Ad Widget .

ವಿವಾದಗಳ ಮೇಲೆ ಸಿಲುಕಿರುವ ಚಾಲೆಂಜಿಂಗ್ ಸ್ಟಾರ್| ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು

ಸಮಗ್ರ ನ್ಯೂಸ್: ನಟ ದರ್ಶನ್ ವಿವಾದಗಳ ಮೇಲೆ ವಿವಾದ ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ಆಡಿದ ಮಾತುಗಳು ದರ್ಶನ್​ ಅವರಿಗೆ ಸಂಕಷ್ಟ ತಂದೊಡ್ಡಿವೆ. ಈಗಾಗಲೇ ದರ್ಶನ್ ವಿರುದ್ದ ನಾಲ್ಕು ದೂರುಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈಗ ರೇಣುಕಮ್ಮ ಎಂಬುವರು 37ನೇ ACMM ಕೋರ್ಟ್ ನಲ್ಲಿ ಖಾಸಗಿ ದೂರನ್ನು ದರ್ಶನ್ ವಿರುದ್ಧ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 295(A), 509, 298, 504 ಅಡಿ ಕೇಸ್ ನಮೂದಿಸುವಂತೆ ಖಾಸಗಿ ದೂರನ್ನು ರೇಣುಕಮ್ಮ ದಾಖಲಿಸಿದ್ದಾರೆ. IPC 295(A), ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡುವುದು, IPC 509- ಮಹಿಳೆಯರನ್ನು ಅವಮಾನಿಸುವ ಉದ್ದೇಶ, IPC-298- ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವುದು, IPC- 504- ಶಾಂತಿ ಭಂಗಕ್ಕೆ ಪ್ರಚೋದನೆ ನೀಡುವ ಕಾರ್ಯಕ್ರಮಗಳನ್ನು ದರ್ಶನ ಮಾಡಿದ್ದಾರೆಂದು ಆರೋಪಿಸಲಾಗಿದೆ.

Ad Widget . Ad Widget . Ad Widget .

ರೇಣುಕಮ್ಮ ಪರ ವಕೀಲ ರಂಗನಾಥ್ ಅವರು 37ನೇ ACMM ಕೋರ್ಟ್ ನಲ್ಲಿ ವಾದ ಮಂಡನೆ ಮಾಡಿದ್ದಾರೆ. ಪ್ರಕರಣದ ಅರ್ಜಿ ವಿಚಾರಣೆ ನಡೆಸಿ ಮುಂದೂಡಿದ ACMM ನ್ಯಾಯಾಲಯವು ಮಾರ್ಚ್ 1 ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ. ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಸಹ ದೂರುಗಳನ್ನು ದಾಖಲು ಮಾಡಿವೆ. ಆ ದೂರುಗಳ ವಿಚಾರಣೆ ಇನ್ನಷ್ಟೆ ಆಗಬೇಕಿದೆ.

‘ಕಾಟೇರ’ ಸಿನಿಮಾದ 50ನೇ ದಿನದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾತನಾಡಿದ್ದ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರನ್ನು ಉದ್ದೇಶಿಸಿ, ‘ತಗಡು’, ‘ಗುಮ್ಮಿಸ್ಕೋತೀಯ’ ಎಂಬಿತ್ಯಾದಿ ಪದಗಳನ್ನು ಬಳಸಿದರು, ದರ್ಶನ್​ ಚಿತ್ರರಂಗಕ್ಕೆ ಕಾಲಿರಿಸಿ 25 ವರ್ಷಗಳಾದ ಸಂಭ್ರಮಾಚರಣೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಇಂದು ಇವಳು ಇರ್ತಾಳೆ, ನಾಳೆ ಅವಳು ಇರ್ತಾಳೆ’ ಎಂಬ ಪದಬಳಕೆ ಮಾಡಿದ್ದರು. ಇದರ ಬಗ್ಗೆಯೂ ವಿವಾದ ಹೆಚ್ಚಾಗಿದೆ.

Leave a Comment

Your email address will not be published. Required fields are marked *