February 2024

ಮಲ್ಲಿಕಾರ್ಜುನ ಖರ್ಗೆಗೆ ಝಡ್ ಪ್ಲಸ್ ಭದ್ರತೆ/ ಕೇಂದ್ರ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಿ, ಕೇಂದ್ರ ಸರ್ಕಾರ ಆದೇಶ ಮಾಡಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳ ಬೆದರಿಕೆ ಗ್ರಹಿಕೆ ವರದಿಯ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗಿದೆ. ಅವರಿಗೆ ಸಿಆರ್ ಪಿ ಎಫ್ ಭದ್ರತೆ ಒದಗಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮಲ್ಲಿಕಾರ್ಜುನ ಖರ್ಗೆಗೆ ಝಡ್ ಪ್ಲಸ್ ಭದ್ರತೆ/ ಕೇಂದ್ರ ಸರ್ಕಾರ ಆದೇಶ Read More »

ಅರುಣ್ ಪುತ್ತಿಲರನ್ನು ಭೇಟಿಯಾಗಿದ್ದು‌ ನಿಜ – ಬಿ.ವೈ ವಿಜಯೇಂದ್ರ| ಬಿಜೆಪಿಗೆ ಮರಳಿ ಸೇರ್ಪಡೆ ಬಗ್ಗೆ ರಾಜ್ಯಧ್ಯಕ್ಷರು ಹೇಳಿದ್ದಿಷ್ಟು…

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಮುಖಂಡ, ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಭೇಟಿಯಾಗಿರುವುದು ನಿಜ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪುತ್ತಿಲ ನನ್ನನ್ನು ಭೇಟಿ ಮಾಡಿದ್ದು ಸತ್ಯ. ಬೆಷರತ್ ಆಗಿ ಬಿಜೆಪಿ ಸೇರ್ಪಡೆಯಾಗಿ ಎಂದು ಅವರಿಗೆ ಸೂಚಿಸಿದ್ದೇನೆ. ಯಾವುದೇ ಷರತ್ತುಗಳು ಬೇಡ. ಪ್ರಧಾನಿ ಮೋದಿ ನಾಯಕತ್ವಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಪುತ್ತಿಲ ವಿಚಾರವಾಗಿ ದಕ್ಷಿಣ ಕನ್ನಡದ

ಅರುಣ್ ಪುತ್ತಿಲರನ್ನು ಭೇಟಿಯಾಗಿದ್ದು‌ ನಿಜ – ಬಿ.ವೈ ವಿಜಯೇಂದ್ರ| ಬಿಜೆಪಿಗೆ ಮರಳಿ ಸೇರ್ಪಡೆ ಬಗ್ಗೆ ರಾಜ್ಯಧ್ಯಕ್ಷರು ಹೇಳಿದ್ದಿಷ್ಟು… Read More »

ವೆಬ್ ಸೈಟ್ ನಲ್ಲಿ 404 ಅಂತ ಬರೋದು ಯಾಕೆ? ಈ ತಪ್ಪು ಮಾಡಬೇಡಿ

ಸಮಗ್ರ ನ್ಯೂಸ್: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಬಳಸದವರ ಸಂಖ್ಯೆ ಬಹಳ ಕಡಿಮೆ. ಬಹುತೇಕ ಎಲ್ಲರೂ ಲ್ಯಾಪ್ಟಾಪ್ಗಳು, ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳಂತಹ ಸಾಧನಗಳನ್ನು ಹೊಂದಿದ್ದಾರೆ. ಅವರಲ್ಲಿ ಹೆಚ್ಚಿನವರು ಗೂಗಲ್ ಕ್ರೋಮ್ ವೆಬ್ ಬ್ರೌಸರ್ ಅನ್ನು ಬಳಸುತ್ತಾರೆ. ಏಕೆಂದರೆ Google Chrome ಬಳಕೆದಾರ ಸ್ನೇಹಿ, ಭದ್ರತೆ, ಗೌಪ್ಯತೆ, ಪಾಸ್ವರ್ಡ್ ರಕ್ಷಣೆ ಮತ್ತು ವೇಗದಂತಹ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಶೇಕಡಾವಾರು ಬಳಕೆದಾರರನ್ನು ಆಕರ್ಷಿಸಿದೆ. ಆದರೆ ಕೆಲವೊಮ್ಮೆ Google Chrome ನಲ್ಲಿ ಹುಡುಕುವಾಗ ಕೆಲವು ದೋಷಗಳು ಎದುರಾಗುತ್ತವೆ. ಕೆಲವು ದೋಷಗಳು ಏಕೆ ಸಂಭವಿಸುತ್ತವೆ ಎಂದು

