ಸಮಗ್ರ ನ್ಯೂಸ್: ಅಯೋಧ್ಯೆಯ ಶ್ರೀರಾಮರ ದರ್ಶನ ಪಡೆದು ರೈಲಿನಲ್ಲಿ ಮರಳಿ ತಮ್ಮೂರಿಗೆ ಭಕ್ತರು ವಾಪಾಸ್ಸಾಗುತ್ತಿದ್ದರು. ಯಾತ್ರಿಕರಿದ್ದ ಬೋಗಿಗೆ ಮೂವರು ಅನ್ಯಕೋಮಿನ ಯುವಕರು ಹತ್ತಿ ಅವರೊಂದಿಗೆ ಕಾರಣವಿಲ್ಲದೆ ವಾಗ್ವಾದಕ್ಕಿಳಿದ್ದಾರೆ. ಮಾತಿನ ಭರದಲ್ಲಿ ಕಿಡಗೇಡಿಗಳು ಬೋಗಿಗೆ ಬೆಂಕಿ ಹಚ್ಚುವ ಧಮ್ಕಿ ಹಾಕಿದ್ದಾರೆ. ಈ ಮಾತಿಂದ ಕೆರಳಿದ ಯಾತ್ರಿಕರು ಒಂದು ಗಂಟೆಗಳ ಕಾಲ ಟ್ರೈನ್ ಸ್ಟಾಪ್ ಮಾಡಿ ಪ್ರತಿಭಟನೆ ಮಾಡಿ ಕಿಡಗೇಡಿಗಳನ್ನ ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ
ಸುಮಾರು 14,00 ಕ್ಕೂ ಹೆಚ್ಚು ಯಾತ್ರಿಕರು ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಿಲ್ದಾಣದಲ್ಲಿ ರೈಲು ನಿಂತಿದೆ. ಈ ವೇಳೆ ಅನ್ಯಕೋಮಿನ ಮೂವರು ಯುವಕರು ಬೋಗಿ ನಂ 2 ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿಯನ್ನ ಹತ್ತಲು ಮುಂದಾಗಿದ್ದಾರಂತೆ. ಯಾತ್ರಿಕರು ಯುವಕರನ್ನ ತಡೆದು ಇದು ಅಯೋಧ್ಯೆ ಯಾತ್ರಿಕರಿಗೆ ಮೀಸಲು ಇರುವ ಬೋಗಿ ಇದರಲ್ಲಿ ತಾವು ಹತ್ತುವ ಹಾಗಿಲ್ಲ ಎಂದು ತಿಳಿ ಹೇಳಿದ್ದಾರೆ. ಆದರೆ ಆ ಯುವಕರು ಯಾತ್ರಿಕರ ಮಾತು ಕೇಳದೆ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.
ಅದೇ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ರೈಲು ಏನು ನಿಮ್ಮ ಅಪ್ಪನ ಮನೆದಲ್ಲ. ಇದಕ್ಕೆ ಬೆಂಕಿ ಹಚ್ಚಿ ಸುಟ್ಟು ಬಿಡುತ್ತೇವೆ ಅಂತಾ ಅಂದಿದ್ದಾರಂತೆ. ಯಾತ್ರಿಕರು ತಕ್ಷಣ ರೈಲ್ವೆ ಪೊಲೀಸ್‌ರನ್ನ ಕರೆಸಿ ಅವರಿಗೆ ಯುವಕರನ್ನ ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಆ ಮೂವರು ಯುವಕರು ಯಾತ್ರಿಕರು ಇರುವ ಈ ಬೋಗಿಗೆ ಬೆಂಕಿ ಹಚ್ಚುತ್ತೆವೆ ಎಂದು ಮತ್ತೆ ಧಮ್ಕಿ ಹಾಕಿದ್ದಾರೆ. ಯಾವಾಗ ಬೋಗಿಗೆ ಬೆಂಕಿ ಹಚ್ಚುತ್ತೇವೆ ಅಂತಾ ಅಂದ್ರು ಆಗಲೇ ಯಾತ್ರಿಕರು ಕೋಪಗೊಂಡಿದ್ದಾರೆ.
ಯುವಕರನ್ನ ಬಂಧಿಸಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ರೈಲ್ವೆ ಪೋಲೀಸರು ಯಾತ್ರಿಕರ ಮುಂದೆ ಅವರನ್ನ ಬಿಟ್ಟು ಕಳಿಸಿದ್ದಾರೆ. ಇದನ್ನ ಗಮನಿಸಿದ ಯಾತ್ರಿಕರು ರೈಲ್ವೆ ಪೋಲಿಸರ ಮೇಲೆ ಆಕ್ರೋಶಗೊಂಡು ಅಯೋಧ್ಯೆ ರೈಲನ್ನು ಸ್ಟಾಪ್ ಮಾಡಿ ಒಂದು ಗಂಟೆಗಳ ಕಾಲ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ನಂತರ ಸ್ಥಳಕ್ಕೆ ವಿಜಯನಗರ ಜಿಲ್ಲೆ ಎಸ್ಪಿ ಶ್ರೀಹರಿಬಾಬು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು, ಕಿಡಿಗೇಡಿಗಳ ಬಂಧಿಸುತ್ತೆವೆ. ಈ ಕೂಡಲೇ ಎಫ್ಐಆರ್ ಹಾಕುತ್ತೇವೆ ಎಂದು ಹೇಳಿದ್ದಾರೆ. ಯಾತ್ರಿಕರ ಮನವೊಲಿಸುವಲ್ಲಿ ಯಶಸ್ವಿಯಾದರು.