ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಭಾರತೀಯ ನೌಕಾಪಡೆಯ ಬಲ ಹೆಚ್ಚಿಸಲು ಮಹತ್ವದ ನಿರ್ಧಾರ ಕೈಗೊಂಡಿದ್ದು, 19,000 ಕೋಟಿ ವೆಚ್ಚದಲ್ಲಿ 200 ಬ್ರಹ್ಮಸ್ ಕ್ಷಿಪಣಿಗಳ ಖರೀದಿಗೆ ಭದ್ರತೆ ಕುರಿತ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಸಮುದ್ರ ಪ್ರದೇಶವನ್ನು ಉತ್ತಮವಾಗಿ ನಿಯಂತ್ರಿಸಲು ಮತ್ತು ಯಾವುದೇ ಕಾರ್ಯಾಚರಣೆಗೆ ಸಿದ್ಧವಾಗಿರಲು ಭಾರತೀಯ ನೌಕಾಪಡೆಗೆ ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ಮಾರ್ಚ್ ಕೊನೆಯ ವಾರದಲ್ಲಿ ಬ್ರಹ್ಮಸ್ ಏರೋಸ್ಪೇಸ್ ಮತ್ತು ಕೇಂದ್ರ ಸರ್ಕಾರವು ಕ್ಷಿಪಣಿಗಳ ಖರೀದಿಗೆ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದು ಆಕ್ರಮಣಕಾರಿ ದಾಳಿಗಳನ್ನು ನಿಯಂತ್ರಿಸುವ ಸಾಮಥ್ರ್ಯ ಮತ್ತು ತುರ್ತು ಸಂದರ್ಭಗಳಲ್ಲಿ ಯುದ್ಧನೌಕೆಗಳ ವಿನಾಶಗೊಳಿಸುವ ಸಾಮಥ್ರ್ಯವನ್ನು ಒಳಗೊಂಡಿದೆ. ಆದ್ದರಿಂದ ಬ್ರಹ್ಮಸ್ ಕ್ಷಿಪಣಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಬ್ರಹ್ಮಸ್ ಏರೋಸ್ಪೇಸ್ ಶೀಘ್ರದಲ್ಲೇ ಅವುಗಳನ್ನು ಫಿಲಿಪೈನ್ಸ್‍ಗೆ ರಫ್ತು ಮಾಡಲಿದೆ ಎಂದು ಘೋಷಿಸಲಾಗಿದೆ.