂಪಿನಿಂದ ಕೂಗಿದ್ದು “ನಾಸೀರ್ ಸಾಬ್ ಝಿಂದಾಬಾದ್” ಎಂದು, “ಪಾಕಿಸ್ತಾನ್ ಝಿಂದಾಬಾದ್ ಎಂದಲ್ಲ” ಎಂದು ಎಎನ್ಐ ಸುದ್ಧಿ ಸಂಸ್ಥೆಯ ಪತ್ರಕರ್ತ ಎಂ.ಮಧು ತನ್ನ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭಾ ಚುನಾವಣೆ ಫಲಿತಾಂಶ ನಂತರದ ಸುದ್ದಿಗಾಗಿ ಸ್ಥಳದಲ್ಲಿದ್ದ ಎಎನ್ಐ ಸುದ್ದಿಸಂಸ್ಥೆಯ ಪತ್ರಕರ್ತ ಎಂ.ಮಧು, “ಕನ್ನಡದ ಮಾಧ್ಯಮಗಳು ಇದನ್ನು ತಿರುಚಿ ಸುದ್ದಿ ಮಾಡಿವೆ. ಇದು ಉದ್ದೇಶಪೂರ್ವಕ ಪ್ರಮಾದ” ಎಂದು ವಿಷಾದಿಸಿದ್ದಾರೆ. ಈ ಕುರಿತು ಅವರು

“ಪಾಕಿಸ್ತಾನ್ ಜಿಂದಾಬಾದ್ ಅಲ್ಲ ನಾಸಿರ್ ಸಾಬ್ ಜಿಂದಾಬಾದ್ ಎಂದು ಘೋಷಣೆ ಮಾಡಿದ್ದು”| ಎಎನ್ಐ ಪತ್ರಕರ್ತ ಎಂ‌. ಮಧು ಎಕ್ಸ್ ನಲ್ಲಿ ಸ್ಪಷ್ಟನೆ Read More »

ನಾಳೆ ಜಾತಿಗಣತಿ ವರದಿ ಸಲ್ಲಿಕೆ/ ವರದಿ ಸಲ್ಲಿಕೆ ಬಳಿಕ ಸಚಿವ ಸಂಪುಟದಲ್ಲಿ ಚರ್ಚೆ

ಸಮಗ್ರ ನ್ಯೂಸ್: ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ನಾಳೆ ಸಲ್ಲಿಕೆ ಮಾಡುವುದಾಗಿ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ತಿಳಿಸಿದ್ದಾರೆ. ಜಾತಿಗಣತಿ ವರದಿ ಸಲ್ಲಿಕೆಗೆ ನಾಳೆ ಕೊನೆ ದಿನವಾಗಿದ್ದು, ಸರ್ಕಾರದ ಸೂಚನೆಯಂತೆ ವರದಿ ಸಿದ್ದವಾಗಿದೆ. ನಾಳೆ ವರದಿ ಸಲ್ಲಿಸಲಾಗುವುದು ಎಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ. ಜಾತಿಗಣತಿ ವರದಿಯಲ್ಲಿ ಏನಿದೆ ಎಂಬುದು ಬಳಿಕ ಗೊತ್ತಾಗಲಿದೆ. ವರದಿ ಬಿಡುಗಡೆಯಾದ ಬಳಿಕ ಸಾರ್ವಜನಿಕವಾಗಿ ಚರ್ಚೆಯಾದರೆ ಉತ್ತಮ. ಸರ್ಕಾರಕ್ಕೆ ವರದಿ ಸಲ್ಲಿಕೆ ಬಳಿಕ ಸಚಿವ ಸಂಪುಟದಲ್ಲಿ ಚರ್ಚೆಯಾಗಲಿದೆ. ಬಳಿಕ ಈ ಬಗ್ಗೆ ರಾಜ್ಯ

ನಾಳೆ ಜಾತಿಗಣತಿ ವರದಿ ಸಲ್ಲಿಕೆ/ ವರದಿ ಸಲ್ಲಿಕೆ ಬಳಿಕ ಸಚಿವ ಸಂಪುಟದಲ್ಲಿ ಚರ್ಚೆ Read More »

