ಸಮಗ್ರ ಉದ್ಯೋಗ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 13 ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ನೇಮಕಾತಿ ನಡೆಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಹುದ್ದೆಗೆ ಅರ್ಜಿ ಹಾಕಬಹುದು. ಫೆಬ್ರವರಿ 24, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆಫ್ಲೈನ್ ಮೂಲಕ ಅರ್ಜಿ ಹಾಕಿ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಹುದ್ದೆಯ ಮಾಹಿತಿ:
ಕನ್ಸಲ್ಟೆಂಟ್ (ಡೆಪ್ಯುಟಿ ಡೈರೆಕ್ಟರ್- ಟೆಕ್ನಾಲಜಿ)-3
ಕನ್ಸಲ್ಟೆಂಟ್ (ಅಸಿಸ್ಟೆಂಟ್ ಡೈರೆಕ್ಟರ್- ಟೆಕ್ನಾಲಜಿ)-2
ಕನ್ಸಲ್ಟೆಂಟ್ (ಟೆಕ್ನಿಕಲ್ ಆಫೀಸರ್)- 8
ಶೈಕ್ಷಣಿಕ ಅರ್ಹತೆ:
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಜಿನಿಯರಿಂಗ್ ಪದವಿ, ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 21, 2024ಕ್ಕೆ ಗರಿಷ್ಠ 63 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಕನ್ಸಲ್ಟೆಂಟ್ (ಡೆಪ್ಯುಟಿ ಡೈರೆಕ್ಟರ್- ಟೆಕ್ನಾಲಜಿ)- ಮಾಸಿಕ ₹ 75,000
ಕನ್ಸಲ್ಟೆಂಟ್ (ಅಸಿಸ್ಟೆಂಟ್ ಡೈರೆಕ್ಟರ್- ಟೆಕ್ನಾಲಜಿ)- ಮಾಸಿಕ ₹ 60,000
ಕನ್ಸಲ್ಟೆಂಟ್ (ಟೆಕ್ನಿಕಲ್ ಆಫೀಸರ್)- ಮಾಸಿಕ ₹ 50,000
ಉದ್ಯೋಗದ ಸ್ಥಳ:
ದೆಹಲಿ
ಬೆಂಗಳೂರು
ಮನೇಸರ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ನಿರ್ದೇಶಕರು (HR)
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)
4 ನೇ ಮಹಡಿ
ಬಾಂಗ್ಲಾ ಸಾಹಿಬ್ ರಸ್ತೆ
ಕಾಳಿ ಮಂದಿರದ ಹಿಂದೆ
ಗೋಲ್ ಮಾರ್ಕೆಟ್
ನವದೆಹಲಿ-110001