Ad Widget .

ಆರ್ಟಿಕಲ್ 370 ಸಿನಿಮಾ ಇಂದು ಬಿಡುಗಡೆ/ ಚಿತ್ರ ವೀಕ್ಷಿಸುವಂತೆ ಬಿಜೆಪಿ ನಾಯಕರಿಂದ ಕರೆ

ಸಮಗ್ರ ನ್ಯೂಸ್: ಯಾಮಿ ಗೌತಮ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಆರ್ಟಿಕಲ್ 370 ಶುಕ್ರವಾರ ಬಿಡುಗಡೆಗೆ ಸಜ್ಜಾಗಿದೆ. ದ ಕೇರಳ ಸ್ಟೋರಿ, ದ ಕಾಶ್ಮೀರ ಫೈಲ್ಸ್, ಉರಿ ದ ಸರ್ಜಿಕಲ್ ಸ್ಟ್ರೈಕ್ ಸಿನಿಮಾಗಳ ಬಳಿಕ ರಾಷ್ಟ್ರೀಯತೆಯ ಭಾವನೆ ಹೊಂದಿರುವ ಮತ್ತೊಂದು ಚಿತ್ರ ಇದಾಗಿದೆ.

Ad Widget . Ad Widget .

ಈ ಸಿನಮಾದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಹೊಗಳಿಕೆಯ ಮಾತುಗಳನ್ನಾಡಿದ್ದು, ಚಿತ್ರವನ್ನು ವೀಕ್ಷಿಸುವಂತೆ ಹಲವು ಬಿಜೆಪಿ ನಾಯಕರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

Ad Widget . Ad Widget .

ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮೋದಿ, ಈ ವಾರ ಆರ್ಟಿಕಲ್ 370 ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಮೂಲಕ ಜಮ್ಮು ಜನರ ಜೈಕಾರಗಳು ಇಡೀ ದೇಶದಲ್ಲಿ ಕೇಳಿಸಲಿದೆ ಎಂದು ಹೇಳಿದ್ದರು.

370ನೇ ವಿಧಿ ರದ್ದತಿಯ ಸಮಯದಲ್ಲಿ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸ್ಥಳೀಯ ಏಜೆಂಟ್ ಪಾತ್ರದಲ್ಲಿ ಯಾಮಿ ಗೌತಮ್ ನಟಿಸಿದ್ದು, ಪ್ರಶಸ್ತಿ ವಿಜೇತ ನಿರ್ದೇಶಕ ಆದಿತ್ಯ ಸುಹಾತ್ ಜಂಭಾಲೆ ಇದನ್ನು ನಿರ್ದೇಶನ ಮಾಡಿದ್ದಾರೆ.

Leave a Comment

Your email address will not be published. Required fields are marked *