ವೆಬ್ ಸೈಟ್ ನಲ್ಲಿ 404 ಅಂತ ಬರೋದು ಯಾಕೆ? ಈ ತಪ್ಪು ಮಾಡಬೇಡಿ Read More »

ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್| ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಲು ಹೈಕೋರ್ಟ್ ಆದೇಶ

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಸೌಜನ್ಯ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದು, ಆರೋಪಿಗಳ ಪತ್ತೆಹಚ್ಚಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ರಚಿಸಿ ಆರೋಪಿಗಳ ಪತ್ತೆಯಾಗದಂತೆ ಸಾಕ್ಷಿ ನಾಶಪಡಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದು, ಇದೀಗ ಹೈಕೋರ್ಟ್ ರಾಜ್ಯ ಸರಕಾರ ಹಾಗೂ ಸಿಬಿಐ ತನಿಖಾ ತಂಡಕ್ಕೆ ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ನೋಟಿಸ್

ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್| ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಲು ಹೈಕೋರ್ಟ್ ಆದೇಶ Read More »

ಸುಳ್ಯ: ರಬ್ಬರ್ ಟ್ಯಾಪಿಂಗ್ ಗೆ ತೆರಳಿದ್ದ ಮಹಿಳೆಯ ಮೇಲೆ ಕಾಡುಹಂದಿ ದಾಳಿ|

ಸಮಗ್ರ ನ್ಯೂಸ್: ಟ್ಯಾಪಿಂಗ್ ಮಾಡಲು ರಬ್ಬರ್ ತೋಟಕ್ಕೆ ತೆರಳಿದ್ದ ಮಹಿಳೆಯ ಮೇಲೆ ಕಾಡುಹಂದಿ ದಾಳಿ ಮಾಡಿ ತೀವ್ರ ಗಾಯಗೊಳಿಸಿದ ಘಟನೆ ಸುಳ್ಯ ತಾಲೂಕಿನ ದುಗಲಡ್ಕ ಕೂಟೇಲಿನಲ್ಲಿ ಫೆ.22 ರಂದು ನಡೆದಿದೆ. ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಟ್ಯಾಪಾರ್ ಆಗಿರುವ ಪದ್ಮಾವತಿ ಅವರು ಇಂದು ಮುಂಜಾನೆ ದುಗಲಡ್ಕ ಸೆಕ್ಷನಿ‌ನ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾಗ ಪೊದೆಯಲ್ಲಿದ್ದ ಕಾಡುಹಂದಿ ಏಕಾಏಕಿ ಧಾಳಿ ನಡೆಸಿದೆ. ಕಾಡು ಹಂದಿಯ ದಾಳಿಯಿಂದ ಮಹಿಳೆಯ ಬೆನ್ನು ಮತ್ತಿತರೆಡೆಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಸುಳ್ಯ ಸರಕಾರಿ

ಸುಳ್ಯ: ರಬ್ಬರ್ ಟ್ಯಾಪಿಂಗ್ ಗೆ ತೆರಳಿದ್ದ ಮಹಿಳೆಯ ಮೇಲೆ ಕಾಡುಹಂದಿ ದಾಳಿ| Read More »

ಅಳಿವಿನಂಚಿನ ಅಪರೂಪದ ಮೌಸ್ ಡೀರ್ ಪತ್ತೆ

ಸಮಗ್ರ ನ್ಯೂಸ್: ನೀವು ಚಿರತೆಯನ್ನು ಹೋಲುವ ಬೆಕ್ಕನ್ನು ನೋಡಿರಬಹುದು. ಆದರೆ ಜಿಂಕೆ ಮರಿಯ ತದ್ರೂಪಿಯಂತೆ ತೋರುವ ಬೇರೊಂದು ಪ್ರಾಣಿಯನ್ನು ಕಂಡಿದ್ದೀರಾ? ಹಾಗಾದ್ರೆ ಈ ವಿಡಿಯೋದಲ್ಲಿರುವ ಪುಟ್ಟ ಪ್ರಾಣಿಯನ್ನು ನೋಡಿ. ಇದು ಅಳಿಲು ಮರಿ ಅಥವಾ ಇಲಿ ಮರಿ ಅಥವಾ ಜಿಂಕೆ ಮರಿ ಆಗಿರಬಹುದು ಎಂದು ನೀವು ಯೋಚಿಸಿದಲ್ಲಿ ನಿಮ್ಮ ಊಹೆ ತಪ್ಪು. ಸುಂಟಿಕೊಪ್ಪ ಸಮೀಪದ ಹೊರೂರು ಕಾಫಿ ಬೆಳೆಗಾರರಾದ ಪಿ.ಸಿ. ಮೋಹನ್ ರವರಿಗೆ ಸೇರಿದ ಗ್ರೀನ್ ಫೀಲ್ಡ್ ಎಸ್ಟೇಟ್ ನಲ್ಲಿ ನೆನ್ನೆ ದಿನ ಬೆಳಗ್ಗೆ ಆಚನಾಕಾಗಿ ಕಾರ್ಮಿಕರ

ಅಳಿವಿನಂಚಿನ ಅಪರೂಪದ ಮೌಸ್ ಡೀರ್ ಪತ್ತೆ Read More »

ವುಮೆನ್ಸ್ ಪ್ರೀಮಿಯರ್ ಲೀಗ್ ನಾಳೆ ಆರಂಭ/ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ

ಸಮಗ್ರ ನ್ಯೂಸ್: ವುಮೆನ್ಸ್ ಪ್ರೀಮಿಯರ್ ಲೀಗ್ ನಾಳೆಯಿಂದ ಶುರು ಆಗಲಿದ್ದು, ಈಗಾಗಲೇ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ. ಈ ಬಾರಿ ಟೂರ್ನಿಯ ಉದ್ಘಾಟನೆಗೆ ಬಾಲಿವುಡ್ ನಟ ಶಾರುಖ್‍ಖಾನ್ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಒಟ್ಟಾರೆ ಐದು ತಂಡಗಳು ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮುಂಬೈ ಇಂಡಿಯನ್ಸ್-ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮೊದಲ ಪಂದ್ಯ ಆಡಲಿವೆ. ಮಾರ್ಚ್ 17 ರಂದು ಫೈನಲ್ ಪಂದ್ಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ.

ವುಮೆನ್ಸ್ ಪ್ರೀಮಿಯರ್ ಲೀಗ್ ನಾಳೆ ಆರಂಭ/ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ Read More »

