Ad Widget .

ಪ್ರೀತಿಸಿದವ ಬೇರೆ ಹುಡುಗಿಯನ್ನು ಮದುವೆಯಾಗಿದ್ದಕ್ಕೆ ಯುವತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಪ್ರೀತಿ ಮಾಡಿ ಪ್ರೀತಿಸಿದ ಯುವಕ ಬೇರೆ ಹುಡುಗಿಯನ್ನು ಮದುವೆಯಾಗಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ತಾಲೂಕಿನ ಕೂನಬೇವು ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ವಿಶಾಲಾಕ್ಷಿ ಎಂಬಾಕೆ ಚಿತ್ರದುರ್ಗ ನಗರದ ಡಿಪ್ಲೋಮಾ ಕಾಲೇಜಿನಲ್ಲಿ ಓದುತ್ತಿದ್ದಳು. ಈ ವೇಳೆ ಅದೇ ಕೂನಬೇವು ಗ್ರಾಮದ ಚಾಲಕ ತಿಪ್ಪೇಸ್ವಾಮಿ ಎಂಬಾತ ಪ್ರೀತಿಸು ಎಂದು ಕಾಡಿದ್ದನು. ಕೊನೆಗೂ ಮನಸೋತ ವಿಶಾಲಾಕ್ಷಿ, ತಿಪ್ಪೇಸ್ವಾಮಿ ಜೊತೆ ಪ್ರೀತಿಯಲ್ಲಿ ಬಿದ್ದು ಓಡಾಟ ನಡೆಸಿದ್ದಳು. ತಿಪ್ಪೇಸ್ವಾಮಿ ಎಸ್ಟಿ, ವಿಶಾಲಾಕ್ಷಿ ಎಸ್ಸಿ ಸಮುದಾಯಕ್ಕೆ ಸೇರಿದ್ದಳು. ಹೀಗಾಗಿ, ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧವಿತ್ತು. ಈ ಹಿನ್ನಲೆ ಕಳೆದ ಆರು ತಿಂಗಳ ಹಿಂದೆ ಇಬ್ಬರೂ ಊರು ತೊರೆದು ನಾಯಕನಹಟ್ಟಿ ಬಳಿಯ ಚೌಡಮ್ಮ ದೇಗುಲದಲ್ಲಿ ಮದುವೆ ಆಗಿದ್ದರು. ಆದ್ರೆ, ವಿಷಯ ತಿಳಿದ ಪೋಷಕರು‌‌‌ ಈ ಜೋಡಿಯನ್ನು ಹಿಡಿದು ತಂದು ಪಂಚಾಯತಿ ನಡೆಸಿದ್ದರು. ತಿಪ್ಪೇಸ್ವಾಮಿ ಪೋಷಕರು ವಿಶಾಲಾಕ್ಷಿ ಕೊರಳಿಗೆ ಕಟ್ಟಿದ ಅರುಶಿಣ ಕೊಂಬು ಕಿತ್ತೆಸೆದು‌‌ ಬರುವಂತೆ ಹೇಳಿ ಬೇರ್ಪಡಿಸಿದ್ದರು. ವಿಶಾಲಾಕ್ಷಿ ತನ್ನ ಪೋಷಕರ ಜೊತೆ ತೆರಳಿ ವಾಸವಾಗಿದ್ದಳು.

Ad Widget . Ad Widget .

ಇದಾದ ಬಳಿಕ ಈಕೆ ಮತ್ತೆ ಕಾಲೇಜಿಗೆ‌ ಹೋಗುತ್ತಿದ್ದಳು. ಆದ್ರೆ, ಕಳೆದ ಗುರುವಾರ ತಿಪ್ಪೇಸ್ವಾಮಿ ಮತ್ತೊಬ್ಬಳ ಜತೆ ಮದುವೆ ಆಗಿರುವುದು‌ ತಿಳಿದಿದು ಕಂಗಾಲಾಗಿದ್ದಾಳೆ. ಅಂತೆಯೇ ನಿನ್ನೆ ಸಂಜೆ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆ‌ ಸಂಬಂಧಿಕರು, ಗ್ರಾಮಸ್ಥರು ಜಮಾಯಿಸಿದ್ದಾರೆ. ತಿಪ್ಪೇಸ್ವಾಮಿ ಮತ್ತು ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ. ಕೇವಲ ಜಾತಿ‌ಕಾರಣಕ್ಕೆ ತಿಪ್ಪೇಸ್ವಾಮಿ ಜೊತೆ ವಿವಾಹವಾಗಿದ್ದ ವಿಶಾಲಾಕ್ಷಿಯನ್ನು ಬೇರ್ಪಡಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ತಿಪ್ಪೇಸ್ವಾಮಿಗೆ ಸ್ವಜಾತಿಯ ಯುವತಿ ಜತೆ ಮದುವೆ ಮಾಡಿದ್ದಾರೆ. ಹೀಗಾಗಿ, ಅರಿಶಿಣ‌ಕೊಂಬನ್ನೇ ತಾಳಿಯೆಂದು, ತಿಪ್ಪೇಸ್ವಾಮಿಯೇ ಪತಿ ಎಂದು ನಂಬಿಕೊಂಡಿದ್ದ ವಿಶಾಲಾಕ್ಷಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಂದಲ್ಲ, ನಾಳೆ ತಿಪ್ಪೇಸ್ವಾಮಿ ತನ್ನ ಬಳಿಗೆ ಬಂದು ಬಾಳ್ವೆ ಮಾಡುತ್ತಾನೆಂದೇ ವಿಶಾಲಾಕ್ಷಿ‌ನಂಬಿಕೊಂಡಿದ್ದಳು. ಆದ್ರೆ, ತಿಪ್ಪೇಸ್ವಾಮಿ ಮತ್ತು ಕುಟುಂಬದವರ ದರ್ಪ, ವಂಚನೆಯಿಂದ ಬೇಸತ್ತು ಸಾವಿಗೆ ಶರಣಾಗಿದ್ದಾಳೆ. ಹೀಗಾಗಿ, ಸೂಕ್ತ ಕಾನೂನು ಕ್ರಮ‌ ಜರುಗಿಸಬೇಕೆಂಬುದು‌ ಯುವತಿ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *