ಮಾಜಿ ಸಿಎಂ ಜಗದೀಶ್ ಶೆಟ್ಟರ್ ಫೇಸ್​​ಬುಕ್ ಖಾತೆ ಹ್ಯಾಕ್

ಸಮಗ್ರ ನ್ಯೂಸ್: ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಫೇಸ್​​ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಖಾತೆಗೆ 7.50 ಲಕ್ಷ ಹಣ ಬಂದಿದ್ದು, ನಾನು ಮಾಡಿದ ವ್ಯವಹಾರದಲ್ಲಿ ಆರಂಭದಲ್ಲೇ ಲಾಭ ಬಂದಿದೆ. ನೀವು ವ್ಯವಹಾರ ನಡೆಸಿ ಲಾಭ ಮಾಡಿಕೊಳ್ಳಿ ಎಂದು ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಕ್ರಿಸ್ಟಿನಾ ಪೆನಾಟೆ ಎಂಬುವರ ಸಲಹೆ ಪಡೆಯಬಹುದು ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ.

Ad Widget ... ..

ತಂದೆಯ ಫೇಸ್​ಬುಕ್ ಖಾತೆ ಹ್ಯಾಕ್ ಆಗಿರುವ ಮಾಹಿತಿ ನೀಡಿದ ಪುತ್ರ ಸಂಕಲ್ಪ ಶೆಟ್ಟರ್, ಯಾರೂ ಕೂಡ ಹಣ ಹಾಕಬಾರದು ಎಂದು ಮನವಿ ಮಾಡಿದ್ದಾರೆ.

Ad Widget

Leave a Comment

Your email address will not be published. Required fields are marked *