ವೇಣೂರಿನ ಭಗವಾನ್ ಶ್ರೀಬಾಹುಬಲಿ ಸ್ವಾಮಿಗೆ ಇಂದಿನಿಂದ ಮಹಾಮಸ್ತಕಾಭಿಷೇಕ

ಸಮಗ್ರ ನ್ಯೂಸ್: ಇಂದಿನಿಂದ ಒಂಬತ್ತು ದಿನಗಳ ಕಾಲ ಜಗತ್ತಿನ ಏಕೈಕ ಮಂದಸ್ಮಿತ ಬಾಹುಬಲಿ ಏಕಶಿಲಾ ಮೂರ್ತಿಯಾದ ವೇಣೂರಿನ ಭಗವಾನ್ ಶ್ರೀಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಲಿದ್ದು, ಒಂಬತ್ತು ದಿನಗಳು ಜಲಾಭಿಷೇಕ, ಕಷಾಯ, ಕಲ್ಕಚೂರ್ಣ, ಅರಿಶಿಣ, ಶ್ರೀಗಂಧ, ಅಷ್ಟಗಂಧ, ಹಾಲು, ಎಳನೀರು ಹಾಗೂ ಕೇಸರಿ ದ್ರವ್ಯಗಳಿಂದ ಅಭಿಷೇಕ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಮಸ್ತಕಾಭಿಷೇಕ ನಡೆಯಲಿದ್ದು, ಇಡೀ ಜಗತ್ತೇ ಈ ಸಂಭ್ರಮವನ್ನು ಎದುರು ನೋಡುತ್ತದೆ.

ವೇಣೂರಿನ ಭಗವಾನ್ ಶ್ರೀಬಾಹುಬಲಿ ಸ್ವಾಮಿಗೆ ಇಂದಿನಿಂದ ಮಹಾಮಸ್ತಕಾಭಿಷೇಕ Read More »

Aadhar Card ಇದ್ಯಾ? ಹಾಗಾದ್ರೆ ಈ ವಿಷಯಗಳು ನಿಮಗೆ ಗೊತ್ತಿರಲೇಬೇಕು

ಸಮಗ್ರ ನ್ಯೂಸ್: ಭಾರತದ ಪ್ರತಿಯೊಬ್ಬ ನಾಗರಿಕರಿಗೂ ನೀಡಲಾಗುವ ಒಂದು ಅನನ್ಯ ಸಂಖ್ಯೆ ಮತ್ತು ಗುರುತಿನ, ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಆಧಾರ್‌ ಕಾರ್ಡ್‌ ಮೂಲಕವೂ ಸ್ಕ್ಯಾಮ್‌ಗಳು ನಡೆಯುತ್ತಿವೆ ಅನ್ನೋದು ಗೊತ್ತೇ ಇದೆ. ಬೇರೆಯವರು ನಮ್ಮ ಆಧಾರ್‌ ಕಾರ್ಡ್‌ ಅನ್ನು ದುರುಪಯೋಗಪಡಿಸಿಕೊಂಡು ಕೆಲವು ವಂಚನೆಗಳಲ್ಲಿ ತೊಡಗಿರುವ ಸಾಧ್ಯತೆಗಳು ಸಹ ಇರುತ್ತವೆ. ಆದ್ದರಿಂದ ಕಳೆದ ಆರು ತಿಂಗಳಲ್ಲಿ ನಿಮ್ಮ ಕಾರ್ಡ್ ಅನ್ನು ಎಲ್ಲಿ ಬಳಸಲಾಗಿದೆ ಎಂಬುದನ್ನು ಒಳಗೊಂಡಂತೆ ನಿಮ್ಮ ಆಧಾರ್ ಕಾರ್ಡ್ ಕುರಿತು ಎಲ್ಲಾ ವಿವರಗಳನ್ನು ಪರಿಶೀಲಿಸಲು ಭಾರತ ಸರ್ಕಾರ

Aadhar Card ಇದ್ಯಾ? ಹಾಗಾದ್ರೆ ಈ ವಿಷಯಗಳು ನಿಮಗೆ ಗೊತ್ತಿರಲೇಬೇಕು Read More »

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿದೆ ಜಾಬ್ ಆಫರ್, ಉತ್ತಮ ಸಂಬಳ ಕೂಡ!

ಸಮಗ್ರ ಉದ್ಯೋಗ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 13 ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ನೇಮಕಾತಿ ನಡೆಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಹುದ್ದೆಗೆ ಅರ್ಜಿ ಹಾಕಬಹುದು. ಫೆಬ್ರವರಿ 24, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆಫ್​ಲೈನ್ ಮೂಲಕ ಅರ್ಜಿ ಹಾಕಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿದೆ ಜಾಬ್ ಆಫರ್, ಉತ್ತಮ ಸಂಬಳ ಕೂಡ! Read More »