ತಲೆಮರೆಸಿಕೊಂಡ ನಟಿ ಜಯಪ್ರದಾ/ ಅರೆಸ್ಟ್ ಮಾಡುವಂತೆ ಸೂಚಿಸಿದ ನ್ಯಾಯಾಲಯ

ಸಮಗ್ರ ನ್ಯೂಸ್: ವಿಚಾರಣೆಗೆ ಹಾಜರಾಗದೆ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಘೋಷಿಸಿದ್ದು, ಅವರನ್ನು ಅರೆಸ್ಟ್ ಮಾಡುವಂತೆ ಪೋಲಿಸರಿಗೆ ಸೂಚನೆ ನೀಡಿದೆ. 2019ರ ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಮಪುರದಲ್ಲಿ ಪ್ರಕರಣ ದಾಖಲಾಗಿದ್ದು, ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸಮನ್ಸ್ ನೀಡಿದ ಹೊರತಾಗಿಯೂ ಜಯಪ್ರದಾ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ನ್ಯಾಯಾಲಯ ಈ ಆದೇಶ ಹೊರಡಿಸಿದೆ. ನ್ಯಾಯಾಲಯದಿಂದ ಜಯಪ್ರದಾ ಅವರಿಗೆ ಹಲವು ಬಾರಿ ಸಮನ್ಸ್ ಜಾರಿಯಾಗಿತ್ತು.

ತಲೆಮರೆಸಿಕೊಂಡ ನಟಿ ಜಯಪ್ರದಾ/ ಅರೆಸ್ಟ್ ಮಾಡುವಂತೆ ಸೂಚಿಸಿದ ನ್ಯಾಯಾಲಯ Read More »

ಪ್ಯಾಸೆಂಜರ್ ರೈಲುಗಳ ದರ ಇಳಿಕೆ

ಸಮಗ್ರ ನ್ಯೂಸ್: ಕೋವಿಡ್ ವೇಳೆ ಏರಿಕೆ ಮಾಡಲಾಗಿದ್ದ ಪ್ಯಾಸೆಂಜರ್ ರೈಲುಗಳ ಕನಿಷ್ಠ ದರವನ್ನು ಭಾರತೀಯ ರೈಲ್ವೆ ಮಂಗಳವಾರದಿಂದ ಇಳಿಕೆ ಮಾಡಿದ್ದು, ಸಾಮಾನ್ಯ ರೈಲಿನ ಸೆಕೆಂಡ್ ಕ್ಲಾಸ್ ಕನಿಷ್ಠ ಟಿಕೆಟ್ ದರದಲ್ಲಿ ಶೇ.50ರಷ್ಟು ಕಡಿಮೆಯಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಹಲವು ಪ್ಯಾಸೆಂಜರ್ ರೈಲುಗಳ ಹೆಸರನ್ನು ಲಾಕ್‍ಡೌನ್ ತೆರವಾದ ನಂತರ ಎಕ್ಸ್‍ಪ್ರೆಸ್ ಸ್ಪೆಷಲ್ ಅಥವಾ ಮೆಮು/ಡೆಮು ಎಕ್ಸ್‍ಪ್ರೆಸ್ ಎಂದು ಬದಲಾವಣೆ ಮಾಡಿ, ಕನಿಷ್ಠ ಟಿಕೆಟ್ ದರವನ್ನು 10 ರು.ನಿಂದ 30 ರು.ವರೆಗೆ ಏರಿಕೆ ಮಾಡಲಾಗಿತ್ತು. ಆದರೆ ರೈಲ್ವೆಯ ಈ

ಪ್ಯಾಸೆಂಜರ್ ರೈಲುಗಳ ದರ ಇಳಿಕೆ Read More »

ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್| ವಿದ್ಯುತ್ ದರ ಇಳಿಕೆ ಮಾಡಿ KERC ಆದೇಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದು, ಹೊಸ ದರ ಪರಿಷ್ಕರಣೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC)ವಿದ್ಯುತ್ ದರ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಲೋಕಸಭೆ ಚುನಾವಣೆ ಬೆನ್ನಲ್ಲೇ ಗ್ರಾಹಕರಿಗೆ ಬಂಪರ್​ ಕೊಡುಗೆ ನೀಡಿದೆ. 100 ಯೂನಿಟ್​ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್ ಮೇಲೆ 1 ರೂಪಾಯಿ 10 ಪೈಸೆ ಇಳಿಕೆ ಮಾಡಲಾಗಿದೆ. ಅದರಂತೆ ವಾಣಿಜ್ಯ ಬಳಕೆದಾರರಿಗೂ ಗುಡ್ ನ್ಯೂಸ್ ನೀಡಿದೆ. ವಾಣಿಜ್ಯ ಬಳಕೆದಾರರಿಗೆ 1 ರೂಪಾಯಿ 25 ಪೈಸೆ ದರ

ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್| ವಿದ್ಯುತ್ ದರ ಇಳಿಕೆ ಮಾಡಿ KERC ಆದೇಶ Read More »

ಡ್ರೈವರ್ & ಟೆಕ್ನಿಷಿಯನ್ ಹುದ್ದೆಗೆ ಆಹ್ವಾನ, ನಾಳೆಯೇ ಲಾಸ್ಟ್ ಡೇಟ್!

