ಗಂಗಾ ನದಿಯ ನೀರು ಸ್ನಾನಕ್ಕೆ ಯೋಗ್ಯವಲ್ಲ/ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮಾಹಿತಿ

ಸಮಗ್ರ ನ್ಯೂಸ್: . ಸಂಸ್ಕರಣೆ ಮಾಡದೆ ನದಿಗೆ ಕೊಳಚೆ ನೀರು ಬಿಡುವುದರಿಂದ ಪಶ್ಚಿಮ ಬಂಗಾಳದಲ್ಲಿ ಗಂಗಾ ನದಿಯ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮಾಹಿತಿ ನೀಡಿದೆ. ಈ ರೀತಿ ಸಂಸ್ಕರಣೆ ಮಾಡದ ಕೊಳಚೆ ನೀರನ್ನು ನದಿಗೆ ಬಿಟ್ಟರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.

Ad Widget ... ..

ಒಟ್ಟಾರೆ 258 ಮಿಲಿಯನ್ ಲೀಟರ್‍ಗೂ ಹೆಚ್ಚು ಸಂಸ್ಕರಿಸದ ಕೊಳಚೆ ನೀರನ್ನು ನೇರವಾಗಿ ಗಂಗಾ ನದಿಗೆ ಬಿಡಲಾಗುತ್ತಿದ್ದು, ಮಲದಲ್ಲಿ ಬೆಳೆಯುವ ಕೋಲಿಫಾರ್ಮ್ ಬ್ಯಾಕ್ಟಿರಿಯಾ ನದಿಯ ನೀರಿನಲ್ಲಿ ಕಂಡುಬಂದಿದೆ.

Ad Widget

ಗಂಗಾ ನದಿಯಲ್ಲಿ ಮುಳುಗಿ ಏಳುವುದು ಅಥವಾ ನದಿಯ ನಡದಲ್ಲಿ ವಾಸಿಸುವವರಿಗೆ ಆರೋಗ್ಯದ ಅಪಾಯ ಉಂಟಾಗುತ್ತದೆ ಎಂದು ವರದಿ ಹೇಳಿದೆ.

Leave a Comment

Your email address will not be published. Required fields are marked *