Ad Widget .

“ಪಾಕಿಸ್ತಾನ್ ಜಿಂದಾಬಾದ್ ಅಲ್ಲ ನಾಸಿರ್ ಸಾಬ್ ಜಿಂದಾಬಾದ್ ಎಂದು ಘೋಷಣೆ ಮಾಡಿದ್ದು”| ಎಎನ್ಐ ಪತ್ರಕರ್ತ ಎಂ‌. ಮಧು ಎಕ್ಸ್ ನಲ್ಲಿ ಸ್ಪಷ್ಟನೆ

ಸಮಗ್ರ ನ್ಯೂಸ್: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ನಾಸೀರ್ ಹುಸೇನ್ ಅವರು ಗೆದ್ದ ಸಂದರ್ಭದಲ್ಲಿ ಬೆಂಬಲಿಗರ ಗುಂಪಿನಿಂದ ಕೂಗಿದ್ದು “ನಾಸೀರ್ ಸಾಬ್ ಝಿಂದಾಬಾದ್” ಎಂದು, “ಪಾಕಿಸ್ತಾನ್ ಝಿಂದಾಬಾದ್ ಎಂದಲ್ಲ” ಎಂದು ಎಎನ್ಐ ಸುದ್ಧಿ ಸಂಸ್ಥೆಯ ಪತ್ರಕರ್ತ ಎಂ.ಮಧು ತನ್ನ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Ad Widget . Ad Widget .

ರಾಜ್ಯಸಭಾ ಚುನಾವಣೆ ಫಲಿತಾಂಶ ನಂತರದ ಸುದ್ದಿಗಾಗಿ ಸ್ಥಳದಲ್ಲಿದ್ದ ಎಎನ್ಐ ಸುದ್ದಿಸಂಸ್ಥೆಯ ಪತ್ರಕರ್ತ ಎಂ.ಮಧು, “ಕನ್ನಡದ ಮಾಧ್ಯಮಗಳು ಇದನ್ನು ತಿರುಚಿ ಸುದ್ದಿ ಮಾಡಿವೆ. ಇದು ಉದ್ದೇಶಪೂರ್ವಕ ಪ್ರಮಾದ” ಎಂದು ವಿಷಾದಿಸಿದ್ದಾರೆ. ಈ ಕುರಿತು ಅವರು ’ಎಕ್ಸ್’ಖಾತೆಯಲ್ಲಿ ಮಾಡಿರುವ ಪೋಸ್ಟ್ ಹಲವು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

Ad Widget . Ad Widget .

“ಆ ಬೆಂಬಲಿಗರ ಗುಂಪಿನಲ್ಲಿ ಯಾರೂ ಕೂಡ ಯಾವುದೇ ದೇಶದ ಪರವಾಗಿ ಯಾವುದೇ ಘೋಷಣೆಯನ್ನು ಕೂಗಿಲ್ಲ. ಇದನ್ನು ಪೊಲೀಸ್, ಸರಕಾರ ಮತ್ತು ಪ್ರತಿಪಕ್ಷಗಳು ಸಾಬೀತು ಪಡಿಸಬೇಕು. ನಾನು ನೋಡಿದ್ದನ್ನು ಮತ್ತು ನಾನು ಕೇಳಿದ್ದನ್ನು ಹಂಚಿಕೊಂಡಿದ್ದೇನೆ”, ಎಂದು ಅವರು ಹೇಳಿದ್ದಾರೆ.

ಎಎನ್ಐ ಪತ್ರಕರ್ತ ಎಂ.ಮಧು ಅವರು ಆರಂಭದಿಂದ ಕೊನೆಯವರೆಗೂ ಘಟನಾ ಸ್ಥಳದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *