Ad Widget .

ಸ್ಕ್ರ್ಯಾಪ್ ವಾಹನದಿಂದ ಮೊಬೈಲ್ ಕ್ಯಾಂಟೀನ್‌|ಇನ್ನುಮುಂದೆ ಡಿಪೋಗಳಿಗೆ ಬರಲಿದೆ ಬಿಎಂಟಿಸಿ ‘ಭೋಜನ ಬಂಡಿ’

ಸಮಗ್ರ ನ್ಯೂಸ್: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೆಲವು ನೌಕರರು ಹಳೆಯ ಸ್ಕ್ರ್ಯಾಪ್​ ಆದ ಬಸ್ ಅನ್ನು ತಮ್ಮ ಸಹೋದ್ಯೋಗಿಗಳಿಗಾಗಿ ಮೊಬೈಲ್ ಕ್ಯಾಂಟೀನ್‌ ಆಗಿ ನವೀಕರಿಸಿದ್ದಾರೆ. ಪೀಣ್ಯ ಮತ್ತು ಯಶವಂತಪುರ ಬಸ್ ಡಿಪೋಗಳಲ್ಲಿ ಈ ಬಸ್​ ಕ್ಯಾಂಟೀನ್ ಸದ್ಯ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ. ಬಸ್ ನಿಲ್ದಾಣಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಿಎಂಟಿಸಿ ನೌಕರರಿಗೆ ಉಪಹಾರ ಮತ್ತು ಮಧ್ಯಾಹ್ನದ ಊಟ ಮಾಡುವುದಕ್ಕೆ ಈ ಕ್ಯಾಂಟೀನ್ ಸಹಕಾರಿಯಾಗಲಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕ್ಯಾಂಟಿನ್​ಗಳು ಇಲ್ಲದ ಬಿಎಂಟಿಸಿ ಡಿಪೋಗಳಿಗೆ ಈ ಮೊಬೈಲ್​ ಕ್ಯಾಂಟೀನ್ ಸಿದ್ಧಪಡಿಸಲಾಗಿದೆ. ಭೋಜನ ಬಂಡಿ ಹೆಸರಿನ ಈ ಬಸ್ ಕ್ಯಾಂಟೀನ್​​ನ್ನು ಹೋಟೆಲ್ ಮಾದರಿಯಲ್ಲೇ ನಿರ್ಮಿಸಲಾಗಿದೆ. ಇದನ್ನು ಬಿಎಂಟಿಸಿ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ನೋಡಿ ಭೋಜನ ಬಂಡಿ. ಸ್ಕ್ರ್ಯಾಪ್ ವಾಹನದಿಂದ ಮೊಬೈಲ್ ಕ್ಯಾಂಟೀನ್‌ವರೆಗೆ ರೂಪಾಂತರಗೊಂಡಿದೆ. ನಮ್ಮ ನುರಿತ ತಾಂತ್ರಿಕ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಉತ್ಸಾಹ ಮತ್ತು ಹೆಮ್ಮೆಯಿಂದ ರಚಿಸಲಾಗಿದೆ. ನಾವೀನ್ಯತೆ ಮತ್ತು ಪಾಕಶಾಲೆಯ ಆನಂದವನ್ನು ಒಟ್ಟಿಗೆ ಆಚರಿಸೋಣ. ಭೋಜನ ಬಂಡಿ ಹೆಮ್ಮೆಯ ಪರಿವರ್ತನೆ ಎಂದು ಹೇಳಿದೆ.

Ad Widget . Ad Widget . Ad Widget .

ಈ ಮೊಬೈಲ್ ಕ್ಯಾಂಟೀನ್ ಊಟ ಸೇವನೆ ಮಾಡುವುದರೊಂದಿಗೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ಮೊಬೈಲ್ ಕ್ಯಾಂಟೀನ್‌ನಲ್ಲಿ ಆಸನ, ಟೇಬಲ್, ಫ್ಯಾನ್ ಮತ್ತು ವಾಶ್ ಬೇಸಿನ್ ಇದೆ. ಇದಲ್ಲದೆ, ಇದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯು ಇದೆ. ಕ್ಯಾಂಟೀನ್‌ನ ಮೇಲ್ಭಾಗದಲ್ಲಿ ಗಾಜಿನ ಕಿಟಕಿ ಹೊಂದಿದ್ದು, ಗಾಳಿ ಮತ್ತು ಬೆಳಕು ಬರುವಂತೆ ವಿನ್ಯಾಸಗೊಳಿಸಲಾಗಿದೆ. ಒಟ್ಟಿನಲ್ಲಿ ವಿಶಿಷ್ಟವಾದ ರೀತಿಯಲ್ಲಿ ನಿರ್ಮಿಸಿದ್ದಾರೆ.

Leave a Comment

Your email address will not be published. Required fields are marked *