Ad Widget .

ಏಕಕಾಲಕ್ಕೆ ಐದು ಏಮ್ಸ್ ಆಸ್ಪತ್ರೆ ಹಾಗೂ ಕಾಲೇಜುಗಳ ಉದ್ಘಾಟನೆ/ ಭಾರತದಲ್ಲಿ ಅಭಿವೃದ್ಧಿಯ ಶಕೆ ಅತ್ಯಂತ ವೇಗವಾಗಿ ಮುಂದುವರೆಯಲಿದೆ: ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ಮೋದಿ ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಏಕಕಾಲಕ್ಕೆ ಐದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಆಸ್ಪತ್ರೆ ಹಾಗೂ ಕಾಲೇಜುಗಳನ್ನು ಭಾನುವಾರದಂದು ಉದ್ಘಾಟಿಸಿದರು. ಗುಜರಾತ್‍ನ ರಾಜಕೋಟ್, ಪಂಜಾಬ್‍ನ ಬಠಿಂಡಾ, ಉತ್ತರ ಪ್ರದೇಶದ ರಾಯ್‍ಬರೇಲಿ, ಪ.ಬಂಗಾಳದ ಕಲ್ಯಾಣಿ ಮತ್ತು ಆಂಧ್ರಪ್ರದೇಶದ ಮಂಗಳಗಿರಿಯಲ್ಲಿ ಏಮ್ಸ್ ಸ್ಥಾಪನೆ ಆಗಿವೆ.

Ad Widget . Ad Widget .

ಇದೇ ವೇಳೆ ಮಾತನಾಡಿದ ಪ್ರಧಾನಿ, ನರೇಂದ್ರ ಮೋದಿಯ ಗ್ಯಾರಂಟಿಗಳು ಇತರರ ಮೇಲೆ ಭರವಸೆ ಮಸುಕಾದಾಗ ಪ್ರಾರಂಭ ಆಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳಲ್ಲಿ ಕೇವಲ 7 ಏಮ್ಸ್‍ಗಳಿಗೆ ಅನುಮೋದನೆ ಕೊಡಲಾಗಿತ್ತು. ಈಗ 10 ದಿನಗಳೊಳಗೆ 10 ಹೊಸ ಏಮ್ಸ್ ಶಾಖೆಗಳನ್ನು ಉದ್ಘಾಟಿಸಲಾಗಿದೆ. ಇದೇ ರೀತಿ ಭಾರತದಲ್ಲಿ ಅಭಿವೃದ್ಧಿಯ ಶಕೆ ಅತ್ಯಂತ ವೇಗವಾಗಿ ಮುಂದುವರೆಯಲಿದೆ ಎಂದರು

Ad Widget . Ad Widget .

Leave a Comment

Your email address will not be published. Required fields are marked *