Ad Widget .

ಪತ್ನಿಗೆ ಸೀರೆ ಇಷ್ಟವಾಗದ ಹಿನ್ನೆಲೆ ಅಂಗಡಿ ಮಾಲಿಕನಿಗೆ ಹಲ್ಲೆ ಮಾಡಿದ ಪತಿ

ಸಮಗ್ರ ನ್ಯೂಸ್: ಉತ್ತರ ಕನ್ನಡದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹೌದು ಪತ್ನಿಗೆ ಸೀರೆ ಇಷ್ಟವಾಗದ ಹಿನ್ನೆಲೆಯಲ್ಲಿ ಪತಿ ಅಂಗಡಿ ಮಾಲಿಕನಿಗೆ ಬೈದು ಹಲ್ಲೆ ಮಾಡಿರುವ ಘಟನೆ ನಡೆದಿದೆ.

Ad Widget . Ad Widget .

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಸಿಪಿ ಬಜಾರದಲ್ಲಿ ಮಹಮ್ಮದ್ ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಿರಸಿಯ ನೆಹರುನಗರ ನಿವಾಸಿಯಾಗಿರುವ ಮಹಮ್ಮದ್​ ಕುಟುಂಬದೊಂದಿಗೆ ಫೆ.24 ರಂದು ಸಿಪಿ ಬಜಾರ್​​ನಲ್ಲಿರುವ ಸಾಗರ ಬಟ್ಟೆ ಅಂಗಡಿಗೆ ಬಂದು ಬಟ್ಟೆ ಖರೀದಿ ಮಾಡಿಕೊಂಡು ಹೋಗಿದ್ದಾನು. ಮಹ್ಮಮದ್​ ತೆಗೆದುಕೊಂಡು ಹೋದ ಸೀರೆ ಆತನ ಪತ್ನಿ ಇಷ್ಟವಾಗಿಲ್ಲ. ಹೀಗಾಗಿ ಮಹಮ್ಮದ್​ ರಾತ್ರಿ 9 ಗಂಟೆ ಸುಮಾರಿಗೆ ಮತ್ತೆ ಸೀರೆ ಅಂಗಡಿಗೆ ಬಂದಿದ್ದಾನೆ.

Ad Widget . Ad Widget .

ಬೇರೆ ಸೀರೆ ಕೊಡಿ ಎಂದು ಹೇಳಿದ್ದಾನೆ. ಆಗ ಅಂಗಡಿಯಲ್ಲಿನ ಸಿಬ್ಬಂದಿ ಬೇರೆ ಬೇರೆ ಸೀರೆಗಳನ್ನೆಲ್ಲ ತೋರಿಸಿದ್ದಾರೆ. ಆದರೆ ಮಹಮ್ಮದ್ ಸೀರೆಗಳು ಸರಿ ಇಲ್ಲ, ಬೇರೆ ಸೀರೆಗಳನ್ನು ತೋರಿಸಿ ಎಂದಿದ್ದಾನೆ. ಅದಕ್ಕೆ ಸಿಬ್ಬಂದಿ ನಮ್ಮಲ್ಲಿರುವುದು ಇಷ್ಟೆ ಸೀರೆ ಎಂದಿದ್ದಾರೆ. ಅದಕ್ಕೆ ಮಹ್ಮಮದ್ ಅವಾಚ್ಯ ಶಬ್ದಗಳಿಂದ ಬೈದು “ನೀನು ಒಳ್ಳೆ ಸೀರೆ ಇಡದೆ ಇದ್ದರೆ ಯಾಕೆ ಅಂಗಡಿ ಇಟ್ಟಿದ್ದೀಯಾ”? ಅಂತ ಬೈದಿದ್ದಾನೆ. ಅದಕ್ಕೆ ಸಿಬ್ಬಂದಿ ಬೈಯಬೇಡ, ನೀನು ಖರೀದಿಸಿದ ಸೀರೆಯ ಹಣ ಮರಳಿ ಕೊಡುತ್ತೇನೆ” ಎಂದು ಹೇಳಿದ್ದಾರೆ.

ಕೂಡಲೆ ಅಂಗಡಿಯಿಂದ ಹೊರಗೆ ಹೋಗಿ ಮಹ್ಮಮದ್​ ತನ್ನ ಗೆಳೆಯನನ್ನು ಕರೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಮಾಡಿದ್ದಾರೆ. ಇನ್ನೊಂದು ದಿನ ನೀವು ಇಲ್ಲಿಗೆ ಬಂದು ಹೇಗೆ ಅಂಗಡಿ ನಡೆಸುತ್ತೀರಿ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಬೆದರಿಕೆ ಹಾಕಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *