Ad Widget .

ದಾಖಲೆ ಬರೆದ ಕೋಕ್ಕೋ ಧಾರಣೆ| ₹ 130 ತಲುಪಿದರೂ ಪೂರೈಕೆ ಕೊರತೆ

ಸಮಗ್ರ ನ್ಯೂಸ್: ಮೊದಲ ಬಾರಿಗೆ 100 ರೂಪಾಯಿಗೆ ತಲುಪಿದ್ದ ಹಸಿ ಕೊಕ್ಕೋ ಧಾರಣೆ ಇದೀಗ ಕೆ.ಜೆ. 130 ರೂ.ಗೆ ಏರಿಕೆಯಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಇಳುವರಿ ಇಲ್ಲದಿರುವುದು ರೈತರಿಗೆ ಕನ್ನಡಿಯ ಗಂಟಾಗಿ ಪರಿಣಮಿಸಿದೆ.

Ad Widget . Ad Widget .

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಕ್ಕೋ ಪೂರೈಕೆ ಆಗದ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಕೊಕ್ಕೋ ಧಾರಣೆಯಲ್ಲಿ ಏರಿಕೆಯಾಗುತ್ತಲೇ ಇತ್ತು. 2-3 ವಾರದ ಹಿಂದೆ ಹಸಿ ಕೊಕ್ಕೋ ಬೀಜ ಕೆಜಿಗೆ 100 ರೂ.ಗೆ ತಲುಪಿತ್ತು. ಬಳಿಕ 120 ರೂ. ವರೆಗೆ ಕ್ಯಾಂಪ್ಕೋ ಸಂಸ್ಥೆ ಖರೀದಿಸಿತ್ತು.

Ad Widget . Ad Widget .

ಇದೀಗ ಕ್ಯಾಂಪ್ಕೋ ಹಸಿ ಕೊಕ್ಕೋವನ್ನು ಕೆ.ಜಿಗೆ 130 ರೂಪಾಯಿಂತೆ ಖರೀದಿ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಒಣ ಕೊಕ್ಕೋ ಕೆ.ಜಿಗೆ 425ರಂತೆ ಕ್ಯಾಂಪ್ಕೋ ಸಂಸ್ಥೆ ಖರೀದಿ ಮಾಡುತ್ತಿದೆ. ಪ್ರಸ್ತುತ ಇರುವ ಬೆಲೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಎಂದು ಎಂದು ಕ್ಯಾಂಪ್ಕೋ ತಿಳಿಸಿದೆ.

ಆದರೆ ಧಾರಣೆ ಹೆಚ್ಚಾದರೂ ಬೇಡಿಕೆ ಪೂರೈಸಲು ಇಳುವರಿ ಕೊರತೆ ಇದೆ. ಈ ಹಿಂದೆ ಧಾರಣೆ ಇಲ್ಲದ ಕಾರಣದಿಂದ ಹಲವರು ಕೊಕ್ಕೋ ಗಿಡಗಳನ್ನು ಕಡಿದಿದ್ದರು.‌ ಇದರಿಂದಾಗಿ ರೈತರಲ್ಲಿ ಉತ್ಪಾದನೆ ಕೊರತೆಯೂ ಧಾರಣೆ ಏರಿಕೆಗೆ ಕಾರಣ ಎನ್ನಲಾಗಿದೆ.

Leave a Comment

Your email address will not be published. Required fields are marked *