Ad Widget .

ಬೈಕ್ ಚಲಾಯಿಸಿದ ಅಪ್ರಾಪ್ತ ತಮ್ಮ|25 ಸಾವಿರ ರೂ. ದಂಡ ಪಾವತಿಸಿದ ಅಣ್ಣ!

ಸಮಗ್ರ ನ್ಯೂಸ್: ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ಕೊಟ್ಟ ತಪ್ಪಿಗೆ ಮಾತೆಯೊಬ್ಬರಿಗೆ ರೂ. 16000 ದಂಡ ವಿಧಿಸಿ ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಹಾಸನ ಜಿಲ್ಲೆ ಬೇಲೂರು ನ್ಯಾಯಾಲಯ
ಕಳೆದ ವಾರ ತೀರ್ಪು ನೀಡಿತ್ತು. ಇದೀಗ ಅದೇ ರೀತಿಯ ಮತ್ತೊಂದು ಪ್ರಕರಣ ವರದಿಯಾಗಿದೆ. ಇಲ್ಲಿ ಅಪ್ರಾಪ್ತ ತಮ್ಮನಿಗೆ ಬೈಕ್ ಚಲಾಯಿಸಲು ಕೊಟ್ಟ ಅಣ್ಣ ಬರೋಬರಿ ರೂ. 25000 ದಂಡ ತೆತ್ತಿದ್ದಾನೆ.

Ad Widget . Ad Widget .

ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ್ದ ಅಣ್ಣನಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಜೆಎಂಎಫ್​ಸಿ ಕೋರ್ಟ್ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಅಪ್ರಾಪ್ತ ತಮ್ಮನಿಗೆ ಬೈಕ್ ಚಲಾಯಿಸಲು ನೀಡಿದ್ದ ತಪ್ಪಿಗೆ ಸಚಿನ್ ರಮೇಶ್ ರಾಠೋಡ್​ ಎಂಬಾತನಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಈತನ ಅಪ್ರಾಪ್ತ ತಮ್ಮ ಬೈಕ್ ಚಲಾಯಿಸುತ್ತಿದ್ದ ವೇಳೆ ಮಾರ್ಗಮಧ್ಯೆ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಹೀಗಾಗಿ ಫೆಬ್ರವರಿ 23ರಂದು ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Ad Widget . Ad Widget .

ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಆರೋಪದಡಿ ಕೇಸ್ ದಾಖಲಿಸಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಬೈಕ್ ಮಾಲೀಕ ಸಚಿನ್​ ರಮೇಶ್ ರಾಠೋಡ್​ಗೆ 25,000 ರೂ. ದಂಡ ವಿಧಿಸಲಾಗಿದೆ.

Leave a Comment

Your email address will not be published. Required fields are marked *