ಸಮಗ್ರ ನ್ಯೂಸ್:ಕರ್ನಾಟಕ ರಕ್ಷಣಾ ವೇದಿಕೆ ನಾಮಫಲಕ ವಿಚಾರವಾಗಿ ಡಿಸೆಂಬರ್ 27 ರಂದು ಹೋರಾಟ ಮಾಡಿ, ಫೆಬ್ರವರಿ 28ರ ವರೆಗೆ ಗಡುವು ನೀಡಿದ್ದರ ಪರಿಣಾಮ ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡ ಕಡ್ಡಾಯ ಮಾಡಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ಪರಿಣಾಮವಾಗಿ ಈಗ ಬೆಂಗಳೂರು ಕನ್ನಡಮಯ ಆಗುತ್ತಿದೆ. ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನೂ ಉದ್ಯೋಗ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ. ಎಲ್ಲ ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲೇಬೇಕು. ಈ ಸಂಬಂಧ ಹೋರಾಟ ಮಾಡಲು ಚಿಂತಿಸಿದ್ದೇವೆ. ನಾಳೆ ನಡೆಯುವ ಕರವೇ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಟಿ.ಎ.ನಾರಾಯಣಗೌಡ ತಿಳಿಸಿದರು
ಇನ್ನೂ ಬೆಳಗಾವಿ ಜಿಲ್ಲೆಯಲ್ಲೂ ಸಂಪೂರ್ಣವಾಗಿ ಕನ್ನಡಮಯ ಆಗಬೇಕು. ನೀವು ಯಾರು ಬೇಕಾದರೂ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಲಿ. ಅದರಿಂದ ನಮಗೇನೂ ಆಗಬೇಕಿಲ್ಲ, ಆದರೆ ಕನ್ನಡ ಬೋರ್ಡ್ ಹಾಕಬೇಕು. ಫೆಬ್ರವರಿ 28ರ ಬಳಿಕವೂ ಕನ್ನಡ ಬಳಸದಿದ್ದರೆ ಮತ್ತೊಮ್ಮೆ ಗುಡುಗು-ಸಿಡಿಲು ಆಗಲಿದೆ ಎಂದು ಎಚ್ಚರಿಕೆ ನೀಡಿದರು.