Ad Widget .

ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣ: ಬಜರಂಗದಳ ದಾಳಿಗೆ ಹೆದರಿ ನಾಪತ್ತೆಯಾಗಿರುವ ಅನುಮಾನ

Samagra news: ಪಿಹೆಚ್​ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಜರಂಗದಳದ ದಾಳಿಗೆ ಹೆದರಿ ವಿದ್ಯಾರ್ಥಿನಿ ದಿಢೀರ್ ನಾಪತ್ತೆಯಾದರೇ ಎಂಬ ಅನುಮಾನ ಇದೀಗ ಕಾಡತೊಡಗಿದೆ.

Ad Widget . Ad Widget .

ಶಾರೂಖ್ ಜೊತೆ ಸಂಪರ್ಕದಲ್ಲಿರುವ ವಿಷಯ ಬಹಿರಂಗವಾಯಿತು ಎಂಬ ಕಾರಣಕ್ಕೆ ಫೆಬ್ರವರಿ 17ರ ಬೆಳಿಗ್ಗೆಯೇ ವಿದ್ಯಾರ್ಥಿನಿ ಪರಾರಿಯಾಗಿರಬಹುದು ಎಂಬ ಕುರಿತು ಪೊಲೀಸರು ಕಲೆಹಾಕಿರುವ ಮಾಹಿತಿಯಿಂದ ತಿಳಿದುಬಂದಿದೆ.

Ad Widget . Ad Widget .

ಶಾರೂಖ್​ಗೂ ರೂಮ್ ಕಡೆ ಬಾರದಂತೆ ತಿಳಿಸಿ ಚೈತ್ರಾ ಪರಾರಿಯಾಗಿದ್ದರು. 2017ರಿಂದಲೇ ಶಾರೂಖ್ ಜೊತೆ ಚೈತ್ರಾಗೆ ನಂಟು ಇತ್ತು ಎನ್ನಲಾಗಿದೆ.

ಬೆಂಗಳೂರಿಗೆ ತೆರಳಿರುವ ಶಂಕೆ
ದಿಢೀರ್ ನಾಪತ್ತೆಯಾಗಿರುವ ಚೈತ್ರಾ ಬೆಂಗಳೂರಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಮಾಡೂರಿನ ಪಿಜಿ ಬಿಟ್ಟ ಒಬ್ಬಂಟಿಯಾಗಿ ಬೆಂಗಳೂರಿಗೆ ಒಂಟಿ ಪ್ರಯಾಣ ಮಾಡಿದ್ದಾರೆ. ಫೆಬ್ರವರಿ 17ರ ಬೆಳಿಗ್ಗೆ 9 ಗಂಟೆಗೆ ಪಿಜಿಯಿಂದ ಸ್ಕೂಟರ್​​​ನಲ್ಲಿ ಪ್ರಯಾಣ ಮಾಡಿರುವ ಅವರು, ಪಂಪ್​​ವೆಲ್​​ನಲ್ಲಿ ಗಾಡಿ ನಿಲ್ಲಿಸಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದರು. ಬಳಿಕ ನೇರವಾಗಿ ಸುರತ್ಕಲ್​​ಗೆ ತೆರಳಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದ್ದರು, ಅಲ್ಲಿಂದ ಕೆಎಸ್​ಆರ್​ಟಿಸಿ ಬಸ್ಸು ಹತ್ತಿ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್​​ನಲ್ಲಿ ಬಸ್ಸು ಇಳಿದು ಮೊಬೈಲ್ ಆನ್ ಮಾಡಿದ್ದ ಚೈತ್ರಾ, ಆ ಬಳಿಕ ಯಾರಿಗೋ ಕರೆ ಮಾಡಿ ರಹಸ್ಯ ಜಾಗಕ್ಕೆ ತೆರಳಿದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಸದ್ಯ ಬೆಂಗಳೂರಿನಲ್ಲಿ ಚೈತ್ರಾ ಇರುವ ಜಾಗದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಚೈತ್ರಾ ಕರೆ ಮಾಡಿದ್ದು ಯಾರಿಗೆ? ಇರೋದು ಯಾರ ಜೊತೆ ಎಂಬ ಬಗ್ಗೆ ಅನುಮಾನ ಹೆಚ್ಚಾಗಿದೆ.

Leave a Comment

Your email address will not be published. Required fields are marked *