Ad Widget .

ಚಾಲಕನಿಲ್ಲದೆ ಚಲಿಸಿದ ರೈಲು/ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಮಗ್ರ ನ್ಯೂಸ್: ಗೂಡ್ಸ್ ರೈಲೊಂದು ಯಾವುದೇ ಚಾಲಕನಿಲ್ಲದೆ ತಂತಾನೇ ಬರೋಬ್ಬರಿ 70 ಕಿ.ಮೀ. ದೂರ ಚಲಿಸಿದ ಅಚ್ಚರಿಯ ಘಟನೆ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‍ನಲ್ಲಿ ನಡೆದಿದೆ. ಜಮ್ಮುವಿನಿಂದ ಪಂಜಾಬ್‍ಗೆ ಚಲಿಸುತ್ತಿದ್ದ ಈ ಗೂಡ್ಸ್ ರೈಲು, ಚಾಲಕನ ಬದಲಾವಣೆಗಾಗಿ ಜಮ್ಮುವಿನ ಕಠುವಾ ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 7.25ರ ಸುಮಾರಿಗೆ ನಿಂತಿತ್ತು. ರೈಲು ನಿಲ್ಲಿಸಿದ ಚಾಲಕ ಅದರಿಂದ ಕೆಳಗಿಳಿವ ವೇಳೆಗೆ ಹ್ಯಾಂಡ್ ಬ್ರೇಕ್ ಹಾಕಲು ಮರೆತುಬಿಟ್ಟಿದ್ದಾನೆ. ಹೀಗಾಗಿ ಇಳಿಜಾರಿದ್ದ ಕಾರಣ ರೈಲು ಚಲಿಸಲು ಪ್ರಾರಂಭಿಸಿದೆ.

Ad Widget . Ad Widget .

ಸುಮಾರು 53 ವ್ಯಾಗನ್‍ಗಳಿದ್ದ ರೈಲು ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಿದೆ. ರೈಲು ತಂತಾನೇ ಚಲಿಸುತ್ತಿರುವುದು ಕೂಡಲೇ ಅಧಿಕಾರಿಗಳ ಗಮನಕ್ಕೆ ಬಂದಿದೆಯಾದರೂ ಅಷ್ಟು ವೇಗವಾಗಿ ಚಲಿಸುತ್ತಿದ್ದ ರೈಲನ್ನು ನಿಲ್ಲಿಸುವುದು ಭಾರೀ ಸವಾಲಿನ ಕೆಲಸವಾಗಿತ್ತು. ಕೊನೆಗೆ ರೈಲು 70 ಕಿ.ಮೀ. ಕ್ರಮಿಸಿದ ಬಳಿಕ ಪಂಜಾಬ್‍ನ ಹೋಶಿಯಾರ್‍ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಹಳಿಯಲ್ಲಿ ಮರಳಿನ ಚೀಲಗಳನ್ನು ಇಟ್ಟು ರೈಲನ್ನು ನಿಲ್ಲಿಸಲಾಗಿದೆ. ತನ್ಮೂಲಕ ರೈಲ್ವೆ ಇಲಾಖೆಯ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Ad Widget . Ad Widget .

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ. ಚಾಲಕನಿಲ್ಲದೇ ರೈಲು ಓಡುತ್ತಿರುವ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

Leave a Comment

Your email address will not be published. Required fields are marked *