February 2024

ರಾಜ್ಯದ ಎಲ್ಲಾ ಶಾಸಕರಿಗೆ ಚಿನ್ನಲೇಪಿತ ಬ್ಯಾಡ್ಜ್ ಭಾಗ್ಯ| ಏನಿದರ ವಿಶೇಷತೆ?

ಸಮಗ್ರ ನ್ಯೂಸ್: ವಿಧಾನಸಭೆ ಸಚಿವಾಲಯದಿಂದ ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲ 224 ಶಾಸಕ, ಸಚಿವರಿಗೆ ಸರ್ಕಾರದ ಗಂಡಭೇರುಂಡ ಲಾಂಛನವುಳ್ಳ ಚಿನ್ನ ಲೇಪಿತ ಬ್ಯಾಡ್ಜ್‌ಗಳನ್ನು ವಿತರಿಸಲಾಗಿದೆ. ಬೆಂಗಳೂರಿನ ಐ ಡ್ರೀಮ್ಸ್‌ ಟ್ರೇಡ್‌ ಅಂಡ್‌ ಈವೆಂಟ್‌ ಲಿಮಿಟೆಡ್‌ ಕಂಪನಿಯಿಂದ ತಲಾ 2832 ರೂ. ನಂತೆ ಈ ಬ್ಯಾಡ್ಜ್‌ಗಳನ್ನು ಖರೀದಿ ಮಾಡಲಾಗಿದೆ. ಮುಂದಿನ ಅಧಿವೇಶನದಿಂದ ಎಲ್ಲ ಸದಸ್ಯರು ಕಡ್ಡಾಯವಾಗಿ ಈ ಬ್ಯಾಡ್ಜ್‌ ಧರಿಸಿ ಸದನಕ್ಕೆ ಹಾಜರಾಗುವಂತೆ ಸ್ಪೀಕರ್‌ ಯು.ಟಿ.ಖಾದರ್‌ ಸೂಚಿಸಿದ್ದಾರೆ. ಬುಧವಾರ ವಿಧಾನಸಭೆ ಕಾರ್ಯಕಲಾಪದ ವೇಳೆ ಈ ಬಗ್ಗೆ ಮಾಹಿತಿ […]

ರಾಜ್ಯದ ಎಲ್ಲಾ ಶಾಸಕರಿಗೆ ಚಿನ್ನಲೇಪಿತ ಬ್ಯಾಡ್ಜ್ ಭಾಗ್ಯ| ಏನಿದರ ವಿಶೇಷತೆ? Read More »

ಮಂಗಳೂರು: ಶಾಲೆಯಲ್ಲಿ ಧರ್ಮ ಅವಹೇಳನ ಪ್ರಕರಣ| ಹೇಳಿಕೆ ನೀಡಿದ ವಿದ್ಯಾರ್ಥಿನಿ ತಾಯಿಗೆ ಜೀವ ಬೆದರಿಕೆ

ಸಮಗ್ರ ನ್ಯೂಸ್: ಮಂಗಳೂರು ನಗರದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಶಾಲೆಯ ವಿದ್ಯಾರ್ಥಿನಿಯೋರ್ವರ ತಾಯಿ ಕವಿತಾ ಅವರಿಗೆ ಅಪರಿಚಿತರು ಜೀವಬೆದರಿಕೆ ಹಾಕಿರುವ ಕುರಿತಾಗಿ ಕಂಕನಾಡಿ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಅಪರಿಚಿತರು ವಾಯ್ಸ ಮೆಸೇಜ್‌ಗಳನ್ನು ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಕವಿತಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುತ್ತಿದ್ದು ಕತಾರ್‌, ಸೌದಿ ಮೊದಲಾದೆಡೆಗಳಿಂದ ಬೆದರಿಕೆಗಳು ಬಂದಿರುವುದು ಗೊತ್ತಾಗಿದೆ ಎಂದು

ಮಂಗಳೂರು: ಶಾಲೆಯಲ್ಲಿ ಧರ್ಮ ಅವಹೇಳನ ಪ್ರಕರಣ| ಹೇಳಿಕೆ ನೀಡಿದ ವಿದ್ಯಾರ್ಥಿನಿ ತಾಯಿಗೆ ಜೀವ ಬೆದರಿಕೆ Read More »

ಇಂದಿನಿಂದ ಶಾಲಾ ಮಕ್ಕಳಿಗೆ ರಾಗಿ‌ಮಾಲ್ಟ್ ವಿತರಣೆ

ಸಮಗ್ರ ನ್ಯೂಸ್: ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಎನ್ನುವಂತೆ ಇಂದಿನಿಂದ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಮಿಶ್ರಿತ ಹಾಲು ವಿತರಣೆ ಮಾಡಲಾಗುತ್ತಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಪ್ರಸ್ತುತ ವಾರದಲ್ಲಿ ಐದು ದಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಕೆನೆಭರಿತ ಹಾಲು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಪ್ರಸ್ತುತ ವಾರದಲ್ಲಿ ಐದು ದಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ

ಇಂದಿನಿಂದ ಶಾಲಾ ಮಕ್ಕಳಿಗೆ ರಾಗಿ‌ಮಾಲ್ಟ್ ವಿತರಣೆ Read More »

ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ| ಆರೋಪಿಯ ಸಹೋದರನ ಕೊಲೆಗೆ ಸಂಚು!?

ಸಮಗ್ರ ನ್ಯೂಸ್: ಪುತ್ತೂರು ನಗರದ ಹೊರ ವಲಯದ ಮುಕ್ರಂಪಾಡಿ ಜಂಕ್ಷನ್‌ನಲ್ಲಿ ಫೆ. 19ರಂದು ತಡರಾತ್ರಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನಲ್ಲಿ ತಲವಾರು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ನಾಲ್ವರು ಆರೋಪಿಗಳು, ಕಲ್ಲೇಗ ಅಕ್ಷಯ್‌ ಕೊಲೆ ಪ್ರಕರಣದ ಆರೋಪಿಯೋರ್ವನ ಸಹೋದರನನ್ನು ಕೊಲ್ಲಲು ಸಂಚು ರೂಪಿಸಿದ ಅಂಶ ಬೆಳಕಿಗೆ ಬಂದಿದೆ. ಕಿಶೋರ್‌ ಪೂಜಾರಿ ಕಲ್ಲಡ್ಕ, ಮನೋಜ್‌, ಆಶಿಕ್‌ ಮತ್ತು ಸನತ್‌ ಕುಮಾರ್‌ ಬಂಧಿತರು. ಈ ಪೈಕಿ ಕಿಶೋರ್‌ ಪೂಜಾರಿಯು ಕೊಲೆ ಪ್ರಕರಣವೊಂದರಲ್ಲಿ ಜೈಲಿನಲಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಜಾಮೀನಿ ನಲ್ಲಿ ಬಿಡುಗಡೆ ಗೊಂಡಿದ್ದ. ಆರೋಪಿ ಗಳು

ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ| ಆರೋಪಿಯ ಸಹೋದರನ ಕೊಲೆಗೆ ಸಂಚು!? Read More »

