Ad Widget .

ಕಳೆಯಿತು ಒಂದು ತಿಂಗಳು/ ಆಯೋಧ್ಯೆಯಲ್ಲಿ ಕಡಿಮೆಯಾಗಿಲ್ಲ ಭಕ್ತರ ಸಂಖ್ಯೆ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿ ಇಂದಿಗೆ ಒಂದು ತಿಂಗಳು ತುಂಬಿದ್ದು, ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಕುಸಿತ ಕಂಡಿಲ್ಲ. ಈಗಲೂ ಪ್ರತಿನಿತ್ಯ 1ರಿಂದ 2 ಲಕ್ಷ ಜನರು ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ ಎಂದು ದೇವಸ್ಥಾನದ ಟ್ರಸ್ಟ್ ಹೇಳಿದೆ.

Ad Widget . Ad Widget .

ಅಯೋಧ್ಯೆಯನ್ನು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಸುಮಾರು 12 ಕಿ.ಮೀ.ವರೆಗೂ ಬಸ್‍ಗಳು ಸಾಲುಗಟ್ಟಿ ನಿಂತಿದ್ದು, ದೇಶದ ವಿವಿಧ ಮೂಲೆಗಳಿಂದ ಸಾಂಪ್ರಾದಾಯಿಕ ಉಡುಗೆಗಳನ್ನು ತೊಟ್ಟ ಲಕ್ಷಾಂತರ ಭಕ್ತರು ನಿತ್ಯವೂ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಅಯೋಧ್ಯೆಯನ್ನು ಸಂಪರ್ಕಿಸುವ ರಸ್ತೆಗಳ ಎಡಭಾಗದಲ್ಲಿ ಭಕ್ತರಿಗೆ ನಡೆದು ಹೋಗಲು ಸಕಲ ವ್ಯವಸ್ಥೆ ಮಾಡಲಾಗಿದೆ.

Ad Widget . Ad Widget .

ಈಗಲೂ ಪ್ರತಿನಿತ್ಯ 1ರಿಂದ 2 ಲಕ್ಷ ಮಂದಿ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಮೊದಲ 10 ದಿನದಲ್ಲೇ ಸುಮಾರು 25 ಲಕ್ಷ ಮಂದಿ ರಾಮನ ದರ್ಶನ ಪಡೆದಿದ್ದರು. ಈವರೆಗೆ ಸುಮಾರು 50ರಿಂದ 60 ಲಕ್ಷ ಮಂದಿ ಅಯೋಧ್ಯೆಗೆ ಭೇಟಿ ನೀಡಿದ್ದಾರೆ ಎಂದು ದೇವಸ್ಥಾನದ ಟ್ರಸ್ಟ್ ಮಾಹಿತಿ ನೀಡಿದೆ

Leave a Comment

Your email address will not be published. Required fields are marked *