Ad Widget .

ಕುಕ್ಕೆ ಸುಬ್ರಹ್ಮಣ್ಯ: ಹಾವು ತುಳಿಯಲಿದ್ದ ಮಗುವನ್ನು ರಕ್ಷಿಸಿದ ಬೀದಿನಾಯಿ!!

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ ರಸ್ತೆಯಲ್ಲಿ ತೆರಳುತ್ತಿದ್ದ ಭಕ್ತರ ಗುಂಪಿನಲ್ಲಿದ್ದ ಮಗುವೊಂದು ಹಾವನ್ನು ತುಳಿಯುವುದನ್ನು ಬೀದಿ ನಾಯಿಯೊಂದು ತಪ್ಪಿಸಿ ರಕ್ಷಿಸಿದ ಘಟನೆ ನಡೆದಿದೆ.

Ad Widget . Ad Widget .

ಆದಿ ಸುಬ್ರಹ್ಮಣ್ಯ ಬಳಿ ಸಾಗುತ್ತಿದ್ದ ತಂಡದಲ್ಲಿ ಮಹಿಳೆಯೊಬ್ಬರು ಚಿಕ್ಕ ಮಗುವನ್ನು ರಸ್ತೆಯಲ್ಲಿ ಬಿಟ್ಟು ಪಕ್ಕದ ಅಂಗಡಿಗೆ ಹಣ್ಣುಕಾಯಿ ಖರೀದಿಸಲು ತೆರಳಿದ್ದರು.

Ad Widget . Ad Widget .

ಆಗ ಮಗು ರಸ್ತೆಯ ಬದಿಗೆ ಬಂದಿದ್ದು, ಅದೇ ಸಮಯಕ್ಕೆ ನಾಗರಹಾವೊಂದು ರಸ್ತೆ ದಾಟುತ್ತಿತ್ತು. ಮಗು ಇನ್ನೇನು ಹಾವನ್ನು ತುಳಿಯಬೇಕು ಅನ್ನುವಷ್ಟರಲ್ಲಿ ಅಲ್ಲಿಯೇ ಮಲಗಿದ್ದ ಬೀದಿ ನಾಯಿ ಓಡಿ ಹೋಗಿ ಮಗುವಿಗೆ ಅಡ್ಡ ನಿಂತು ಹಾವನ್ನು ತುಳಿಯದಂತೆ ಹಾಗೂ ಹಾವು ತೆರಳಲು ಅವಕಾಶ ನೀಡಿ ಮಗುವಿನ ರಕ್ಷಕನಾಗಿದೆ.

ಈ ಘಟನೆಯ ಪ್ರತ್ಯಕ್ಷದರ್ಶಿಗಳು ಇತರರಿಗೆ ತಿಳಿಸಿದ್ದು ಇದೀಗ ಘಟನೆ ಬಗ್ಗೆಯ ಬರಹ ಸಾಮಾಜಿಕ ಜಾಲಣದಲ್ಲಿ ವೈರಲ್‌ ಆಗಿದೆ.

Leave a Comment

Your email address will not be published. Required fields are marked *