Ad Widget .

ಪ್ಯಾಸೆಂಜರ್ ರೈಲುಗಳ ದರ ಇಳಿಕೆ

ಸಮಗ್ರ ನ್ಯೂಸ್: ಕೋವಿಡ್ ವೇಳೆ ಏರಿಕೆ ಮಾಡಲಾಗಿದ್ದ ಪ್ಯಾಸೆಂಜರ್ ರೈಲುಗಳ ಕನಿಷ್ಠ ದರವನ್ನು ಭಾರತೀಯ ರೈಲ್ವೆ ಮಂಗಳವಾರದಿಂದ ಇಳಿಕೆ ಮಾಡಿದ್ದು, ಸಾಮಾನ್ಯ ರೈಲಿನ ಸೆಕೆಂಡ್ ಕ್ಲಾಸ್ ಕನಿಷ್ಠ ಟಿಕೆಟ್ ದರದಲ್ಲಿ ಶೇ.50ರಷ್ಟು ಕಡಿಮೆಯಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

Ad Widget . Ad Widget .

ಹಲವು ಪ್ಯಾಸೆಂಜರ್ ರೈಲುಗಳ ಹೆಸರನ್ನು ಲಾಕ್‍ಡೌನ್ ತೆರವಾದ ನಂತರ ಎಕ್ಸ್‍ಪ್ರೆಸ್ ಸ್ಪೆಷಲ್ ಅಥವಾ ಮೆಮು/ಡೆಮು ಎಕ್ಸ್‍ಪ್ರೆಸ್ ಎಂದು ಬದಲಾವಣೆ ಮಾಡಿ, ಕನಿಷ್ಠ ಟಿಕೆಟ್ ದರವನ್ನು 10 ರು.ನಿಂದ 30 ರು.ವರೆಗೆ ಏರಿಕೆ ಮಾಡಲಾಗಿತ್ತು. ಆದರೆ ರೈಲ್ವೆಯ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪ್ಯಾಸೆಂಜರ್ ರೈಲಿಗೆ ಕೇವಲ ತೋರಿಕೆಗೆ ಎಕ್ಸ್‍ಪ್ರೆಸ್ ಎಂದು ಹೆಸರು ಬದಲಿಸಿ, ಎಕ್ಸ್‍ಪ್ರೆಸ್‍ಗೆ ಸಮನಾದ ರೈಲು ದರ ಪೀಕುವುದು ಸರಿಯೇ. ಜನಸಾಮಾನ್ಯರು ದುಬಾರಿ ದರ ತೆತ್ತು ಹೇಗೆ ಸಂಚರಿಸಬೇಕು ಎಂದು ಜನರು ಪ್ರಶ್ನೆ ಮಾಡಿದ್ದರು.

Ad Widget . Ad Widget .

ಇದೀಗ ಫೆಬ್ರವರಿ 26ರಂದು ನಡೆದ ರೈಲ್ವೆ ಮಂಡಳಿಯ ಸಭೆಯಲ್ಲಿ, ಎರಡನೇ ದರ್ಜೆಯ ಸಾಮಾನ್ಯ ಟಿಕೆಟ್‍ಗಳ ಕನಿಷ್ಠ ದರವನ್ನು ಮೊದಲಿನಂತೆ ಇಳಿಸಲಾಗಿದೆ. ಈ ಬಗ್ಗೆ ಮುಖ್ಯ ಬುಕಿಂಗ್ ಮೀಸಲಾತಿ ಮೇಲ್ವಿಚಾರಕರಿಗೆ ತಿಳಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಪ್ಯಾಸೆಂಜರ್ ರೈಲಿನ ಸ್ಲೀಪರ್ ಕ್ಲಾಸ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗಿದೆ.

ಸಾಮಾನ್ಯ ರೈಲುಗಳಲ್ಲಿ ಮಂಗಳವಾರದಿಂದಲೇ ಹಳೆ ದರ ಅನ್ವಯವಾಗಲಿದೆ. ಶೀಘ್ರದಲ್ಲೇ ಕಾಯ್ದಿರಿಸದ ಟಿಕೆಟ್ ಬುಕಿಂಗ್ ದರ ಪರಿಷ್ಕರಣೆ ಮಾಡಲಾವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Leave a Comment

Your email address will not be published. Required fields are marked *