ಸಮಗ್ರ ನ್ಯೂಸ್: ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವ ಅಂಗವಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿತ್ತು. ಆದರೆ ಘಟಿಕೋತ್ಸವ ದಿನದಂದು ಎಸ್.ಸೋಮನಾಥ್ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬುಧವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ್ದಾರೆ.
ಜಿಎಸ್ಎಲ್ವಿ ಮಾರ್ಕ್ 3 ಲಾಂಚರ್ ರೂಪಿಸುವಲ್ಲಿ ಸೋಮನಾಥ್ ಮುಖ್ಯಪಾತ್ರ ವಹಿಸಿದ್ದರು. ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಪಿಎಸ್ಎಲ್ವಿ (Polar Satellite Launch Vehicle – PSLV) ಉಡಾವಣಾ ವಾಹನ ರೂಪಿಸುವ ತಂಡದಲ್ಲಿ ಟೀಂ ಲೀಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಮೂರು ವರ್ಷ ಕೆಲಸ ಮಾಡಿದ್ದರು. ಬಾಹ್ಯಾಕಾಶ ಆಯೋಗದಲ್ಲಿ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿದ್ದರು. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಜನವರಿ 22, 2018ರಿಂದ ಕಾರ್ಯನಿರ್ವಹಿಸುತ್ತಿದ್ದರು. 2022ರಲ್ಲಿ ಅವರು ಇಸ್ರೋ ಅಧ್ಯಕ್ಷರಾದರು.