Ad Widget .

ಲೋಕ ಗೆಲ್ಲಲ್ಲು ತಂತ್ರ|ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಮಾಡಿದ ಬ್ರದರ್ಸ್‌ಗಳ ಬ್ರದರ್‌‌ರಿಂದ ಕುಕ್ಕರ್‌ ಹಂಚಿಕೆ ಎಂದು ಬಿಜೆಪಿ ಪೋಸ್ಟ್

ಸಮಗ್ರ ನ್ಯೂಸ್: ಇನ್ನೇನು ಲೋಕಸಭಾ ಚುನಾವಣೆ ಸಮೀಪದಲ್ಲಿ ಇದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ಮತದಾರರನ್ನು ಸೆಳೆಯಲು ಕುಕ್ಕರ್ ವಿತರಿಸಿ ಆಮಿಷವೊಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಟ್ವೀಟ್ ಮೂಲಕ ಕ್ರಮಕ್ಕೆ ಒತ್ತಾಯಿಸಿದೆ.

Ad Widget . Ad Widget .

ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಮಾಡಿದ ಬ್ರದರ್ಸ್‌ಗಳ ಬ್ರದರ್‌‌ರಿಂದ ಕುಕ್ಕರ್‌ ಹಂಚಿಕೆ! ದೇಶದ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಅವರಿಗೆ ಚುನಾವಣೆ ಘೋಷಣೆ ಮುನ್ನವೇ ಸೋಲಿನ ಭೀತಿ ಶುರುವಾಗಿದೆ. ಗೂಂಡಾಗಿರಿ ಮಾಡುವ ಜೊತೆಗೆ ಸ್ವಲ್ಪ ಅಭಿವೃದ್ಧಿಯನ್ನು ಮಾಡಿದ್ದರೆ, ಈಗ ಊರಿಗಿಂತ ಮುಂಚೆ ಮತದಾರರಿಗೆ ಕುಕ್ಕರ್‌ ಹಂಚುವ ಪ್ರಮೇಯ ಬರುತ್ತಿರಲಿಲ್ಲಾ ಮಾನ್ಯ ಡಿ .ಕೆ. ಸುರೇಶ್‌ ಅವರೇ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬಿಜೆಪಿ ಪೋಸ್ಟ್ ಮಾಡಿದೆ.

Ad Widget . Ad Widget .

ಹಾಗೆ ಕನಕಪುರದಲ್ಲಿ ನೀವು ಪ್ರತಿ ಬಾರಿ ಗೆಲ್ಲುವುದು ಗೂಂಡಾಗಿರಿಯಿಂದ ಎಂದು ತಿಳಿದಿತ್ತು, ಆದರೆ ನಿಮ್ಮ ಗೂಂಡಾ ಮನಸ್ಸಿನೊಳಗೆ ವಾಮಮಾರ್ಗದ ಕುಕ್ಕರ್‌ ವಿಶಲ್‌ ಸಹ ಇದೆ ಎಂಬುದು ಇಂದು ಜಗಜ್ಜಾಹೀರಾಗಿದೆ. ಮತದಾರರಿಗೆ ಕುಕ್ಕರ್‌ ಆಮಿಷ ಒಡ್ಡುತ್ತಿರುವ ಸಂಸದ ಡಿಕೆ ಸುರೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಟ್ವೀಟ್ ಮೂಲಕ ಬಿಜೆಪಿ ಒತ್ತಾಯಿಸಿದೆ. ಜೊತೆಗೆ ಕುಕ್ಕರ್​ ಬಾಕ್ಸ್​ಗಳ ಫೋಟೋಗಳನ್ನು ಹಂಚಿಕೊಂಡಿದೆ.

Leave a Comment

Your email address will not be published. Required fields are marked *