ಮಹಾರಾಷ್ಟ್ರದಲ್ಲಿ ಪ್ರಸಾದ ಸೇವಿಸಿ 300 ಕ್ಕೂ ಹೆಚ್ಚು ಜನರು ಅಸ್ವಸ್ಥ

ಸಮಗ್ರ ನ್ಯೂಸ್: ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ಪ್ರಸಾದ ಸೇವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 300 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಲೋನಾರ್‌ನ ಸೋಮಥಾನ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮವಾದ ಹರಿಣಂ ಸಪ್ತಾಹದ ಕೊನೆಯ ದಿನದಂದು ರಾತ್ರಿ ಈ ಘಟನೆ ನಡೆದಿದೆ ಎಂದು ಬುಲ್ಧಾನ ಜಿಲ್ಲಾಧಿಕಾರಿ ಕಿರಣ್ ಪಾಟೀಲ್ ತಿಳಿಸಿದರು. ಹಾಸಿಗೆಗಳ ಕೊರತೆಯಿಂದಾಗಿ ಆಸ್ಪತ್ರೆಯ ಹೊರಗೆ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು, ಸಲೈನ್ ಬಾಟಲಿಗಳನ್ನು ಮರಗಳಿಗೆ ಕೊಕ್ಕೆಯಿಂದ ನೇತುಹಾಕಲಾಗಿದೆ. ಸೋಮಠಾಣಾ ಮತ್ತು ಖಾಪರಖೇಡ್

ಮಹಾರಾಷ್ಟ್ರದಲ್ಲಿ ಪ್ರಸಾದ ಸೇವಿಸಿ 300 ಕ್ಕೂ ಹೆಚ್ಚು ಜನರು ಅಸ್ವಸ್ಥ Read More »

ಇಂದು ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ

ಸಮಗ್ರ ನ್ಯೂಸ್: ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಕೆಲವು ಕಾರ್ಯಕ್ರಮಗಳಿಗೆ ಚಾಲನೆ ಮತ್ತು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಳಗ್ಗೆ ದೆಹಲಿಯಿಂದ ಹೊರಟು ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 12.30 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗಾವಿಯಿಂದ ಹೊರಟು ಮಧ್ಯಾಹ್ನ 2.40ಕ್ಕೆ ಶಿವಮೊಗ್ಗ ತಲುಪಲಿದ್ದಾರೆ. ಮಧ್ಯಾಹ್ನ 3.15ಕ್ಕೆ ಶಿವಮೊಗ್ಗದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ಶಿವಮೊಗ್ಗದಿಂದ ಬೆಂಗಳೂರಿಗೆ

ಇಂದು ಕರ್ನಾಟಕ ಪ್ರವಾಸ ಕೈಗೊಳ್ಳಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ Read More »

ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್| ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪ್ರದಾನ

ಸಮಗ್ರ ನ್ಯೂಸ್: ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವ ಅಂಗವಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿತ್ತು. ಆದರೆ ಘಟಿಕೋತ್ಸವ ದಿನದಂದು ಎಸ್.ಸೋಮನಾಥ್ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬುಧವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದಾರೆ. ಜಿಎಸ್​ಎಲ್​ವಿ ಮಾರ್ಕ್ 3 ಲಾಂಚರ್ ರೂಪಿಸುವಲ್ಲಿ ಸೋಮನಾಥ್ ಮುಖ್ಯಪಾತ್ರ ವಹಿಸಿದ್ದರು. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಪಿಎಸ್​ಎಲ್​ವಿ (Polar Satellite Launch Vehicle – PSLV) ಉಡಾವಣಾ ವಾಹನ ರೂಪಿಸುವ ತಂಡದಲ್ಲಿ

ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್| ರಾಜ್ಯಪಾಲರಿಂದ ಗೌರವ ಡಾಕ್ಟರೇಟ್ ಪ್ರದಾನ Read More »

ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆ: ಒಂದೇ ಹೋಟೆಲ್​ನಲ್ಲಿ ನಡೆಯಿತು ಕಾಂಗ್ರೆಸ್​ನ 2 ಪ್ರತ್ಯೇಕ ಸಭೆ

