Ad Widget .

ವಯನಾಡಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ಘಟನೆ/ ಕರ್ನಾಟಕದ ಹಣ ಬೇಡ ಎಂದು ಮೃತರ ಕುಟುಂಬ

ಸಮಗ್ರ ನ್ಯೂಸ್: ಕೇರಳದ ವಯನಾಡಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಕರ್ನಾಟಕದಿಂದ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದು, ಇದು ಹಲವು ವಿವಾದಗಳಿಗೆ ಕಾರಣವಾಗಿತ್ತು. ಆದರೆ ಇದೀಗ ಕರ್ನಾಟಕದ ಹಣ ಬೇಡ ಎಂದು ಮೃತರ ಕುಟುಂಬ ಹೇಳಿದೆ.

Ad Widget . Ad Widget .

ಕೇರಳದಲ್ಲಿ ಆನೆ ದಾಳಿಯಿಂದ ವ್ಯಕ್ತಿ ಮೃತಪಟ್ಟರೆ ಕರ್ನಾಟದಿಂದ ಏಕೆ ಹಣ ನೀಡಬೇಕು ಎಂದು ಚರ್ಚೆಗಳಾಗಿದ್ದವು. ನಮ್ಮ ರಾಜ್ಯದಲ್ಲಿ ಆನೆ ತುಳಿತದ ಸಾವಿಗೆ ಐದು ಲಕ್ಷ ನೀಡಲು ಕಷ್ಟಪಡುವ ಸರ್ಕಾರ ಹಿರಿಯ ನಾಯಕರನ್ನು ಮೆಚ್ಚಿಸಲು ಈ ರೀತಿ ಮಾಡಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು.

Ad Widget . Ad Widget .

ಈ ಎಲ್ಲ ಬೆಳವಣಿಗೆಗಳನ್ನು ಕಂಡು ಸಂತ್ರಸ್ತರ ಕುಟುಂಬ ನಿಮ್ಮ ಪರಿಹಾರ ಹಣವೇ ಬೇಡ ಎಂದು ಹೇಳಿದೆ.

Leave a Comment

Your email address will not be published. Required fields are marked *