ಸಮಗ್ರ ಉದ್ಯೋಗ: CSIR ನಾಲ್ಕನೇ ಪ್ಯಾರಾಡೈಂ ಸಂಸ್ಥೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಹಾಕಲು ನಾಳೆಯೇ ಕೊನೆಯ ದಿನವಾಗಿದೆ. ಒಟ್ಟು 17 ಡ್ರೈವರ್, ಟೆಕ್ನಿಕಲ್ ಅಸಿಸ್ಟೆಂಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 29, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹುದ್ದೆಯ ಮಾಹಿತಿ:ಟೆಕ್ನಿಕಲ್ ಅಸಿಸ್ಟೆಂಟ್- 15ಟೆಕ್ನಿಷಿಯನ್- 1ಡ್ರೈವರ್- 1 ವಿದ್ಯಾರ್ಹತೆ:ಟೆಕ್ನಿಕಲ್ ಅಸಿಸ್ಟೆಂಟ್- ಡಿಪ್ಲೊಮಾ, ಬಿ.ಎಸ್ಸಿ, ಬಿಸಿಎಟೆಕ್ನಿಷಿಯನ್- 10ನೇ ತರಗತಿಡ್ರೈವರ್- 10ನೇ ತರಗತಿ

ಡ್ರೈವರ್ & ಟೆಕ್ನಿಷಿಯನ್ ಹುದ್ದೆಗೆ ಆಹ್ವಾನ, ನಾಳೆಯೇ ಲಾಸ್ಟ್ ಡೇಟ್! Read More »

ರಾಜ್ಯಸಭಾ ಚುನಾವಣೆ/ ಬಿಜೆಪಿಯದ್ದೇ ಸಿಂಹಪಾಲು

ಸಮಗ್ರ ನ್ಯೂಸ್: ರಾಜ್ಯಸಭೆ ಚುನಾವಣೆ ಮುಕ್ತಾಯಗೊಂಡಿದ್ದು ಒಟ್ಟು 56 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಒಟ್ಟು ಫಲಿತಾಂಶದಲ್ಲಿ ಬಿಜೆಪಿಗೆ ಸಿಂಹಪಾಲು ಪ್ರಾಪ್ತಿಯಾಗಿದ್ದು 30 ಸೀಟಲ್ಲಿ ಗೆದ್ದಿದೆ. 56ರಲ್ಲಿ 41 ಮಂದಿ ಅವಿರೋಧ ಆಯ್ಕೆ ಆಗಿದ್ದರೆ, ಮಿಕ್ಕ 15ಕ್ಕೆ ಮತದಾನ ನಡೆದಿತ್ತು. ಇದರಲ್ಲಿ ಕರ್ನಾಟಕದ 4, ಉತ್ತರ ಪ್ರದೇಶದ 10 ಹಾಗೂ ಹಿಮಾಚಲ ಪ್ರದೇಶದ 1 ಸ್ಥಾನ ಇದ್ದವು. ಮತದಾನ ನಡೆದ 15 ಸ್ಥಾನದ ಪೈಕಿ ಬಿಜೆಪಿಗೆ 10, ಕಾಂಗ್ರೆಸ್‍ಗೆ 3 ಹಾಗೂ ಎಸ್ಪಿಗೆ 2 ಸ್ಥಾನ ಬಂದಿವೆ. ಇನ್ನು

ರಾಜ್ಯಸಭಾ ಚುನಾವಣೆ/ ಬಿಜೆಪಿಯದ್ದೇ ಸಿಂಹಪಾಲು Read More »

ಮಾರ್ಚ್‍ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಮಾರ್ಚ್‍ನಲ್ಲಿ, ಲೋಕಸಭೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇನ್ನೊಬ್ಬ ಕೇಂದ್ರ ಸಚಿವ ಶಂತನು ಠಾಕೂರ್ ಅವರು ಈ ತಿಂಗಳ ಆರಂಭದಲ್ಲಿ, 2019ರಲ್ಲೇ ಸಂಸತ್ತು ಅಂಗೀಕರಿಸಿದ್ದ ಸಿಎಎ ಕಾಯ್ದೆಯನ್ನು ಚುನಾವಣೆಗೂ ಮುನ್ನ ಜಾರಿಗೆ ತರಲಾಗುವುದು ಎಂದಿದ್ದರು. ಇದರ ಪ್ರಕಾರ 2014ರ ಡಿ.31ರಂದು ಅಥವಾ

ಮಾರ್ಚ್‍ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ Read More »