ಸಮಗ್ರ ನ್ಯೂಸ್: ರಾಜ್ಯ ಕಾಂಗ್ರೆಸ್ ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿವೆ. ಲೋಕಸಭಾ ಚುನಾವಣೆಗೆ ತಯಾರಿ ನಡೆಸಿದ್ದ ಕಾಂಗ್ರೆಸ್​​ಗೆ ಇದೀಗ ಮೊದಲು ರಾಜ್ಯಸಭೆಯಲ್ಲಿ ಗೆಲ್ಲುವ ಟಾಸ್ಕ್​ ಇದೆ. ನಾಲ್ಕು ಸ್ಥಾನಕ್ಕೆ ಎನ್​ಡಿಎ ಅಭ್ಯರ್ಥಿಯಾಗಿ 5ನೇ ಅಭ್ಯರ್ಥಿ ಕಣದಲ್ಲಿರುವುದರಿಂದ ಆಡಳಿತರೂಢ ಕಾಂಗ್ರೆಸ್​​ಗೆ ಭಯ ಶುರುವಾಗಿದೆ. ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್​ವೊಂದರಲ್ಲಿ ಕಾಂಗ್ರೆಸ್​ನ ಎರಡು ಪ್ರತ್ಯೇಕ ಸಭೆಗಳು ನಡೆದಿದ್ದು, ಇದು ಕುತೂಹಲಕ್ಕೆ ಕಾರಣವಾಗಿದೆ. ಒಂದೇ ಹೋಟೆಲ್​ನಲ್ಲಿ ಒಂದು ಕಡೆ ಹಳೇ ಮೈಸೂರು ಭಾಗದ ಕಾಂಗ್ರೆಸ್​​ನ ಒಕ್ಕಲಿಗ ನಾಯಕರ ಸಭೆ ನಡೆದಿದ್ದರೆ,

ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆ: ಒಂದೇ ಹೋಟೆಲ್​ನಲ್ಲಿ ನಡೆಯಿತು ಕಾಂಗ್ರೆಸ್​ನ 2 ಪ್ರತ್ಯೇಕ ಸಭೆ Read More »

ಸಿಗರೇಟ್‍ಗಳ ಮತ್ತು ಇತರೆ ತಂಬಾಕು ಉತ್ಪನ್ನಗಳ ತಿದ್ದುಪಡಿ ವಿಧೇಯಕ/ ಸಿಗರೇಟು ಮಾರಾಟದ ವಯೋಮಿತಿ 18 ವರ್ಷದಿಂದ 21 ವರ್ಷಕ್ಕೆ ಏರಿಕೆ

ಸಮಗ್ರ ನ್ಯೂಸ್: ಸಿಗರೇಟ್‍ಗಳ ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಈ ಮಸೂದೆಯಿಂದ ಶಾಲೆಗಳಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ ನಿಷೇಧಿಸಲಾಗಿದೆ ಮತ್ತು ಸಿಗರೇಟು ಮಾರಾಟದ ವಯೋಮಿತಿ 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡದ ಪ್ರಮಾಣ 100 ರೂ. ರಿಂದ 1000 ರೂ.ಗೆ ಏರಿಕೆ ಮಾಡಲಾಗಿದೆ

ಸಿಗರೇಟ್‍ಗಳ ಮತ್ತು ಇತರೆ ತಂಬಾಕು ಉತ್ಪನ್ನಗಳ ತಿದ್ದುಪಡಿ ವಿಧೇಯಕ/ ಸಿಗರೇಟು ಮಾರಾಟದ ವಯೋಮಿತಿ 18 ವರ್ಷದಿಂದ 21 ವರ್ಷಕ್ಕೆ ಏರಿಕೆ Read More »

ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆ ಫೈನಲ್/ ಕಾಂಗ್ರೆಸ್‍ಗೆ ಸಿಕ್ಕಿತು 17 ಸೀಟು

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ವೇದಿಕೆ ಸಜ್ಜುಗೊಳ್ಳುತ್ತಿದ್ದು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಅಂತಿಮ ಹಂತಕ್ಕೆ ತಲುಪಿದೆ. ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ನಡುವಿನ ಮಾತುಕತೆ ಯಶಸ್ವಿಯಾಗಿದ್ದು, ಕಾಂಗ್ರೆಸ್ 17, ಅಖಿಲೇಶ್ ಯಾದವ್ ಅವರ ಎಸ್‍ಪಿ, ಇತರರು 63 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ.

ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆ ಫೈನಲ್/ ಕಾಂಗ್ರೆಸ್‍ಗೆ ಸಿಕ್ಕಿತು 17 ಸೀಟು Read More »