Ad Widget .

ಸುಳ್ಯದ ಇಬ್ಬರು ಮಹಿಳೆಯರಿಗೆ ರಾಷ್ಟ್ರಪತಿ ಭೇಟಿ ಭಾಗ್ಯ| ಮಾ.1ರಂದು ಹಳ್ಳಿಯಿಂದ ದಿಲ್ಲಿಗೆ ಪಯಣ

ಸಮಗ್ರ ನ್ಯೂಸ್: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಯೋಜನೆಯ ‘ಸಂಜೀವಿನೀ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಯಡಿ ಸುಳ್ಯ ತಾಲೂಕಿನ ಇಬ್ಬರಿಗೆ ರಾಷ್ಟ್ರಪತಿ ಭೇಟಿಯ ಭಾಗ್ಯ ಲಭಿಸಿದೆ.

Ad Widget . Ad Widget .

ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಲ್ವರು ಕೊರಗ ಸಮುದಾಯದ ಮಹಿಳೆಯರು ಸೇರಿದಂತೆ ಕರ್ನಾಟಕದಿಂದ ಒಟ್ಟು 35 ಮಂದಿ ದೆಹಲಿಗೆ ತೆರಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರುವಿನ ಕೊರಗ ಸಮುದಾಯಕ್ಕೆ ಸೇರಿದ ಬೆಂಡೋಡಿಯ ಮೀನಾಕ್ಷಿ ಹಾಗೂ ವನಿತಾ ರಾಷ್ಟ್ರಪತಿ ಭೇಟಿ ಮಾಡಲಿದ್ದಾರೆ.

Ad Widget . Ad Widget .

ಮೀನಾಕ್ಷಿ ಕೊಲ್ಲಮೊಗ್ರು ಅವರು ಆದಿಲಕ್ಷ್ಮೀ ಸಂಜೀವಿನೀ ಸ್ವಸಹಾಯ ಗುಂಪಿನ ಸದಸ್ಯೆಯಾಗಿದ್ದು, ಕೀರ್ತಿ ಸಂಜೀವಿನೀ ಒಕ್ಕೂಟದ ಸದಸ್ಯರಾಗಿದ್ದಾರೆ. ಕೃಷಿ ಸಖಿಯು ಆಗಿರುವ ಮೀನಾಕ್ಷಿ ಅವರು ಬಳ್ಳಿಯಿಂದ ಬುಟ್ಟಿ ಸಹಿತ ಇನ್ನಿತ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಪಳಗಿದವರು.

ಕೊಲ್ಲಮೊಗ್ರು ಗ್ರಾಮದ ವನಿತಾ ಅವರು ಆದಿಲಕ್ಷ್ಮೀ ಸ್ವ ಸಹಾಯಯ ಗುಂಪಿನ ಸದಸ್ಯೆಯಾಗಿದ್ದು, ಬಳ್ಳಿಯಿಂದ ಬುಟ್ಟಿ ಸಹಿತ ಅನೇಕ ಕರಕುಶಲವಸ್ತುಗಳನ್ನು ತಯಾರಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮೀನಾಕ್ಷಿ ದೆಹಲಿಗೆ ಹೋಗಿ ರಾಷ್ಟ್ರಪತಿ ಗಳನ್ನು ಭೇಟಿಯಾಗುತ್ತಿರುವುದು ಸಂತಸ ಆಗುತ್ತಿದೆ ಎನ್ನುತ್ತಾರೆ.

ಫೆ.27ರಂದು ಬೆಂಗಳೂರಿಗೆ ತೆರಳಲಿರುವ ಇವರು ಫೆ.29ರಂದು ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ಮಾ.1ರಂದು ರಾಷ್ಟ್ರಪತಿ ಅವರನ್ನು ಹಾಗೂ ಅಮೃತ ಉದ್ಯಾನವನ ಭೇಟಿ ನೀಡುವರು. ಮಾ.2ರಂದು ಮಂಗಳೂರಿಗೆ ವಾಪಾಸ್ಸಾಗಲಿದ್ದಾರೆ.

Leave a Comment

Your email address will not be published. Required fields are marked *